HDFC Interest : HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ರಾತ್ರೋರಾತ್ರಿ ಬಡ್ಡಿದರವನ್ನ ಇಷ್ಟು ಹೆಚ್ಚಳ ಮಾಡಿದ HDFC

HDFC ಬ್ಯಾಂಕ್ ತನ್ನ ಬಡ್ಡಿ ದರವನ್ನ ಮತ್ತೆ ಹೆಚ್ಚಳ ಮಾಡಿದೆ.

HDFC Bank MCLR Rate Hike: ದೇಶದಲ್ಲಿ ಜುಲೈ ತಿಂಗಳಿನಲ್ಲಿ HDFC ಬ್ಯಾಂಕ್ ವಿಲೀನಗೊಂಡಿದೆ. ಬ್ಯಾಂಕ್ ವಿಲೀನಗೊಂಡಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿಸಿದೆ. ಬ್ಯಾಂಕ್ ನ ವಿಲೀನ ಪ್ರಕ್ರಿಯೆಯು ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರಿದೆ ಎನ್ನಬಹುದು.

ಸದ್ಯ ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನಗೊಂಡ ಬಳಿಕ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ನೀವು HDFC Bank ಗ್ರಾಹಕರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

HDFC Bank MCLR Hike
Image Credit: BQ Prime

HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ HDFC ತನ್ನ ಗ್ರಾಹಕರಿಗೆ ಇದೀಗ ಶಾಕ್ ನೀಡಿದೆ. HDFC ಬ್ಯಾಂಕ್ ಫಂಡ್ ಆಧಾರಿತ ಸಾಲದ ದರವನ್ನು ಅಂದರೆ MCLR ದರಗಳನ್ನು ಹೆಚ್ಚಿಸಿದೆ. ಬ್ಯಾಂಕ್ ಸಾಲದ ಬಡ್ಡಿ ದರವನ್ನು 5 bps ಮತ್ತು ಬೆಂಚ್‌ಮಾರ್ಕ್ PLR ಅನ್ನು 15 bps ಹೆಚ್ಚಿಸಿದೆ. ಆದರೆ ಬ್ಯಾಂಕ್ MCLR ನ ಬೆಂಚ್‌ ಮಾರ್ಕ್ ಮಾರ್ಜಿನಲ್ ವೆಚ್ಚವನ್ನು 10 bps ಹೆಚ್ಚಿಸಿದೆ.

ಇನ್ನು HDFC ಬ್ಯಾಂಕ್ ತನ್ನ ಬಡ್ಡಿದರವನ್ನು ಹೆಚ್ಚಿಸಿದರೆ ಅದರ ನೇರ ಪರಿಣಾಮ ಬ್ಯಾಂಕ್ ನಲ್ಲಿ ಸಾಲ ಪಡೆದವರ ಮೇಲೆ ಬೀಳುತ್ತದೆ. ಬಡ್ಡಿದರ ಹೆಚ್ಚಳವಾದಂತೆ ಬ್ಯಾಂಕ್ ನ ವೈಯಕ್ತಿಕ ಸಾಲ, ವಾಹನ ಸಾಲ ಹಾಗೂ ಗೃಹ ಸಾಲದ EMI ಹೊರೆ ಸಾಲಗಾರರಿಗೆ ಹೆಚ್ಚುತ್ತದೆ. ಮೊದಲೇ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ಇದೀಗ ಹೆಚ್ಚಿನ ಬಡ್ಡಿದರದ ಪಾವತಿ ಜನರನ್ನು ಇನ್ನಷ್ಟು ಆರ್ಥಿಕವಾಗಿ ಕುಗ್ಗಿಸಲಿದೆ. ಸದ್ಯ HDFC ಬ್ಯಾಂಕ್ ಹೊಸ MCLR ದರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

HDFC bank latest update
Image Credit: Moneycontrol

ರಾತ್ರೋರಾತ್ರಿ ಬಡ್ಡಿದರವನ್ನ ಇಷ್ಟು ಹೆಚ್ಚಳ ಮಾಡಿದ HDFC
*HDFC ಬ್ಯಾಂಕ್ ಒಂದು ರಾತ್ರಿಯ MCLR ಶೇಕಡಾ 0.05 ರಿಂದ ಶೇಕಡಾ 8.65 ಕ್ಕೆ ಹೆಚ್ಚಿಸಿದೆ.

Join Nadunudi News WhatsApp Group

*HDFC ಬ್ಯಾಂಕ್ ಒಂದು ತಿಂಗಳ MCLR 18.65 ಪ್ರತಿಶತದಿಂದ 8.70 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.

*HDFC ಬ್ಯಾಂಕ್ 3 ತಿಂಗಳ MCLR 5 BPS ನಿಂದ ಶೇಕಡಾ 8 .85 ರಿಂದ 8.90 ಕ್ಕೆ ಹೆಚ್ಚಿಸಲಾಗಿದೆ.

*HDFC ಬ್ಯಾಂಕ್ ಅರ್ಧ ವಾರ್ಷಿಕ MCLR ಶೇಕಡಾ 9.10 ರಿಂದ ಶೇಕಡಾ 9.15 ಕ್ಕೆ ಹೆಚ್ಚಿಸಲಾಗಿದೆ.

*HDFC ಬ್ಯಾಂಕ್ 1 ವರ್ಷದ MCLR  9.20 ಪ್ರತಿಶತದಿಂದ 9.25 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.

*HDFC ಬ್ಯಾಂಕ್ 1 ವರ್ಷ ಮತ್ತು 2 ವರ್ಷದ MCLR ಶೇಕಡಾ 9.25 ಹಾಗೂ 9.30 ಗೆ ಬದಲಾವಣೆ ಮಾಡಿದೆ.

Join Nadunudi News WhatsApp Group