FD Interest: HDFC ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, ಬ್ಯಾಂಕ್ ಬಡ್ಡಿ ದರದಲ್ಲಿ ಬದಲಾವಣೆ
HDFC ಬ್ಯಾಂಕ್ ನಲ್ಲಿ FD ಯೋಜನೆಗಳಿಗೆ ಸಿಗಲಿದೆ ವಿಶೇಷ ಬಡ್ಡಿದರ.
HDFC Bank Interest Rate: ಸಾಮಾನ್ಯವಾಗಿ ಜನರು ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಹೂಡಿಕೆ ಮಾಡುವ ಮೂಲಕ ಹಣದ ಉಳಿತಾಯವನ್ನು ಮಾಡಬಹುದು. ಇನ್ನು ಕೆಲವು ಬ್ಯಾಂಕ್ ಗಳು ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳು ಹೂಡಿಕೆ ಮಾಡಲು ಜನರಿಗೆ ಅವಕಾಶವನ್ನು ನೀಡುತ್ತದೆ.
ಜನಸಾಮಾನ್ಯರು ಹೆಚ್ಚಾಗಿ Fixed Deposit ಮಾಡಲು ಬಯಸುತ್ತಾರೆ. ಇನ್ನು ವಿವಿಧ ರೀತಿಯ ಎಫ್ ಡಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೊದಲು ಅದರ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ. ಇನ್ನು ಸ್ಥಿರ ಠೇವಣಿಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇದೀಗ ದೇಶದ ಈ ಜನಪ್ರಿಯ ಬ್ಯಾಂಕ್ FD ಯೋಜನೆಗಳಿಗೆ ವಿಶೇಷ ಬಡ್ಡಿದರವನ್ನು ಘೋಷಿಸಿದೆ.
HDFC ಬ್ಯಾಂಕ್ ನಲ್ಲಿ FD ಯೋಜನೆಗಳಿಗೆ ಸಿಗಲಿದೆ ವಿಶೇಷ ಬಡ್ಡಿದರ
ನಿಮ್ಮ ಹಣವನ್ನು ಉಳಿತಾಯ ಖಾತೆಗಳಲ್ಲಿ ಅಥವಾ ಸ್ಥಿರ ಠೇವಣಿಗಳಲ್ಲಿ ಇರಿಸಿಕೊಳ್ಳಲು ಬಯಸಿದಾಗ, ಯಾವಾಗಲೂ ಸುರಕ್ಷಿತ ಬ್ಯಾಂಕ್ ಗಳತ್ತ ಗಮನ ಹರಿಸುವುದರ ಜೊತೆಗೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿದರ ನೀಡುತ್ತದೆ ಎನ್ನುವ ಬಗ್ಗೆ ಯೋಚಿಸುತ್ತಾರೆ. ಸದ್ಯ ದೇಶದ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC Bank ನಲ್ಲಿ ಬಡ್ಡಿದರ ಹೆಚ್ಚಿಸಿದೆ. ನೀವು HDFC ಬ್ಯಾಂಕ್ ನಲ್ಲಿ FD ಮಾಡಿದರೆ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು
HDFC ಬ್ಯಾಂಕ್ ಬಡ್ಡಿದರ ಹೆಚ್ಚಳ
ನಿಮ್ಮ ನಿಶ್ಚಿತ ಠೇವಣಿ ಮಾಡಲು ಬಯಸಿದರೆ, ಹೊಸ ನಿಶ್ಚಿತ ಠೇವಣಿ ಬಡ್ಡಿದರಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ HDFC ಬ್ಯಾಂಕ್ ನಲ್ಲಿ ಹೊಸ ನಿಶ್ಚಿತ ಠೇವಣಿ ಮಾಡಬಹುದು. ಇದೀಗ HDFC ಬ್ಯಾಂಕ್ ವಿಶೇಷ ಆವೃತ್ತಿಯ ಸ್ಥಿರ ಠೇವಣಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಗ್ರಾಹಕರು ತಮ್ಮ ಹಣವನ್ನು 2 ವರ್ಷ ಮತ್ತು 11 ತಿಂಗಳವರೆಗೆ ನಿಶ್ಚಿತ ಠೇವಣಿ ಮಾಡಿದರೆ, ಬ್ಯಾಂಕ್ ಅವರಿಗೆ 7.15% ಬಡ್ಡಿದರವನ್ನು ನೀಡುತ್ತದೆ ಎಂದು ಹೇಳಿದೆ.
ಬ್ಯಾಂಕ್ ನೀಡುತ್ತಿದೆ ಇಷ್ಟು ಬಡ್ಡಿದರ
ಗ್ರಾಹಕರು HDFC ಬ್ಯಾಂಕ್ ನಲ್ಲಿ 4 ವರ್ಷ ಮತ್ತು 7 ತಿಂಗಳವರೆಗೆ ಸ್ಥಿರ ಠೇವಣಿ ಮಾಡಿದರೆ ಮಾತ್ರ ಅವರು 7.2% ಬಡ್ಡಿದರವನ್ನು ಪಡೆಯುತ್ತಾರೆ. ಇನ್ನು ಸಾಮಾನ್ಯ ಜನರು 2 ವರ್ಷ 11 ತಿಂಗಳು ಹೂಡಿಕೆ ಮಾಡಿದರೆ, 7.15% ಬಡ್ಡಿಯನ್ನು ಹಾಗೂ ಹಿರಿಯನಾಗರೀಕರಿಗೆ 7.65% ಬಡ್ಡಿಯನ್ನು ನೀಡುತ್ತದೆ. ಇನ್ನು ಸಾಮಾನ್ಯ ಜನರು 4 ವರ್ಷ 7 ತಿಂಗಳು ಹೂಡಿಕೆ ಮಾಡಿದರೆ, ಇನ್ನು 7.20% ಬಡ್ಡಿಯನ್ನು ಹಾಗೂ ಹಿರಿಯ ನಾಗರೀಕರಿಗೆ 7.70 % ಬಡ್ಡಿಯನ್ನು ನೀಡುತ್ತದೆ.