Guarantee Scheme: ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದ ಘೋಷಣೆ

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್

Guarantee Scheme Latest Update: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ರಾಜ್ಯ್ದ ಜನತೆ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಸರ್ಕಾರದ ಯೋಜನೆಗಳ ಲಾಭ ಜನರಿಗೆ ತಲುಪುತ್ತಿದ್ದರು ಜನಸಾಮನ್ಯರಿಗೆ ಬೆಲೆ ಏರಿಕೆ ಪರಿಸ್ಥಿತಿ ಎದುರಿಸುವುದು ಕಷ್ಟವಾಗುತ್ತಿದೆ ಎನ್ನಬಹುದು.

ಒಂದೆಡೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವ ಸರ್ಕಾರ, ಅಗತ್ಯ ವಸ್ತುಗಳ ಬೆಲೆ ಏರಿಸಿ ಅದರಿಂದ ಯೋಜನೆಗಳ ಅನುಷ್ಠಾನಕ್ಕಾಗಿ ಹಣ ಹೊಂದಿಸುತ್ತಿದೆ ಎನ್ನುವ ಬಗ್ಗೆ ಜನರು ದೂರುತ್ತಿದ್ದಾರೆ. ಇನ್ನು ಬೆಲೆ ಏರಿಕೆ ಮಾಡುವ ಬದಲು ಉಚಿತ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಜನರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

Guarantee Scheme Latest Update
Image Credit: Karnatakatimes

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್
ಇನ್ನು ರಾಜ್ಯದಲ್ಲಿ ಜಾರಿಯಲ್ಲಿರುವ ಉಚಿತ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪರಿಸ್ಥಿಯನ್ನು ಹದೆಗೆಡಿಸುತ್ತಿದೆ ಎಂದು ವಿರೋಧ ಪಕ್ಷದವರು ಸರ್ಕಾರವನ್ನು ದೂರುತ್ತಿದ್ದಾರೆ. ಪ್ರತಿ ವರ್ಷ ಉಚಿತ ಗ್ಯಾರಂಟಿ ಅನುಷ್ಠಾನಕ್ಕೆ 56 ಸಾವಿರ ಕೋಟಿ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಈ ಹಣದ ವೆಚ್ಚ ಭರಿಸುವುದಕ್ಕೆ ಸರ್ಕಾರಕ್ಕೆ ಕಷ್ಟವಾಗುತ್ತಿದೆ.

ಈ ಹಿನ್ನಲೆ ರಾಜ್ಯದಲ್ಲಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಉಚಿತ ಗ್ಯಾರಂಟಿ ಯೋಜನೆಗಳು ಕೂಡ ಬಂದ್ ಆಗುತ್ತವೆ ಎನ್ನುವ ಮಾತುಗಳು ಕೇಳಿ ಬಂದಿದವರು. ಇದರಿಂದ ಉಚಿತ ಗ್ಯಾರಂಟಿ ಪಡೆಯುವವರು ಬೇಸರಗೊಂಡಿದ್ದರು. ಆದರೆ ಸ್ವತಃ ಸಿದ್ದರಾಮಯ್ಯ ಅವರು ಉಚಿತ ಗ್ಯಾರಂಟಿ ಯೋಜನೆಗಳು ಬಂದ್ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಉಚಿತ ಗ್ಯಾರಂಟಿ ಪಡೆಯುವ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

Congress Guarantee Scheme
Image Credit: Vistaranews

ಸರ್ಕಾರದ ಘೋಷಣೆ
ಇನ್ನು ರಾಜ್ಯದಲ್ಲಿ ಈಗಾಗಲೇ ಅನೇಕ ವಸ್ತುಗಳ ಬೆಲೆಯಲ್ಲೂ ರಾಜ್ಯ ಸರ್ಕಾರ ಹೆಚ್ಚಿಸಿದೆ. ಪೆಟ್ರೋಲ್- ಡೀಸೆಲ್, ಹಾಲಿನ ದರ, ತರಕಾರಿಗಳ ದರ, ಮದ್ಯಪಾನದ ದರ ಸೇರಿ ಅನೇಕ ವಸ್ತುಗಳ ದರ ಏರಿಕೆಯಾಗಿದೆ. ದರ ಏರಿಕೆಯ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಉಚಿತ ಗ್ಯಾರಂಟಿಗಳನು ನಿಲ್ಲಿಸಿ ಬೆಲೆ ಏರಿಕೆಗೆ ಬ್ರೇಕ್  ಹಾಕಿ ಎನ್ನುವ ಮನವಿ ಸರ್ಕಾರ ಮುಂದಿದೆ ಎನ್ನಬಹುದು.

Join Nadunudi News WhatsApp Group

ಆದಾಗ್ಯೂ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವವರೆಗೆ ಉಚಿತ ಗ್ಯಾರಂಟಿ ಯೋಜನೆಗಳು ರದ್ದಾಗುವುದಿಲ್ಲ ಎಂದು ಸರ್ಕಾರ ತನ್ನ ನಿಲುವು ತೋರಿಸುತ್ತಿದೆ. ಇನ್ನು ರಾಜ್ಯ ಸರ್ಕಾರ ಬೆಲೆ  ಏರಿಕೆ ಹಾಗೂ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Congress Guarantee Scheme Update
Image Credit: Hosakannada

Join Nadunudi News WhatsApp Group