GST: ರಾತ್ರೋರಾತ್ರಿ ಜಾರಿಗೆ ಬಂತು ಹೊಸ GST ನಿಯಮ, ಪಾಲಿಸದಿದ್ದರೆ ದಂಡದ ಜೊತೆಗೆ ಜೈಲು.
GST ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ.
GST New Rule From August 1st: ಇತ್ತೀಚಿಗೆ ತೆರೆಗೆ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿವೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (New Financial Year) ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ಈ ಬಾರಿಯ ಹಣಕಾಸು ವರ್ಷವೂ ಬಾರಿ ಹಣದುಬ್ಬರದ ಪರಿಸ್ಥಿಯನ್ನು ನೀಡಿದೆ.
ಇನ್ನು ಹಣಕಾಸು ವರ್ಷದ ಆರಂಭದ ಕಾರಣ ಹಣಕಾಸು ವ್ಯವಹಾರಗಳು ಸಾಕಷ್ಟು ಬದಲಾಗಿವೆ. ಇನ್ನು ಮೇ 1 ರಿಂದ ಕೂಡ ಅನೇಕ ನಿಯಮಗಳು ಬದಲಾಗಲಿವೆ. ಜಿಎಸ್ ಟಿ (GST) ನೆಟ್ವರ್ಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ.
ಪ್ರತಿ ತಿಂಗಳು GST ಪಾವತಿ ಮಾಡುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು GST ಪಾವತಿ ಮಾಡುವ ಜನರು ಈ ಹೊಸ ನಿಯಮ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.
GST ನಿಯಮದಲ್ಲಿ ಮಹತ್ವದ ಬದಲಾವಣೆ
ಪ್ರತಿ ತಿಂಗಳ ಆರಂಭದಲ್ಲಿ ಅನೇಕ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಇದೀಗ ಆಗಸ್ಟ್ ತಿಂಗಳು ಆರಂಭಗೊಂಡಿದೆ. ತಿಂಗಳ ಆರಂಭದಲ್ಲಿಯೇ ಜಿಎಸ್ ಟಿ ನಿಯಮದಲ್ಲಿ ಬಾರಿ ಬದಲಾವಣೆ ತರಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಹೊಸ ನಿಯಮ ಜಾರಿಯಾಗಲಿದೆ.
ಐದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಆಗಸ್ಟ್ 1 ರಿಂದ ಹೊಸ ಜಿಎಸ್ ಟಿ ನಿಯಮ ಜಾರಿಯಾಗಲಿದೆ. ಈ ಮೊದಲು 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆಧಾಯಕ್ಕೆ ಜಿಎಸ್ ಟಿ ನಿಯಮ ಅನ್ವಯವಾಗುತ್ತಿತ್ತು. ಆದರೆ ಇದೀಗ ಅದನ್ನು ಅರ್ಧಕ್ಕೆ ಇಳಿಸಲಾಗಿದೆ.
ಎಲೆಕ್ಟ್ರಾನಿಕ್ ಇನ್ ವಾಯ್ಸ್ ನೀಡುವುದು ಕಡ್ಡಾಯ
ಜಿಎಸ್ ಟಿ ಹೊಸ ನಿಯಮದ ಪ್ರಕಾರ, 5 ಕೋಟಿ ರೂಪಾಯಿಗಳ B2B ವಹಿವಾಟು ಮೌಲ್ಯವನ್ನು ಹೊಂದಿರುವ ಕಂಪನಿಗಳು ಎಲೆಕ್ಟ್ರಾನಿಕ್ ಇನ್ ವಾಯ್ಸ್ ಅನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ. ಜುಲೈ 28 ರಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ ಮಂಡಳಿಯ ಟ್ವೀಟ್ ಮಾಡುವ ಮೂಲಕ ಜಿಎಸ್ ಟಿ ನಿಯಮದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದೆ.
GST ಹೊಸ ನಿಯಮದ ಬಗ್ಗೆ ಸಿಬಿಐ ಟ್ವೀಟ್
ಯಾವುದೇ ಹಣಕಾಸು ವರ್ಷದಲ್ಲಿ ಒಟ್ಟು ವಹಿವಾಟು 5 ಕೋಟಿಗಿಂತ ಹೆಚ್ಚಿರುವ ಜಿಎಸ್ಟಿ ತೆರಿಗೆದಾರರು 1 ಆಗಸ್ಟ್ 2023 ರಿಂದ B2B ಪೂರೈಕೆ ಅಥವಾ ಸರಕು ಅಥವಾ ಸೇವೆಗಳ ರಫ್ತು ಅಥವಾ ಎರಡಕ್ಕೂ E-Invoice ಅನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ ಎಂದು ಸಿಬಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಇನ್ನು B2B ವಹಿವಾಟುಗಳಿಗೆ ಇ – ಇನ್ ವಾಯ್ಸ್ ನೀಡುವ ಮಿತಿಯನ್ನು 10 ಕೋಟಿಯಿಂದ 5 ಕೋಟಿಗೆ ಇಳಿಸಲಾಗಿದೆ. ಇದು ಜಿಎಸ್ ಟಿ ಇಲಾಖೆಗೆ ಆದಾಯವನ್ನು ಹೆಚ್ಚಿಸಲು ಮತ್ತು ತೆರಿಗೆ ಅಕ್ರಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ.