ಪ್ರಧಾನಿ ಮೋದಿಗೆ ಪತ್ರಬರೆದ ಪಾಕಿಸ್ತಾನ ಆಟಗಾರ ಹಸನ್ ಅಲಿ ಹೆಂಡತಿ, ಪತ್ರದಲ್ಲಿ ಏನಿದೆ ಗೊತ್ತಾ, ದೇಶವೇ ಶಾಕ್ ನೋಡಿ.

ಒಬ್ಬ ಕ್ರಿಕೆಟ್ ಆಟಗಾರ ಅಂದರೆ ಆತನಿಗೆ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಕೂಡ ಅಪಾರವಾದ ಅಭಿಮಾನಿಗಳು ಇರುತ್ತಾರೆ ಎಂದು ಹೇಳಬಹುದು. ಇನ್ನು ಮೊನ್ನೆ ಮೊನ್ನೆತಾನೆ ವಿಶ್ವಕಪ್ ಮುಗಿದಿದ್ದು ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ತಂಡವನ್ನ ಸೋಲಿಸುವುದರ ಮೂಲಕ ಮೊದಲಬಾರಿ 20 ಓವರ್ ಗಳ ವಿಶ್ವಕಪ್ ವಿನಾ ಆದರು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ಭಾರಿ ಪೈಪೋಟಿಯ ಸೆಮಿ ಫೈನಲ್ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಮ್ಯಾಥ್ಯುವ್ ವೇಡ್ ಅವರು ಮೂರೂ ಎಸೆತಕ್ಕೆ ಮೂರೂ ಸಿಕ್ಸ್ ಭಾರಿಸುವುದರ ಮೂಲಕ ತಮ್ಮ ತಂಡಕ್ಕೆ ಗೆಲುವನ್ನ ತಂದುಕೊಟ್ಟರು ಎಂದು ಹೇಳಬಹುದು.

ಈಬಾರಿ ಎಲ್ಲರೂ ಕೂಡ ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು ಪಾಕಿಸ್ತಾನ ವಿಶ್ವಕಪ್ ವಿನ್ ಆಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದರು, ಆದರೆ ಸೆಮಿ ಫೈನಲ್ ನಲ್ಲಿ ಪಾಕಿಸ್ತಾನ ಸೋತಿದ್ದು ಆಸ್ಟ್ರೇಲಿಯಾ ವಿನ್ ಆಗಿದೆ. ಇನ್ನು ಪಾಕಿಸ್ತಾನ ಸೆಮಿ ಸೋಲುತ್ತಿದ್ದಂತೆ ಪಾಕಿಸ್ತಾನ ತಂಡದ ಆಟಗಾರನಾದ ಹಾಸನ್ ಅಲಿ ಹೆಂಡತಿ ಮೋದಿಯವರಿಗೆ ಪತ್ರವನ್ನ ಬರೆದಿದ್ದು ಈ ಪತ್ರವನ್ನ ನೋಡಿ ಇಡೀ ದೇಶವೇ ಶಾಕ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಹಾಸನ್ ಅಲಿ ಹೆಂಡತಿ ಮೋದಿಯವರಿಗೆ ಪತ್ರವನ್ನ ಬರೆದಿದ್ದು ಯಾಕೆ ಆ ಪಾತ್ರದಲ್ಲಿ ಏನಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Hassan ali catch drop

