GST Exemption: ಹಾಸ್ಟೆಲ್ ಹಾಗೂ PG ಯಲ್ಲಿ ಇರುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಜಾರಿಗೆ ಬಂತು ಹೊಸ GST ನಿಯಮ.
ಹಾಸ್ಟೆಲ್ ಹಾಗೂ ಪಿಜಿ ಬಾಡಿಗೆಯ ಮೇಲೆ GST ವಿನಾಯಿತಿ ನೀಡಲು ಮುಂದಾದ ಕೇಂದ್ರ ಸರ್ಕಾರ.
GST Exemption For Hostel And PG: ಸದ್ಯ ದೇಶದಲ್ಲಿ Goods And Service Tax (GST) ನೆಟ್ವರ್ಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ. ಪ್ರತಿ ತಿಂಗಳು GST ಪಾವತಿ ಮಾಡುವ ಜನರಿಗೆ ಆದಾಯ ಇಲಾಖೆ ಹೊಸ ಹೊಸ ನಿಯಮವನ್ನ ಜಾರಿಗೆ ತರುತ್ತಿರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಸದ್ಯ GST ನಿಯಮದಲ್ಲಿ ಇಂತವರಿಗೆ ವಿನಾಯಿತಿ ನೀಡಲು ಮುಂದಾಗಿದ್ದಾರೆ. ಇನ್ನುಮುಂದೆ ಹೊಸ ನಿಯಮದ ಪ್ರಕಾರ GST ನಿಯಮದಲ್ಲಿ ವಿನಾಯಿತಿ ಪಡೆಯಲು ಸಾಧ್ಯವಾಗುತ್ತದೆ.
ಹಾಸ್ಟೆಲ್ ಹಾಗೂ ಪಿಜಿಯಲ್ಲಿ ಇರುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಪ್ರಸ್ತುತ ಹಾಸ್ಟೆಲ್ ಗಳು ಮತ್ತು ಪಿಜಿ ಬಾಡಿಗೆ ಶೇ. 12 ರಷ್ಟು GST ವಿಧಿಸಲಾಗಿದೆ. ಮುಂದೆ GST ಕೌನ್ಸಿಲಿಂಗ್ ನಡೆಸಿ GST ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಹಣಕಾಸು ಇಲಾಖೆ ನಿರ್ಧರಿಸಿದೆ. ಈಗಾಗಲೇ ಕೇಂದ್ರದಲ್ಲಿ ಹಾಸ್ಟೆಲ್ ಹಾಗೂ ಪಿಜಿ ಬಾಡಿಗೆಯ ಮೇಲೆ GST ವಿನಾಯಿತಿಯನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಸಧ್ಯ ಹಣಕಾಸು ಇಲಾಖೆ ಈ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ್ದು ಈ ಮೂಲಕ ಹಾಸ್ಟೆಲ್ ಹಾಗೂ ಪಿಜಿಯಲ್ಲಿ ಇರುವವರಿಗೆ ಸಿಹಿ ಸುದ್ದಿ ನೀಡಿದೆ.
ಇಂತವರಿಗೆ ಕೇಂದ್ರದಿಂದ GST ವಿನಾಯಿತಿ
ಸಣ್ಣ ಪಿಜಿ ಮತ್ತು ಹಾಸ್ಟೆಲ್ ನಿರ್ವಾಹಕರಿಗೆ ಸಹಾಯವಾಗಲು ಹಣಕಾಸು ಇಲಾಖೆ ಇದೀಗ GST ವಿನಾಯಿತಿ ನೀಡಲು ತೀರ್ಮಾನಿಸಿದೆ. ವಿದ್ಯಾರ್ಥಿಗಳಿಗೆ ಸಹಾಯವಾಗಲು ಕೌನ್ಸಿಲ್ ದಿನಕ್ಕೆ 1000 ರೂ. ಗಳ ಹಾಸ್ಟೆಲ್ ಸುಂಕದ ಮೇಲೆ GST ವಿನಾಯಿತಿಯನ್ನು ನೀಡಿದೆ. ಶಾಶ್ವತ ವಸತಿ ಸೌಕರ್ಯಗಳ ಮೇಲಿನ GST ಕೌನ್ಸಿಲ್ ವಿನಾಯಿತಿ ನೀಡುವ ಸಾಧ್ಯತೆ ಇದೆ. ಬಾಡಿಗೆ ಆದಾಯವನ್ನು ಪಡೆಯುವವರು ಶೇ. 18 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಹಾಸ್ಟೆಲ್ ವಸತಿಗಳಿಗೆ ನೀಡಲಾಗುವ GST ವಿನಾಯಿತಿ ಎಷ್ಟು..?
*ದಿನಕ್ಕೆ 1000 ರೂ. ವರೆಗಿನ ಕೊಠಡಿಗಳಿಗೆ GST ವಿನಾಯಿತಿ ಲಭ್ಯ.
*ದಿನಕ್ಕೆ 1000 ರೂ. ವರೆಗಿನ ಬಾಡಿಗೆ ಅಂಗಡಿಗಳು ಮತ್ತು ವ್ಯವಹಾರಗಳಿಗೆ GST ವಿನಾಯಿತಿ ಲಭ್ಯ
*ಸಮುದಾಯ ಭವನಗಳು ಅಥವಾ ತೆರೆದ ಪ್ರದೇಶಗಳು ದಿನಕ್ಕೆ 10,000 ರೂ. ವರೆಗೆ ಬಾಡಿಗೆ ವಿಧಿಸಿದರೆ GST ಪಾವತಿಸುವ ಅಗತ್ಯ ಇರುವುದಿಲ್ಲ.