HDFC Bank: HDFC ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಮತ್ತೆ ಬೇಸರದ ಸುದ್ದಿ, ಬಡ್ಡಿ ದರದಲ್ಲಿ ಮತ್ತೆ ಇಷ್ಟು ಹೆಚ್ಚಳ.
HDFC ಬ್ಯಾಂಕ್ ಬಡ್ಡಿದರದಲ್ಲಿ ಏರಿಕೆ, ಬೇಸರಕ್ಕೆ ಕಾರಣವಾದ HDFC ನಿರ್ಧಾರ.
HDFC Bank MCLR Hike: ಇತ್ತೀಚಿಗೆ ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆಗಿರುವ HDFC ವಿಲೀನಗೊಂಡಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಯು ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಇದೀಗ HDFC ಬ್ಯಾಂಕ್ ವಿಲೀನಗೊಂಡ ಬಳಿಕ ಇದೀಗ ಗ್ರಾಹಕರಿಗೆ ಮತ್ತೊಂದು ಆಘಾತ ಎದುರಾಗಿದೆ. ನೀವು ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ಗ್ರಾಹಕರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
HDFC ಬ್ಯಾಂಕ್ ಬಡ್ಡಿದರದಲ್ಲಿ ಏರಿಕೆ
ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ HDFC ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. HDFC ಬ್ಯಾಂಕ್ ಫಂಡ್ ಆಧಾರಿತ ಸಾಲದ ದರವನ್ನು ಅಂದರೆ MCLR ದರಗಳನ್ನು ಹೆಚ್ಚಿಸಿದೆ. ಬ್ಯಾಂಕ್ ಸಾಲದ ಬಡ್ಡಿ ದರವನ್ನು 5 bps ಮತ್ತು ಬೆಂಚ್‌ಮಾರ್ಕ್ PLR ಅನ್ನು 15 bps ಹೆಚ್ಚಿಸಿದೆ. ಆದರೆ ಬ್ಯಾಂಕ್ MCLR ನ ಬೆಂಚ್‌ಮಾರ್ಕ್ ಮಾರ್ಜಿನಲ್ ವೆಚ್ಚವನ್ನು 10 bps ಹೆಚ್ಚಿಸಿದೆ. ಈ ಹೊಸ ದರಗಳು ಅಕ್ಟೋಬರ್ 7 ರಿಂದ ಅನ್ವಯವಾಗುತ್ತವೆ.
HDFC ಬ್ಯಾಂಕ್‌ನ ಹೊಸ MCLR
*HDFC ಬ್ಯಾಂಕ್ ಒಂದು ರಾತ್ರಿಯ MCLR ಶೇಕಡಾ 8 .55 ರಿಂದ ಶೇಕಡಾ 9 .55 ಕ್ಕೆ ಹೆಚ್ಚಿಸಿದೆ.
*HDFC ಬ್ಯಾಂಕ್ ಒಂದು ತಿಂಗಳ MCLR 10 BPS ನಿಂದ 8 .55 ಪ್ರತಿಶತದಿಂದ 8 .65 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.
*HDFC ಬ್ಯಾಂಕ್ 3 ತಿಂಗಳ MCLR 5 BPS ನಿಂದ ಶೇಕಡಾ 8 .80 ರಿಂದ 8 .85 ಕ್ಕೆ ಹೆಚ್ಚಿಸಲಾಗಿದೆ.
*HDFC ಬ್ಯಾಂಕ್ ಅರ್ಧ ವಾರ್ಷಿಕ MCLR ಶೇಕಡಾ 9 .05 ರಿಂದ ಶೇಕಡಾ 9 .10 ಕ್ಕೆ ಹೆಚ್ಚಿಸಲಾಗಿದೆ.
*HDFC ಬ್ಯಾಂಕ್ 1 ವರ್ಷದ MCLR 5 BPS ನಿಂದ 9 .15 ಪ್ರತಿಶತದಿಂದ 9 .20 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.
*HDFC ಬ್ಯಾಂಕ್ 1 ವರ್ಷ ಮತ್ತು 2 ವರ್ಷದ MCLR ಶೇಕಡಾ 9 .20 ಹಾಗೂ 9 .25 ಗೆ ಬದಲಾವಣೆ ಮಾಡಿದೆ.
HDFC ಬ್ಯಾಂಕ್ ನ ಮೂಲ ದರದಲ್ಲಿ ಏರಿಕೆ
HDFC ಬ್ಯಾಂಕ್ ನ ಮೂಲ ದರ ಶೇಕಡಾ 9.25 ಆಗಿದೆ. ಇದನ್ನು ಸೆಪ್ಟೆಂಬರ್ 25 ರಿಂದ ಜಾರಿಗೆ ತರಲಾಗಿದೆ. ಈ ಹಿಂದೆ ಜೂನ್‌ನಿಂದ ಅನ್ವಯವಾಗುತ್ತಿದ್ದ ಮೂಲ ದರದಲ್ಲಿ ಶೇಕಡಾ 9.20 ರಷ್ಟು ಏರಿಕೆಯಾಗಿತ್ತು. HDFC ಬ್ಯಾಂಕ್ ಬೆಂಚ್ ಮಾರ್ಕ್ PLR ವಾರ್ಷಿಕ ಶೇ 17.85 ರಷ್ಟಿತ್ತು. ಇದನ್ನು ಸೆಪ್ಟೆಂಬರ್ 25 ರಿಂದ ಜಾರಿಗೆ ತರಲಾಗಿದೆ. ಜೂನ್ ನಲ್ಲಿ ಬೆಂಚ್ ಮಾರ್ಕ್ ವಾರ್ಷಿಕ 17 .70 ಪ್ರತಿಶತ ಇದಿತ್ತು. ಇನ್ನು MCLR ದರ ಏರಿಕೆಯ ಕಾರಣ ಜನರ ಸಾಲದ ಹೊರೆ ಕೂಡ ಹೆಚ್ಚಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.