Guarantee Scheme: ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಗ್ಯಾರೆಂಟಿ ಹಣ ಜಮಾ ಮಾಡಲು ಸಿದ್ದು ಬಿಗ್ ಪ್ಲ್ಯಾನ್

ಗ್ಯಾರಂಟಿ ಖರ್ಚಿಗಾಗಿ ಹೊಸ ಪ್ಲಾನ್ ಮಾಡಿದ ಸರ್ಕಾರ

Guarantee Scheme New Update: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹೇಳಿದಂತೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸದ್ಯ ರಾಜ್ಯದ ಜನತೆಗೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಗೆ ತಲುಪುತ್ತಿದೆ.

ಇನ್ನು ರಾಜ್ಯ ಸರ್ಕಾರ ಐದು ಉಚಿತ ಗ್ಯಾರಂಟಿಯನ್ನು ನೀಡುವುದಕ್ಕಾಗಿ ವಾರ್ಷಿಕವಾಗಿ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಇಷ್ಟೊಂದು ವೆಚ್ಚವನ್ನು ಭರಿಸಲು ಸರಕಾರಕ್ಕೆ ಕಷ್ಟವಾಗುವುತ್ತಿರುವುದಂತೂ ಸತ್ಯ. ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ವಸ್ತುಗಳ ಬೆಲೆ ಏರಿಕೆಯಾಗುತ್ತದೆ ಎಂದು ಸರ್ಕಾರವನ್ನು ದೂರುತ್ತಿದ್ದಾರೆ.

ಆದಾಗ್ಯೂ, ಸರ್ಕಾರ ಗ್ಯಾರಂಟಿ ಜಾರಿಗಾಗಿ ಎಲ್ಲಿಂದ ಹಣವನ್ನು ತರುತ್ತಿದೆ ಎನ್ನುವ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇದೆ. ಸದ್ಯ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಹಣ ಹೊಂದಿಸಲು ಹೊಸ ಮಾರ್ಗವನ್ನು ಕಂಡುಹಿಡಿದೆ. ಅದೇನು ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Guarantee Scheme New Update
Image Credit: Oneindia

ಗ್ಯಾರಂಟಿ ಖರ್ಚಿಗಾಗಿ ಹೊಸ ಪ್ಲಾನ್ ಮಾಡಿದ ಸರ್ಕಾರ
ಗ್ಯಾರಂಟಿ ಹೊಡೆತದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಪರಿಸ್ತಿಷ್ಠ ಜಾತಿ ಉಪಯೋಜನೆ (SCSP ) , ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗೆಂದು (TSP ) ಮೀಸಲಿಟ್ಟ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬಳಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಹೌದು, ರಾಜ್ಯ ಸರ್ಕಾರ ಇದೀಗ ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಹೊಂದಿಸಲು SCSP ಮತ್ತು TSP ಬಜೆಟ್ ನಲ್ಲಿ ಮೀಸಲಿಟ್ಟ ಒಟ್ಟು ಹಣದಲ್ಲಿ 14282 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲು ಅನುಮತಿ ನೀಡಿದೆ.

ಯಾವ ಗ್ಯಾರಂಟಿಗೆ ಎಷ್ಟು ಹಣ ಮೀಸಲಿಡಲಿದೆ ಸರ್ಕಾರ..?
ಶಕ್ತಿ ಯೋಜನೆ: 1451 ಕೋಟಿ

Join Nadunudi News WhatsApp Group

ಗೃಹ ಲಕ್ಷ್ಮಿ ಯೋಜನೆ: 7881 ಕೋಟಿ.

ಗೃಹ ಜ್ಯೋತಿ ಯೋಜನೆ: 2585 ಕೋಟಿ.

ಅನ್ನ ಭಾಗ್ಯ ನಗದು ಯೋಜನೆ: 2187 ಕೋಟಿ.

ಯುವ ನಿಧಿ ಯೋಜನೆ: 175 ಕೋಟಿ.

Guarantee Scheme Expenditure
Image Credit: Original Source

Join Nadunudi News WhatsApp Group