Marriage Invitation: ವಿಶೇಷವಾಗಿ ಲಗ್ನ ಪತ್ರಿಕೆ ಹಂಚಿಕ ಹರ್ಷಿಕಾ -ಭುವನ್.
ಹಸೆಮಣೆ ಏರಲು ಸಜ್ಜಾದ ಹರ್ಷಿಕಾ ಪೂಣಚ್ಚ ಹಾಗು ಭುವನ್ ಪೊನ್ನಣ್ಣ.
Harshika Poonacha Marriage Invitation: ಕನ್ನಡ ಚಿತ್ರರಂಗದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ (Harshika Poonacha) ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಚಂದನವನದಲ್ಲಿ ಇತ್ತೀಚಿಗೆ ಗಟ್ಟಿಮೇಳದ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಕಿರು ತೆರೆಯ ಕಲಿವಿದರಿಂದ ಹಿಡಿದು ಬೆಳ್ಳಿ ತೆರೆಯ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇತ್ತೀಚೆಗಷ್ಟೇ ನಟಿ ಹರಿಪ್ರಿಯಾ ವಸಿಷ್ಠ ಸಿಂಹ, ಅತಿಥಿ ಪ್ರಭುದೇವ್, ಯಶಸ್, ಅಭಿಷೇಕ್ ಅಂಬರೀಷ್ ಅವೀವಾ ಮದುವೆ ಚಂದನವನದಲ್ಲಿ ಬಾರಿ ಸದ್ದು ಮಾಡಿತ್ತು.ಇದೀಗ ನಟಿ ಹರ್ಷಿಕಾ ಪೂಣಚ್ಚ ಅವರ ಮದುವೆಯ ಸದ್ದು ಜೋರಾಗಿ ಕೇಳಿ ಬರುತ್ತಿದೆ.
ಇತ್ತೀಚೆಗಷ್ಟೇ ಬಿಗ್ ಬಾಸ್ ಖ್ಯಾತಿಯ ಭುವನ್ (Bhuvan) ಅವರ ಜೊತೆ ನಟಿ ಹರ್ಷಿಕಾ ಪೂಣಚ್ಚ ಮದುವೆಯಾಗುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ಇಬ್ಬರು ಜೋಡಿಯ ಮದುವೆ ದಿನಾಂಕ ಕೂಡ ನಿಯಾಗದಿಯಾಗಿತ್ತು. ಇನ್ನು ನಟಿ ತಮ್ಮ ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯುವುದು ಬಾಕಿ ಇದೆ.
ಹಸೆಮಣೆ ಏರಲು ಸಜ್ಜಾದ ಹರ್ಷಿಕಾ ಪೂಣಚ್ಚ ಹಾಗು ಭುವನ್ ಪೊನ್ನಣ್ಣ
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕೊನೆಗೂ ಹಸೆಮಣೆ ಏರುತ್ತಿದ್ದಾರೆ. ತುಂಬಾ ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು. ಮದುವೆ ವಿಚಾರವಾಗಿ ಇಬ್ಬರು ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಮದುವೆ ಆಮಂತ್ರಣ ನೀಡುವ ಮೂಲಕ ಸತಿಪತಿಯಾಗುತ್ತಿದ್ದಾರೆ.
ಇತ್ತೀಚಿಗಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯಕ್ರಮ ಸರಳವಾಗಿ ನಡೆದಿದೆ. ಎರಡು ಕುಟುಂಬದ ಸದ್ಯಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಜೋಡಿಯ ಆತ್ಮೀಯರು ಸಿನಿಮಾರಂಗದ ನಟ ನಟಿಯರು, ಕಲಾವಿದರು ಸೇರಿದಂತೆ ಇನ್ನಿತರ ಗಣ್ಯರಿಗೆ ಲಗ್ನ ಪತ್ರಿಕೆ ಹಂಚುತ್ತಿದ್ದಾರೆ.
ಆಗಸ್ಟ್ 24 ಕ್ಕೆ ನಡೆಯಲಿದೆ ಹರ್ಷಿಕಾ ಅದ್ದೂರಿ ಮದುವೆ
ನಟಿ ಹರ್ಷಿಕಾ ಪೂಣಚ್ಚ ಅವರ ಮದುವೆ ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧವಾಗಿದೆ. ಕೊಡಗು ಭಾಷೆಯಲ್ಲಿಯೇ ಆಮಂತ್ರಣ ಪತ್ರಿಕೆಯನ್ನು ಮಾಡಲಾಗಿದೆ. ಕೊಡಗು ಸಂಪ್ರದಾಯದಂತೆಯೇ ಇಬ್ಬರು ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲಿಯೇ ನಡೆಯಲಿವೆ. ಇನ್ನು ಈ ಜೋಡಿಯ ಮದುವೆ ಆಗಸ್ಟ್ 24 ಕ್ಕೆ ನಡೆಯಲಿದೆ.
ವಿಶೇಷವಾಗಿ ಲಗ್ನ ಪತ್ರಿಕೆ ಹಂಚಿಕ ಹರ್ಷಿಕಾ -ಭುವನ್
ಇನ್ನು ಹರ್ಷಿಕಾ ಹಾಗೂ ಭುವನ್ ಅವರ ಬಾಲ್ಯದ ಚಿತ್ರವನ್ನು ಲಗ್ನಪತ್ರಿಕೆಯಲ್ಲಿ ಇರಿಸಲಾಗಿದೆ. ಮದುವೆಯ ಮುನ್ನಾ ದಿನವಾದ 23ರಂದು ಕೊಡವ ಸಂಪ್ರದಾಯದ ಊರ್ಕುಡುವ ಸಮಾರಂಭವಿದ್ದರೆ, 24ರ ಬೆಳಿಗ್ಗೆ 10.30ಕ್ಕೆ ಮದುವೆ ಮುಹೂರ್ತ ಇರುವುದಾಗಿ ಲಗ್ನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ವಿಶೇಷವೆಂದರೆ ತಮ್ಮ ತೋಟದಲ್ಲಿ ಬೆಳೆದ ಮೆಣಸು,ಕಾಫಿ ಪೌಡರ್, ಜೇನುತುಪ್ಪದ ಜೊತೆ ಈ ಜೋಡಿ ಲಗ್ನ ಪತ್ರಿಕೆಯನ್ನು ಹಂಚಿದ್ದಾರೆ. ನವ ಜೋಡಿ ಲಗ್ನ ಪತ್ರಿಕೆ ಹಂಚುತ್ತಿರುವ ರೀತಿ ಬಾರಿ ವೈರಲ್ ಆಗುತ್ತಿದೆ.