HDFC Bank: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ (Cyber Crime) ಪ್ರಕರಣಗಳು ಹೆಚ್ಚಾಗಿ ಬೆಳಕಿ ಬರುತ್ತಿವೆ. ಇದೀಗ 6 ಲಕ್ಷ HDFC ಗ್ರಾಹಕರ ಡೇಟಾ, ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ವರದಿಗಳ ಪ್ರಕಾರ ಹ್ಯಾಕರ್ ಗಳು ಜನಪ್ರಿಯ ಸೈಬರ್ ಕ್ರಿಮಿನಲ್ ಫೋರಂ ನಲ್ಲಿ 6 ಲಕ್ಷ ಜನರ ವೈಯಕ್ತಿಕ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದ್ರಲ್ಲಿ ಹೆಸರುಗಳು, ಇಮೇಲ್ ವಿಳಾಸ, ಅಡ್ರೆಸ್ಸ್ ಮಾತು ಸೂಕ್ಷ್ಮ ಹಣಕಾಸು ಡೇಟಾ ಸೇರಿವೆ ಎಂದು ವರದಿ ಹೇಳಿದೆ. ಹ್ಯಾಕರ್ ಗಳು ಬ್ಯಾಂಕ್ ನ ನಕಲಿ ಟ್ವಿಟರ್ ಖಾತೆಯನ್ನು ರಚಿಸಿದ್ದಾರೆ ಮತ್ತು ಬಳಕೆದಾರರ ದೂರುಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ಕೂಡ ಹೇಳಲಾಗಿದೆ.
ಈ ಬಗ್ಗೆ ಕುದ್ದು HDFC ಬ್ಯಾಂಕ್ ನಿಂದ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ. ಆದರೆ ಬ್ಯಾಂಕ್ ಹೇಳುವ ಪ್ರಕಾರ ಗ್ರಾಹಕರ ಡೇಟಾ ಸೋರಿಕೆಯಾಗಿಲ್ಲ.
HDFC ಬ್ಯಾಂಕ್ ಈ ಸಂಬಂಧ ಟ್ವೀಟ್ ಕೂಡ ಮಾಡಿದೆ. HDFC ಬಂಕ್ ನಲ್ಲಿ ಯಾವುದೇ ಡೇಟಾ ಸೋರಿಕೆಯಾಗಿಲ್ಲ ಹ್ಯಾಕ್ರ್ ಗಳು ನಮ್ಮ ಸಿಸ್ಟಮ್ ಅನ್ನು ಪ್ರವೇಶಿಸಿಲ್ಲ.
ಗ್ರಾಹಕರ ಡೇಟಾ ಸುರಕ್ಷತೆ ಅತ್ಯಂತ ಗಂಭೀರವಾದ ವಿಷಯ, ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಖಚಿತಾಪಡಿಸಿಕೊಳ್ಳಲು ಬ್ಯಾಂಕ್ ವ್ಯವಸ್ಥೆಗಳ ಬಗ್ಗೆ ಮೇಲ್ವಿಚಾರಣೆ ಮುಂದುವರಿಸುವುದಾಗಿ ಬ್ಯಾಂಕ್ ಸ್ಪಷ್ಟಪಡಿಸಿದೆ.
ಕಳೆದ ಹಲವು ದಿನಗಳಿಂದ ವಂಚನೆ ನಡೆಯುತ್ತಿರುವ ಬಗ್ಗೆ ಅನೇಕ HDFC ಬ್ಯಾಂಕ್ ಬಳಕೆದಾರರು ದೂರು ನೀಡಿದ್ದಾರೆ. ಹಾಗಾಗಿ ಬ್ಯಾಂಕ್ ಈ ದೂರುಗಳಿಗೆ Twitter ನಲ್ಲಿ ಪ್ರತಿಕ್ರಿಯಿಸಿದೆ. ಪಾನ್ ಕಾರ್ಡ್, KYC ಅಪ್ಡೇಟ್ ಅಥವಾ ಯಾವುದೇ ಇತರ ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಸೂಚಿಸಿದೆ.