Old Gold Hallmark: ಮನೆಯಲ್ಲಿ ಹಳೆ ಚಿನ್ನ ಇಟ್ಟುಕೊಂಡವರಿಗೆ ಹೊಸ ನಿಯಮ, ಈ ಕೆಲಸ ಮಾಡಿದರೆ ಮಾತ್ರ ಚಿನ್ನಕ್ಕೆ ಬೆಲೆ.

ನಿಮ್ಮ ಬಳಿ ಹಳೆಯ ಚಿನ್ನವಿದ್ದರೆ ಈಗಲೇ ಈ ಕೆಲಸ ಮಾಡುದು ಉತ್ತಮ.

Hallmarking Mandatory For Old Gold: ದೇಶದಲ್ಲಿ ಜುಲೈ ನಿಂದಲೇ ಚಿನ್ನ ಖರೀದಿ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿಯಾಗಿದೆ. Hallmark ಗೆ ಸಂಬಂಧಿಸಿದಂತೆ ಈಗಾಗಲೇ ನಿಯಮಗಳು ಬದಲಾಗಲಿವೆ. ಪ್ರಸ್ತುತ ದೇಶದಲ್ಲಿ Hallmark ಇಲ್ಲದ ಚಿನ್ನಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದು ಎಲ್ಲಾರಿಗೂ ತಿಳಿದಿರಲಿ.

ಸದ್ಯ ಮನೆಯಲ್ಲಿ ಹಳೆ ಚಿನ್ನ ಇಟ್ಟುಕೊಂಡವರಿಗೆ ಹೊಸ ನಿಯಮ ಜಾರಿಯಾಗಿದೆ. ನಿಮ್ಮ ಹಳೆಯ ಚಿನ್ನವನ್ನು ಈ ರೀತಿ ಮಾಡಲಿದ್ದಾರೆ ನಿಮ್ಮ ಚಿನ್ನ ಮೌಲ್ಯವನ್ನು ಕೆಳೆದುಕೊಳ್ಳುತ್ತದೆ. ನಿಮ್ಮ ಬಳಿ ಹಳೆಯ ಚಿನ್ನವಿದ್ದರೆ ಕೂಡಲೇ ಈ ಕೆಲಸವನ್ನು ಮಾಡಿ. ಇಲ್ಲವಾದರೆ ಮುಂದೆ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Hallmarking Mandatory For Old Gold
Image Credit: Economictimes

ಚಿನ್ನ ಖರೀದಿಯಲ್ಲಿ ಹಾಲ್ ಮಾರ್ಕ್ ಕಡ್ಡಾಯ
ಚಿನ್ನ ಖರೀದಿಸುವ ಹಾಗು ಮಾರಾಟ ಮಾಡುವ ಮುನ್ನ ಹಾಲ್ ಮಾರ್ಕ್ ಸಂಖ್ಯೆಯನ್ನು ಹೊಂದಿರುವ ಚಿನ್ನವನ್ನು ಮಾತ್ರ ಖರೀದಿಸಬೇಕು. ನಕಲಿ ಮತ್ತು ಶುದ್ಧ ಚಿನ್ನಗಳ ನಡುವಿನ ವ್ಯತ್ಯಾಸ ಚಿನ್ನ ಖರೀದಿದಾರರಿಗೆ ಹಾಗೂ ಮಾರಾಟಗಾರರಿಗೆ ತಿಳಿಯಲಿ ಎನ್ನುವ ಕಾರಣ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. July 1 ರಿಂದ ದೇಶದದಾದ್ಯಂತ ಚಿನ್ನ ಖರೀದಿ ಮತ್ತು ಮಾರಾಟದಲ್ಲಿ ಹಾಲ್ ಮಾರ್ಕ್ ಚಿನ್ನ ಕಡ್ಡಾಯವಾಗಿದೆ.

ಮನೆಯಲ್ಲಿ ಹಳೆ ಚಿನ್ನ ಇಟ್ಟುಕೊಂಡವರಿಗೆ ಹೊಸ ನಿಯಮ
ಸದ್ಯ ಯಾವುದೇ ರೀತಿಯ ಚಿನ್ನವನ್ನು ಖರೀದಿಸುವಾಗ, ಅದರ ಮೇಲೆ ಹಾಲ್‌ ಮಾರ್ಕ್ ವಿಶಿಷ್ಟ ಗುರುತಿನ (HUID) ಸಂಖ್ಯೆಯನ್ನು ಹೊಂದಿರುವುದು ಅವಶ್ಯಕ. ಹಾಲ್‌ ಮಾರ್ಕಿಂಗ್ ಮೂಲಕ ಚಿನ್ನದ ಪರಿಶುದ್ಧತೆ ಏನೆಂದು ತಿಳಿಯಬಹುದಾಗಿದೆ.

Gold Identification Mark
Image Credit: Vintagetom

ಪ್ರತಿ ಹಾಲ್‌ ಮಾರ್ಕ್ ಮಾಡಿದ ಆಭರಣಗಳು 6 ಅಂಕಿಗಳ HUID ಹೊಂದಿರುತ್ತದೆ. ಹಾಲ್‌ ಮಾರ್ಕಿಂಗ್ ಇಲ್ಲದ ಹಳೆಯ ಆಭರಣಗಳು ನಿಮ್ಮ ಬಳಿ ಇದ್ದರೆ ನೀವು ಅಂತಹ ಆಭರಣಗಳಿಗೆ ಹಾಲ್ ಮಾರ್ಕ್ ಗುರುತು ಹಾಕುವುದು ಕಡ್ಡಾಯವಾಗಿದೆ. ನಿಮ್ಮ ಹಳೆಯ ಚಿನ್ನಕ್ಕೆ ಹಾಲ್ ಮಾರ್ಕ್ ಗುರುತು ಹಾಕಿಸಿದರೆ ಮಾತ್ರ ನಿಮ್ಮ ಚಿನ್ನಕ್ಕೆ ಮೂಲ್ಯ ಇರುತ್ತದೆ.

Join Nadunudi News WhatsApp Group

ಹಾಲ್ ಮಾರ್ಕ್ ಚಿನ್ನದ ಶುಲ್ಕ ಎಷ್ಟಿದೆ
ಸದ್ಯ Bureau of Indian Standards (BIS) ಮಾರ್ಚ್ 4, 2022 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಚಿನ್ನದ ಆಭರಣಗಳಲ್ಲಿನ ಹಾಲ್‌ ಮಾರ್ಕ್ ಶುಲ್ಕವನ್ನು 35 ರೂ.ನಿಂದ 45 ರೂ.ಗೆ ಹೆಚ್ಚಿಸಿದೆ. ಅದೇ ಸಮಯದಲ್ಲಿ, ಇದರ ಬೆಲೆ ಬೆಳ್ಳಿ ಆಭರಣಗಳ ಹಾಲ್‌ ಮಾರ್ಕ್ ಅನ್ನು 25 ರೂ. ನಿಂದ 35 ರೂ. ಗೆ ಹೆಚ್ಚಿಸಲಾಗಿದ್ದು ಚಿನ್ನಾಭರಣಕ್ಕೆ 200 ರೂ. ಗಳ ಸೇವಾ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಬೆಳ್ಳಿ ಆಭರಣಗಳಿಗೆ 150 ರೂ. ವಿಧಿಸಲಾಗಿದೆ.

Join Nadunudi News WhatsApp Group