HDFC MCLR: HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಮತ್ತೆ ಸಾಲಗಳ ಬಡ್ಡಿದರ ಹೆಚ್ಚಾಗಲಿದೆ.

HDFC ಬ್ಯಾಂಕ್ MCLR ದರವನ್ನ ಹೆಚ್ಚಳ ಮಾಡಿದ ಕಾರಣ ಬ್ಯಾಂಕಿನ ಬಡ್ಡಿದರ ಕೂಡ ಹೆಚ್ಚಳ ಆಗುವ ನಿರೀಕ್ಷೆ ಇದೆ.

HDFC Bank MCLR Rate Hike: ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಇನ್ನು ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಾಂಭಗೊಂಡಿದೆ. ಈ ನಿಟ್ಟಿನಲ್ಲಿ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ವಿವಿಧ ನಿಯಮಗಳನ್ನು ಜಾರಿಗೆ ತಂದಿದೆ.

ಇದೀಗ ದೇಶದಲ್ಲಿಯೇ ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಆದ ಹೆಚ್ ಡಿಎಫ್ ಸಿ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ನೀವು ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ಗ್ರಾಹಕರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ.

HDFC Bank MCLR Rate Hike
Image Source: Business Today

ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಇತ್ತೀಚೆಗಂತೂ ಅನೇಕ ಬ್ಯಾಂಕ್ ಗಳು ತಮ್ಮ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಿಸಿದರೆ ಬ್ಯಾಂಕ್ ಗಳು ಸಾಲದ ಬಡ್ಡಿದರವನ್ನು ಹೆಚ್ಚುಸುತ್ತವೆ. ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಎಂಸಿಎಲ್ಆರ್ (MCLR) ದರವನ್ನು ಹೆಚ್ಚಿಸಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.

ಹೆಚ್ ಡಿಎಫ್ ಸಿ ಬ್ಯಾಂಕ್ MCLR ದರ ಹೆಚ್ಚಳ
ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಮಾರ್ಜಿನಲ್ ಕೋಸ್ಟ್ ಆಫ್ ಫಂಡ್ಸ್ ಬೇಸ್ಡ್ ರೆಟ್ (MCLR) ದರವನ್ನು ಮತ್ತೊಮ್ಮೆ ಹೆಚ್ಚಿಸಲು ನಿರ್ಧರಿಸಿದೆ. ಎಂಸಿಎಲ್ಆರ್ ದರವನ್ನು ಶೇ. 0.05 ರಿಂದ ಶೇ. 0.15 ಗೆ ಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನ ಮೂಲಕ ಮಾಹಿತಿ ನೀಡಿದೆ. ಎಂಸಿಎಲ್ಆರ್ ದರದ ಹೆಚ್ಚಳವು EMI ನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

HDFC Bank MCLR Rate Hike
Image Source: India Today

ಮೇ 8 ರಿಂದ ಹೊಸ MCLR ದರ ಜಾರಿ
ಮೇ 8 ರಿಂದ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಹೊಸ ಎಂಸಿಎಲ್ಆರ್ ದರಗಳು ಜಾರಿಗೆ ಬಂದಿದೆ. ಬ್ಯಾಂಕ್ ನೀಡಿರುವ ವರದಿಗಳ ಪ್ರಕಾರ, ಒಂದು ರಾತ್ರಿಯ ಎಂಸಿಎಲ್ಆರ್ ದರವು 7 .95 % ಏರಿದೆ. ಈ ದರವು ಒಂದು ತಿಂಗಳಿಗೆ 8 .10 % ಮತ್ತು ಮೂರು ತಿಂಗಳಿಗೆ 8 .40 % ಏರಿಕೆಯಾಗುತ್ತದೆ.

Join Nadunudi News WhatsApp Group

ಆರು ತಿಂಗಳ ನಂತರ ಎಂಸಿಎಲ್ಆರ್ ದರವು ಶೇ. 8 .80 ರಷ್ಟು ಏರಿಕೆಯಾಗಿದೆ. MCLR ದರ ಹೆಚ್ಚಳವಾದ ಕಾರಣ ಬೆಂಕಿ ಸಾಲಗಳ ಬಡ್ಡಿದರ ಕೂಡ ಹೆಚ್ಚಳವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

HDFC Bank MCLR Rate Hike
Image Source: Mint

Join Nadunudi News WhatsApp Group