ಹೌದು ಹಿಂದೆಲ್ಲಾ ಅಭಿಮಾನಿಗಳು ತಮ್ಮ ತಂಡ ಸರಿಯಾಗಿ ಪ್ರದರ್ಶನ ನೀಡದಿದ್ದರೆ ಅವರ ಪ್ರತಿಕೃತಿ ದಹಿಸಿ, ಫೋಟೋ, ಫ್ಲೆಕ್ಸ್ ಸುಟ್ಟು ಪ್ರತಿಭಟಿಸಿದ್ದರು. ಆದರೆ ಈಗ ಮೈದಾನದಲ್ಲಿ ಕ್ರಿಕೆಟಿಗರು ಮಾಡುವ ಸಣ್ಣಪುಟ್ಟ ತಪ್ಪುಗಳು ಅವರ ಬದುಕನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಹಾಸನ್ ಅಲಿ ಅವರು ಮ್ಯಾಥ್ಯುವ್ ವೇಡ್ ಅವರ ಕ್ಯಾಚ್ ಬಿಟ್ಟು ಪಂದ್ಯವನ್ನ ಸೋಲಿನ ಸುಳಿಯಲ್ಲಿ ಸಿಲುಕುವಂತೆ ಮಾಡಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಆಕ್ರೋಶವನ್ನ ವ್ಯಕ್ತಪಡಿಸಿದರು. ಇನ್ನು ಇದರ ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ನೀಡಿದ್ದರೆ ಪಂದ್ಯವನ್ನು ಗೆಲ್ಲುತ್ತಾರೆ ಎಂದು ಪಾಕ್ ನಾಯಕ ಬಾಬರ್ ಅಜಮ್ ಕಾಮೆಂಟ್ ಮಾಡಿರುವುದೂ ಕೂಡಾ ಚರ್ಚೆಗೆ ಗ್ರಾಸವಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ಪಾಕಿಸ್ತಾನ ಕ್ರಿಕೆಟಿಗ ಹಸನ್ ಕುಟುಂಬ, ಹೆಂಡತಿ ಹಾಗೂ ಅವರ ಒಂದು ವರ್ಷದ ಕಂದನಿಗೆ ಜನರು ಭಯ ಹುಟ್ಟುವಂತೆ ಟ್ವೀಟ್ ಮತ್ತು ಸಂದೇಶವನ್ನ ಕಳುಹಿಸುತ್ತಿದ್ದು ಸದ್ಯ ಅವರು ಆತಂಕದಲ್ಲಿ ಇದ್ದಾರೆ. ಹಸನ್ ಅಲಿ ಮತ್ತು ಅವರ ಪತ್ನಿ ಸಮಿಯಾ ಅರ್ಜೋ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದರೆ ಎಂದು ಹೇಳಬಹುದು. ಸಾಮಿಯಾ ಅರ್ಜೋ ಮೂಲತಃ ಭಾರತೀಯರಾಗಿದ್ದು ಅಭಿಮಾನಿಗಳು ಈ ಕಾರಣದಿಂದ ಅವರಿಗೆ ಭಯಪಡುವ ಸಂದೇಶ ಹೆಚ್ಚು ಬರುತ್ತಿದ್ದು ಭಾರತ ಸರ್ಕಾರ ನನಗೆ ರಕ್ಷಣೆಯನ್ನ ಕೊಡಬೇಕು ಎಂದು ಸಾಮಿಯಾ ಅರ್ಜೋ ಟ್ವೀಟ್ ನಲ್ಲಿ ಕೇಂದ್ರಕ್ಕೆ ಸಂದೇಶವನ್ನ ಕಳುಹಿಸಿದ್ದಾರೆ.

Join Nadunudi News WhatsApp Group

Hassan ali catch drop

ಕೆಲವು ನಾಚಿಕೆಯಿಲ್ಲದ ಕ್ರಿಕೆಟ್ ಅಭಿಮಾನಿಗಳು ನನ್ನ ಒಂದು ವರ್ಷದ ಮಗಳನ್ನೂ ಬಿಡದೆ ಕಚ್ಚಾಡುತ್ತಿದ್ದಾರೆ ಮತ್ತು ಭಯ ಹುಟ್ಟಿಸುತ್ತಿದ್ದಾರೆ, ಮೇಲಧಿಕಾರಿಗಳಿಂದ ನನಗೆ ರಕ್ಷಣೆಯ ಭರವಸೆ ನೀಡದಿದ್ದರೆ, ನಾನು ಹರಿಯಾಣದಲ್ಲಿರುವ ನಮ್ಮ ಕುಟುಂಬ ಸದಸ್ಯರ ಬಳಿ ಹೋಗುತ್ತೇನೆ. ಭಾರತೀಯ ವಿದೇಶಾಂಗ ಸಚಿವ ಡಾ.ಜೈ ಶಂಕರ್‌ರವರೇ ನಾನು ಭಾರತೀಯನಾಗಿ ನನ್ನ ರಕ್ಷಣೆಯ ಭದ್ರತೆ ಬಗ್ಗೆ ಕಾಳಜಿ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಎಂದು ಸಾಮಿಯಾ ಅರ್ಜೋ ಟ್ವೀಟ್ ಮಾಡಿದ್ದಾರೆ. ನಾನು ಭಾರತೀಯನಾಗಿ ಹುಟ್ಟಿದ್ದಕ್ಕೆ ಹೆಮ್ಮೆಪಡುತ್ತೇನೆ. ಅದೇ ರೀತಿ ಪಾಕಿಸ್ತಾನದ ಜನರಿಗೆ ನಾನು ಯಾವುದೇ ರಾ ಏಜೆಂಟ್ ಅಲ್ಲ. ಅಲ್ಲದೇ ನನ್ನ ಪತಿ ಅವರು ಶಿಯಾ ಧರ್ಮಕ್ಕೆ ಸೇರಿದವರೆಂದು ಉದ್ದೇಶಪೂರ್ವಕವಾಗಿ ಪಂದ್ಯದಲ್ಲಿ ಕ್ಯಾಚ್ ಬಿಡಲಿಲ್ಲ ಎಂದು ಹೇಳುತ್ತಿದ್ದೇನೆ. ದಯವಿಟ್ಟು ನಮ್ಮನ್ನು ಸುರಕ್ಷಿತವಾಗಿರಿಸಿ ಎಂದು ಹೇಳಿಕೊಂಡಿದ್ದಾರೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Join Nadunudi News WhatsApp Group