GST: ಪ್ರತಿ ತಿಂಗಳು GST ಕಟ್ಟುವವರಿಗೆ ಹೊಸ ನಿಯಮ, ದಿಡೀರನೆ ಹೊಸ ನಿಯಮ ಘೋಷಸಿದ ಕೇಂದ್ರ ಸರ್ಕಾರ.
GST ನಿಯಮದಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, GST ಪಾವತಿಸುವ ಮುನ್ನ ಈ ನಿಯಮ ತಿಳಿದುಕೊಳ್ಳಿ.
GST New Rules: ಇತ್ತೀಚಿಗೆ ತೆರಿಗೆ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿವೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭಗೊಂಡಿದ್ದು. ಈ ಹಿನ್ನಲೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ಈ ಬಾರಿಯ ಹಣಕಾಸು ವರ್ಷವೂ ಬಾರಿ ಹಣದುಬ್ಬರದ ಪರಿಸ್ಥಿಯನ್ನು ನೀಡಿದೆ. ಇನ್ನು ಹಣಕಾಸು ವರ್ಷದ ಆರಂಭದಲ್ಲಿ ಹಣಕಾಸು ವ್ಯವಹಾರಗಳು ಸಾಕಷ್ಟು ಬದಲಾಗಿವೆ. ಇದೀಗ ಜಿ ಎಸ್ ಟಿ ನಿಯಮದಲ್ಲಿ ಬದಲಾವಣೆ ಆಗಿದೆ.
ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಕಾನೂನು ಸಮಿತಿಯು GSTR -3B ರಿಟರ್ನ್ ನಲ್ಲಿ ITC ಕ್ಲೈಮ್ ಮಾಡಿದ GSTR-B ನಲ್ಲಿ ವರದಿ ಮಾಡಿದ ಮೊತ್ತಕ್ಕಿಂತ ಒಂದು ನಿರ್ದಿಷ್ಟ ಮಿತಿಯನ್ನು ಮೀರಿದರೆ ನೋಂದಾಯಿತ ವ್ಯಕ್ತಿಯು ತೆರಿಗೆ ಪಾವತಿಸಲು ಹೊಣೆಗಾರನಾಗಿರುತ್ತಾನೆ.
ಹೊಸ GST ನಿಯಮಗಳು
ನಾಳೆ ನಡೆಯಲಿರುವ GST ಕಾನ್ಸಿಲ್ ನ 50 ನೇ ಸಭೆಯಲ್ಲಿ ಸಮಿತಿಯ ಶಿಫಾರಸುಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳಬಹುದು. ಪ್ರಸ್ತುತ GSTR -3b ನಲ್ಲಿ ತಮ್ಮ GST ಹೊಣೆಗಾರಿಕೆಯನ್ನು ಇತ್ಯರ್ಥಗೊಳಿಸಲು ವ್ಯಾಪಾರಿಗಳು ತಮ್ಮ ಪೂರೈಕೆದಾರರು ಪಾವತಿಸಿದ ತೆರಿಗೆಯನ್ನು ಬಳಸುತ್ತಾರೆ.
GST ನೆಟ್ ವರ್ಕ್ ಫಾರ್ಮ್ GSTR -2B ಪೂರೈಕೆದಾರರು ಸಲ್ಲಿಸಿದ ಪ್ರತಿ ಡಾಕ್ಯುಮೆಂಟ್ ನಲ್ಲಿ ITC ಯ ಲಭ್ಯತೆ ಅಥವಾ ಅಲಭ್ಯತೆಯನ್ನು ತೋರಿಸುತ್ತದೆ. ನೋಂದಾಯಿತ ವಕ್ತಿಯು ವ್ಯತ್ಯಾಸದ ಬಗ್ಗೆ ತೆರಿಗೆ ಪ್ರಾಧಿಕಾರವನ್ನು ತೃಪ್ತಿಪಡಿಸದ ಹೊರತು ಅಥವಾ ಹೆಚ್ಚುವರಿ ಐಟಿಸಿ ಕ್ಲೈಮ್ ಮಾಡದ ಹೊರತು ಹೊರಗಿನ ಸರಬರಾಜುಗಳ ಮಾಸಿಕ ಹೋಲಿಕೆ ಅಥವಾ ಜಿಎಸ್ ಟಿ ಆರ್ -1 ಅನ್ನು ಸಲ್ಲಿಸಲು ಅನುಮತಿಸಬಾರದು ಎಂದು ಕಾನೂನು ಸಮಿತಿಯು ಹೇಳುತ್ತದೆ.
ನಕಲಿ GST
GST ಅಧಿಕಾರಿಗಳು ಕಳೆದ ತಿಂಗಳು GSTR -1 ನಲ್ಲಿ ಘೋಷಿಸಲಾದ ತೆರಿಗೆ ಹೊಣೆಗಾರಿಕೆ ಮತ್ತು GSTR -3b ನಲ್ಲಿ ಪಾವತಿಸಿದ ತೆರಿಗೆಯ ವ್ಯತ್ಯಾಸದ ಪ್ರಕರಣಗಳಲ್ಲಿ ಇದೆ ರೀತಿಯ ತೆರಿಗೆ ವಂಚನೆಯನ್ನು ಪರಿಶೀಲಿಸಲು ಕ್ರಮಗಳನ್ನು ತೆಗೆದುಕೊಂಡರು. ನಕಲಿ ಇನ್ ವಾಯ್ಸ್ ಪ್ರಕರಣಗಳಿಗೆ ಕಡಿವಾಣ ಹಾಕುವುದು ಈ ಹಂತದ ಉದ್ದೇಶವಾಗಿದೆ. ವಂಚಕರು ಸಾಮಾನ್ಯವಾಗಿ ಸರಕು ಅಥವಾ ಸೇವೆಗಳ ನಿಜವಾದ ಪೂರೈಕೆಯಿಲ್ಲದೆ ITC ಅನ್ನು ತಪ್ಪಾಗಿ ಪಡೆಯಲು ಮಾರ್ಗವನ್ನು ಬಳಸುತ್ತಾರೆ.