Gujarat Love Marriage Rules: ದೇಶದಲ್ಲಿ ಇತ್ತೀಚಿಗೆ ಹಲವಾರು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದೀಗ ನಾವು ಮದುವೆಗೆ ಸಂಬಂಧಪಟ್ಟಿರುವಂತಹ ಒಂದು ಹೊಸ ನಿಯಮದ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.ನೀವು ಪ್ರೀತಿಸಿ ಮದುವೆ ಆದರೂ ಅಥವಾ ಮನೆಯವರು ನೋಡಿ ಮಾಡಿರುವಂತಹ ಮದುವೆಯಾದರು ಆ ಮದುವೆಯನ್ನು ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಇದೀಗ ಸರ್ಕಾರ ವಿವಾಹ ನೋಂದಣಿ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ. ಪ್ರೀತಿಸಿ ಮದುವೆಯಾಗುವುದಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಈಗ ಹೊಸ ನಿಯಮ ಜಾರಿಗೆ ತಂದಿದೆ. ಹಾಗಾದರೆ ಆ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಗುಜರಾತ್ ನಲ್ಲಿ ಪ್ರೇಮ ವಿವಾಹ ನೋಂದಣಿಗೆ ಹೊಸ ನಿಯಮ
ಇದೀಗ ಗುಜರಾತ್ ಸರ್ಕಾರ ವಿವಾಹ ನೋಂದಣಿ ಕಾಯ್ದೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇನ್ನುಮುಂದೆ ವಿವಾಹ ನೋಂದಣಿಗೆ ನೋಟಿಸ್ ಮತ್ತು ಅಧಿಕಾರಿ ಅನುಮೋದನೆ ಕಡ್ಡಾಯವಾಗಿದೆ. ಇನ್ನುಮುಂದೆ ಗುಜರಾತ್ ನಲ್ಲಿ ಮದುವೆ ಆಗಿರುವ ಹೊಸ ಜೋಡಿಗಳಿಗೆ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಸಮಾಜದಲ್ಲಿ ಸ್ಥಿರತೆ ಕಾಪಾಡುವುದು ಈ ನಿಯಮದ ಮುಖ್ಯ ಉದ್ದೇಶ ಎಂದು ಸರ್ಕಾರ ಹೇಳಿಕೆ ನೀಡಿದೆ.
ಹೊಸ ನಿಯಮದ ಪ್ರಕಾರ
ಪ್ರೇಮ ವಿವಾಹ ನೋಂದಣಿಗೆ ಕ್ಲಾಸ್-2 ಅಧಿಕಾರಿಯ ಅನುಮೋದನೆ ಕಡ್ಡಾಯವಾಗಿದೆ. ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ ನಂತರ ಜೋಡಿಗಳ ಪಾಲಕರಿಗೆ ಅಧಿಕೃತ ನೋಟಿಸ್ ಕಳುಹಿಸಲಾಗುತ್ತದೆ. ಪಾಲಕರು 30 ದಿನಗಳಲ್ಲಿ ಉತ್ತರ ನೀಡಬೇಕು ಅಥವಾ ಆಕ್ಷೇಪಣೆ ಸಲ್ಲಿಸಬೇಕು. ಈ ನೋಟಿಸ್ ಗೆ ಪಾಲಕರ ಅಪೇಕ್ಷೆ ಬಂದರೆ ಅಧಿಕಾರಿಗಳು ಪರಿಶೀಲನೆ ನೆಡೆಸಿ ನಿರ್ಧಾರ ಕೈಗೊಳ್ಳುತ್ತಾರೆ. ಸರ್ಕಾರದ ಪ್ರಕಾರ, ಈ ನಿಯಮಗಳು ಕುಟುಂಬ ಸಾಮರಸ್ಯ ಕಾಪಾಡುತ್ತವೆ ಮತ್ತು ಯುವಕ-ಯುವತಿಯರನ್ನು ಮೋಸದಿಂದ ರಕ್ಷಿಸುತ್ತವೆ. ಕ್ಯಾಬಿನೆಟ್ ಅನುಮೋದನೆ ಮಾಡಿದರೆ ಮಾತ್ರ ಈ ನಿಯಮ ಜಾರಿಗೆ ಬರುತ್ತದೆ.
ನಿಯಮದ ಹಿನ್ನೆಲೆ
ಪಾಲಕರ ಅನುಮತಿ ಇಲ್ಲದ ವಿವಾಹಗಳು ಸಮಾಜದಲ್ಲಿ ಅಶಾಂತಿ ಮತ್ತು ಅಪರಾಧಕ್ಕೆ ಕಾರಣವಾಗುತ್ತವೆ ಎಂದು ಪಟಿದಾರ್ (ಪಾಟೀದಾರ್) ಮತ್ತು ಠಾಕೂರ್ ಕ್ಷತ್ರಿಯ ಸಮುದಾಯಗಳು ಈ ಬದಲಾವಣೆಗೆ ಮುಖ್ಯ ಒತ್ತಡ ಹೇರಿವೆ. 2023 ರಲ್ಲಿ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಇದೇ ಬೇಡಿಕೆ ಇಟ್ಟಿದ್ದರು. ಅವರು ಪ್ರೇಮ ವಿವಾಹಗಳು ಅಪರಾಧವನ್ನು ಹೆಚ್ಚಿಸುತ್ತವೆ ಎಂದು ಹೇಳಿದ್ದರು. ಈ ಬೇಡಿಕೆಗಳು ಹಲವು ವರ್ಷಗಳಿಂದ ನಡೆಯುತ್ತಿವೆ. ಪಟಿದಾರ್ ಸಮುದಾಯದ ಪ್ರಭಾವಿ ನಾಯಕರು ಪಾಲಕರ ಸಮ್ಮತಿ ಕಡ್ಡಾಯಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.
ಗುಜರಾತ್ ನಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಗುಜರಾತ್ ಸರ್ಕಾರದ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ (http://revenue.gujarat.gov.in/) ಮೂಲಕ ವಿವಾಹ ನೋಂದಣಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಿದ ನಂತರ, ಮದುವೆ ನೋಟಿಸ್ ಅನ್ನು ಕಚೇರಿಯ ನೋಟಿಸ್ ಬೋರ್ಡಿನಲ್ಲಿ 30 ದಿನಗಳ ಕಾಲ ಹಾಕಲಾಗುತ್ತದೆ
- ಈ ಅವಧಿಯಲ್ಲಿ ಆಕ್ಷೇಪ ಸಲ್ಲಿಸಿದರೆ, ವಿವಾಹ ನೋಂದಣಿ ಮುಂದಿನ ಹಂತಕ್ಕೆ ಹೋಗಬಹುದು.
- ನೋಂದಣಿ ಅಧಿಕಾರಿ ನಿಗದಿಪಡಿಸಿದ ದಿನಾಂಕದಂದು ವರ, ವಧು ಮತ್ತು ಇಬ್ಬರು ಸಾಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗಬೇಕು.
- SSLC ಪ್ರಮಾಣಪತ್ರ, ಪಾಸ್ ಪೋರ್ಟ್, ಮತದಾರರ ಐಡಿ, ಭಾವಚಿತ್ರಗಳು, ಮದುವೆಯ ಆಮಂತ್ರಣ ಪತ್ರಿಕೆ, ಮತ್ತು ಆಧಾರ್ ಕಾರ್ಡ್ ಅಗತ್ಯವಾಗಿಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

