Hallmark Gold: ಚಿನ್ನ ಖರೀದಿಸುವ ಮತ್ತು ಮಾರಾಟ ಮಾಡುವ ಎಲ್ಲರಿಗೂ ಏಪ್ರಿಲ್ 1 ರಿಂದ ಹೊಸ ನಿಯಮ.

New Rules For Hallmark Gold: ಇದೀಗ ದೇಶದಲ್ಲಿ ಚಿನ್ನ ಖರೀದಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಏಪ್ರಿಲ್ 1 ರಿಂದ ಚಿನ್ನ ಹಾಲ್ ಮಾರ್ಕ್ ಚಿನ್ನದ ಮೇಲೆ ಹೊಸ ನಿಯಮಗಳು ಜಾರಿ ಆಗಲಿದೆ. ಇನ್ನು ಮುಂದೆ ದೇಶದಲ್ಲಿ 6 ಅಂಕಿಯ ಹಾಲ್ ಮಾರ್ಕ್ ಚಿನ್ನ ಮಾರಾಟ ಆಗಲಿದೆ.

Hallmark has been mandated by the central government to buy and sell gold
Image Credit: timesnownews

ಏಪ್ರಿಲ್ 1 ರಿಂದ ಆಭರಣ ವ್ಯಾಪಾರಿಗಳಿಗೆ ಹೊಸ ನಿಯಮ ಜಾರಿ
ಏಪ್ರಿಲ್ ಒಂದರಿಂದ ಆಭರಣ ವ್ಯಾಪಾರ ಮಾಡುವವರು ಆರು ಅಂಕಿಯ ಅಲ್ಪಾನ್ಯೂಮೆರಿಕ್ ಹಾಲ್ ಮಾರ್ಕ್ ವಿಶಿಷ್ಟ ಸಂಖ್ಯೆಯ ಗುರುತಿನ ಸಂಖ್ಯೆ ಎಂದು ಗುರುತಿಸಲಾದ ಚಿನ್ನವನ್ನು ಮಾರಾಟ ಮಾಡಬೇಕು ಎಂದು ಸರಕಾರ ಘೋಷಿಸಿದೆ.

New rule for all gold buyers and sellers from April 1.
Image Credit: youtube

ಹಾಲ್ ಮಾರ್ಕ್ ಗುರುತಿನ ಚಿನ್ನ ಮಾರಾಟ ಮಾಡಲು ಸರ್ಕಾರದಿಂದ ಆದೇಶ
ಸರಕುಗಳ ಗುಣಮಟ್ಟದ ಪ್ರಮಾಣೀಕರಣವನ್ನು ನೋಡಿಕೊಳ್ಳುವ ಭಾರತೀಯ ಸರ್ಕಾರಿ ಸಂಸ್ಥೆಯಾದ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್ ಕಾರ್ಯವನ್ನು ಪರಿಶೀಲಿಸಲು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಬಹುದು.

Hallmark to sell gold from April 1
Image Credit: indiatimes

ಭಾರತದಲ್ಲಿ ಹಾಲ್ ಮಾರ್ಕ್ ಪ್ರಮಾಣಪತ್ರದಿಂದ ಚಿನ್ನವನ್ನು ಶುದ್ಧ ಎಂದು ಪ್ರಮಾಣೀಕರಿಸಲಾಗುತ್ತದೆ. ಜೂನ್ 16, 2021 ರವರೆಗೆ ಚಿನ್ನದ ಹಲ ಮಾರ್ಕ್ ಸ್ವಯಂಪ್ರೇರಿತವಾಗಿತ್ತು. ಮೊದಲು ಅಂತದಲ್ಲಿ 250 ಜಿಲ್ಲೆಯಲ್ಲಿ ಕಡ್ಡಾಯಗೊಳಿಸಲಾಗಿತ್ತು. ಎರಡನೇ ಹಂತದಲ್ಲಿ 32 ಹೆಚ್ಚುವರಿ ಜಿಲ್ಲೆಗಳನ್ನು ಸೇರಿಸಲಾಗಿತ್ತು. ಒಟ್ಟು 288 ಜಿಲ್ಲೆಗಳಿಗೆ ಏರಿಕೆಯಾಗಿದೆ.

The central government has made it mandatory for Hallmark to buy gold from April 1
Image Credit: youtube

ಏರಿಕೆ ಆಗುತ್ತಿರುವ ಚಿನ್ನದ ಬೆಲೆ
ಇತ್ತೀಚಿನ ದಿನದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು ಜನ ಸಾಮಾನ್ಯರು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನದಲ್ಲಿ ಆಭರಣ ಇನ್ನು ಅಧಿಕ ಬೆಲೆಯಲ್ಲಿ ಏರಿಕೆ ಆಗಬಹುದು, ಇದೀಗ ಆಭರಣ ಖರೀದಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ ಆಗಲಿದೆ.

Join Nadunudi News WhatsApp Group

Join Nadunudi News WhatsApp Group