ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಆಚಾರ ವಿಚಾರಗಳು ಇದೆ ಮತ್ತು ಅವುಗಳನ್ನ ಪಾಲನೆ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಆಚಾರ ವಿಚಾರಗಳು ನಮ್ಮ ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಾವು ಹಿಂದಿನ ಕಾಲದಿಂದ ಅನುಸರಿಸಿಕೊಂಡು ಬಂದ ಆಚಾರ ವಿಚಾರಗಳ ಹಿಂದೆ ಒಂದು ಪ್ರಮುಖವಾದ ಕಾರಣ ಕೂಡ ಇರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಮಂಗಳವಾರದ ದಿನ ಯಾರು ಕೂಡ ತಲೆಯ ಕೂದಲನ್ನ ಕಟ್ ಮಾಡಿಸಿಕೊಳ್ಳುವುದು ಎಂದು ಹೇಳಬಹುದು ಮತ್ತು ಮಂಗಳವಾರದ ದಿನ ಎಲ್ಲಾ ತಲೆ ಕೂದಲು ಕಟ್ ಮಾಡುವ ಅಂಗಡಿಗಳು ಬಂದ್ ಆಗಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಈಗ ವಿಷಯಕ್ಕೆ ಬರುವುದಾದರೆ ಹೆಚ್ಚಿನ ಜನರಿಗೆ ಮಂಗಳವಾರದ ದಿನ ಯಾಕೆ ತಲೆಯ ಕೂದಲನ್ನ ಕಟ್ ಮಾಡುವುದು ಅನ್ನುವ ಪ್ರಶ್ನೆ ಇದ್ದೆ ಇರುತ್ತದೆ ಎಂದು ಹೇಳಬಹುದು. ಹಾಗಾದರೆ ಮಂಗಳವಾರದ ದಿನ ಯಾಕೆ ತಲೆಯ ಕೂದಲನ್ನ ಕಟ್ ಮಾಡುವುದಿಲ್ಲ ಮತ್ತು ಅದರ ಹಿಂದೆ ಇರುವ ರಹಸ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮಂಗಳವಾರದ ದಿನ ಕುಲದು ಕಟ್ ಮಾಡುವುದಿಲ್ಲ ಮತ್ತು ಬೆರಳಿನ ಉಗುರುಗಳನ್ನ ತೆಗೆಯುವುದು ಮತ್ತು ಮನೆಯಲ್ಲಿ ಕಟ್ಟಿದ ಜೇಡರ ಬಲೆಯನ್ನ ಕೂಡ ತಗೆಯದೇ ಇರುವುದನ್ನ ನಾವು ನೀವೆಲ್ಲ ನೋಡೇ ಇದ್ದೇವೆ ಎಂದು ಹೇಳಬಹುದು.
ಸ್ನೇಹಿತರೇ ಹಿಂದೂ ಪಂಚಾಂಗದಲ್ಲಿ ಪ್ರತಿಯೊಂದು ವಾರಕ್ಕೂ ಅದರದ್ದೇ ಆದ ಮಹತ್ವವನ್ನ ಕೊಡಲಾಗಿದೆ ಅನ್ನುವುದು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತಿಳಿದಿದೆ. ಒಂದೊಂದು ದಿನ ಒಂದೊಂದು ಗ್ರಹ, ಹಾಗೂ ದೇವರಿಗೆ ಸಂಬಂಧಿಸಿದ್ದು. ಆಯಾ ದಿನ ಆ ದೇವರಿಗೆ ಹಾಗೂ ಗ್ರಹಕ್ಕೆ ಮೆಚ್ಚಿಸುವ ಕೆಲಸವನ್ನೇ ಮಾಡುವುದರಿಂದ ಬದುಕಿನಲ್ಲಿ ಶುಭವಾಗುತ್ತದೆ ಎಂದು ನಂಬಿಕೊಂಡು ಬರಲಾಗಿದೆ. ಇನ್ನು ಅದೇ ರೀತಿಯಲ್ಲಿ ಮಂಗಳವಾರ ದುರ್ಗಾಮಾತೆ ಮತ್ತು ಮಹಾಲಕ್ಷ್ಮಿಯ ದಿನವೆಂದು ನಂಬಿಕೊಂಡು ಬರಲಾಗಿದೆ.
ಇನ್ನು ಮಂಗಳವಾರ ಎಂದರೆ ಹೆಸರೇ ಹೇಳುವಂತೆ ಬಹಳ ಮಂಗಳಕರ ದಿನ. ಈ ಶುಭವಾದ ದಿನದಂದು ಕೂದಲು ಕಟ್ ಮಾಡುವುದು ಮತ್ತು ಉಗುರುಗಳನ್ನ ತೆಗೆಯುವುದು ಅಶುಭ ಅನ್ನುವ ಕಾರಣಕ್ಕೆ ಯಾರು ಈ ದಿನದಂದು ಇಂತಹ ಕೆಲಸ ಮಾಡುವುದಿಲ್ಲ. ಸೌಂದರ್ಯ ಸೂಚಕವಾಗಿರುವ ಕೂದಲನ್ನು ಕತ್ತರಿಸುವುದರಿಂದ ಮಂಗಳ ರೂಪಿಣಿಯಾದ ಮಹಾಲಕ್ಷ್ಮಿಗೆ ಅವಮಾನಿಸಿದಂತಾಗುತ್ತದೆ ಮತ್ತು ಹಾಗೊಂದು ವೇಳೆ ಮಾಡಿದರೆ ಅದು ಅಪಶಕುನಕ್ಕೆ ಕಾರಣವಾಗುತ್ತದೆ.
ಇನ್ನು ಇನೂಂದು ಕಾರಣ ಏನು ಅಂದರೆ, ಮಂಗಳ ಕುಜನಿಂದ ಆಳಲ್ಪಡುತ್ತದೆ, ಮಂಗಳ ಕೆಂಪುಗ್ರಹ ಮತ್ತು ಬಹಳ ಬಿಸಿ ಇರುವವನು. ಮನುಷ್ಯನ ದೇಹ ಹಾಗೂ ರಕ್ತವನ್ನು ಪ್ರಭಾವಿಸುವ ಮಂಗಳ ದೇಹದಲ್ಲಾಗುವ ಗಾಯಗಳಿಗೆ ಕಾರಣ. ಅದೂ ಅಲ್ಲದೆ, ಆತ ಸುಖಾಸುಮ್ಮನೆ ಜಗಳ ತಂದಿಡುವುದು, ಸ್ಪರ್ಧೆ ಏರ್ಪಡಿಸುವುದು ಮಾಡುತ್ತಾನೆ. ಹೀಗಾಗಿ ಕೂದಲಿಗೆ ಕತ್ತರಿ ಹಾಕುವ ಸಾಹಸವನ್ನು ಯಾರೂ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ಮತ್ತೊಂದು ನಂಬಿಕೆ ಎಂದರೆ, ಮನುಷ್ಯರ ದೇಹದ ಶಕ್ತಿಯ ಒಂದು ಭಾಗವು ಕೂದಲಿನಲ್ಲಿರುತ್ತದೆ. ಮಂಗಳವಾರ ಕೇಶವನ್ನು ಕತ್ತರಿಸುವುದರಿಂದ ದೇಹದ ಶಕ್ತಿ ನಷ್ಟವಾಗಿ ಕುಜನ ಪ್ರಭಾವ ಬಹಳ ಹೆಚ್ಚುತ್ತದೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.