Harley Davidson: ಹೊಸ ಹಾರ್ಲೆ ಡೇವಿಡ್ಸನ್ ಖರೀದಿಸುವವರಿಗೆ ಬೇಸರದ ಸುದ್ದಿ, ರಾತ್ರೋರಾತ್ರಿ ಕಂಪನಿಯ ಕಠಿಣ ನಿರ್ಧಾರ.
ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಬುಕಿಂಗ್ ನ ಕುರಿತಾಗಿ ಕಂಪನಿಯ ಮಹತ್ವದ ನಿರ್ಧಾರ.
Harley Davidson X440 Booking Halt: ಪ್ರಸ್ತುತ ದೇಶದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ದ್ವಿಚಕ್ರ ವಾಹನ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಹೀರೋ ಮೋಟೊಕಾರ್ಪ್ ಇತ್ತೀಚಿಗೆ ಗ್ರಾಹಕರಿಗೆ ಇಷ್ಟ ಆಗುವ ರೀತಿಯ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ ಹೀರೋ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ನವೀಕರಿಸಿದ ಮಾದರಿಯ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಹೀರೋ ಇಂಡಿಯನ್ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್
ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹೀರೋ ಇದೀಗ ತನ್ನ ಹೊಸ ರೂಪಾಂತರದ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಮೋಟಾರ್ ಸೈಕಲ್ ಮಾರುಕಟ್ಟೆಯಲ್ಲಿ ಸರಿಸುಮಾರು 10,500 ರೂ. ಬೆಲೆಯನ್ನು ಹೆಚ್ಚಿಸಿದೆ.
ಇದೀಗ ಕಂಪನಿಯು ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಬುಕಿಂಗ್ ನ ಕುರಿತಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹಾರ್ಲೆ ಮುಖ್ಯ ಕಾರ್ಯನಿರ್ವಾಹಕರು ಹೊಸ ಮಾದರಿಯ ಪೂರ್ವ ಆರ್ಡರ್ ಗಳು ಕಂಪನಿಯ ನಿರೀಕ್ಷೆಗಳು ಹೆಚ್ಚಿವೆ ಎಂದು ಕಂಪನಿಯು ಹೇಳಿಕೊಂಡಿದೆ.
ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬುಕಿಂಗ್ ಸ್ಥಗಿತ (Harley Davidson X440)
ಪ್ರಸ್ತುತ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಬೆಲೆ 2,29,500 ರೂ. ಆಗಿದೆ. ಇನ್ನು ಜುಲೈ 4 ರಂದು ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಬುಕಿಂಗ್ ಅನ್ನು ಆರಂಭಗೊಳಿಸಲಾಗಿತ್ತು. ಈವರೆಗೆ ಕಂಪನಿಯು 27,597 ಬುಕ್ಕಿಂಗ್ ಸ್ವೀಕರಿಸಿದೆ. ಆದರೆ ಪ್ರಸ್ತುತ ಕಂಪನಿಯು ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ. ಇನ್ನು ಹೊಸ ಬುಕಿಂಗ್ ವಿಂಡೋವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕಂಪನಿಯು ಹೇಳಿಕೊಂಡಿದೆ.
ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ನ ವಿಶೇಷತೆ
ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ವೃತ್ತಾಕಾರದ ಹೆಡ್ ಲ್ಯಾಂಪ್, ಸಿಂಗ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಣ್ಣಿನ ಹನಿಯ ಗಾತ್ರದ ಇಂಧನ ಟ್ಯಾಂಕ್, ವೃತ್ತಾಕಾರದ ಇಂಡಿಗೇಟರ್, ಸ್ಪ್ಲಾಯಿಡ್ ಸ್ಲ್ಯಾಂಗ್ ಎಗ್ಸಾಸ್ಟ್, ರೆಟ್ರೊ ವಿನ್ಯಾಸವನ್ನು ಹೊಂದಿದ್ದು, ಈ ನೂತನ ಬೈಕ್ ನ ನೋಟವು ಬಹಳ ಆಕರ್ಷಣೀಯವಾಗಿದೆ.
ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ನ ಬೆಲೆ
ಮೆಷಿನ್ಡ್ ಅಲಾಯ್ ವೀಲ್, ಎಲ್‌ಸಿಡಿ ಪ್ಯಾನೆಲ್, ಎಲ್‌ಇಡಿ ಲೈಟ್ ಇತ್ಯಾದಿಗಳಿಂದ ಇದು ಆಧುನಿಕ ಲುಕ್ ಹೊಂದಿದೆ. ಹಾರ್ಲೆ ಡೇವಿಡ್ ಸನ್ ಎಕ್ಸ್ 440 ಬೈಕ್ ಸಿಂಗಲ್ ಸಿಲಿಂಡರ್ ಆಯಿಲ್ ಮತ್ತು ಏರ್ ಕೋಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್ 30 BHP ಮತ್ತು 35 ಏನ್ ಎಂ ಟಾರ್ಕ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 2.5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.