HDFC Bank: HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ರಾತ್ರೋರಾತ್ರಿ ಬ್ಯಾಂಕಿನಿಂದ ಬಂದು ದೊಡ್ಡ ಘೋಷಣೆ.

HDFC ಬ್ಯಾಂಕ್ ತನ್ನ ಗ್ರಾಹಕರಿಗೆ ತನ್ನ ಬೇಸರದ ಸುದ್ದಿಯನ್ನ ನೀಡಿದೆ.

HDFC Bank New MCLR: ಇತ್ತೀಚಿಗೆ ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆಗಿರುವ HDFC ವಿಲೀನಗೊಂಡಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಯು ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನಗೊಂಡ ಬಳಿಕ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ನೀವು ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ಗ್ರಾಹಕರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

New MCLR rate implementation for HDFC Bank customers
Image Credit: Bqprime

HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಇತ್ತೀಚೆಗಂತೂ ಅನೇಕ ಬ್ಯಾಂಕ್ ಗಳು ತಮ್ಮ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಿಸಿದರೆ ಬ್ಯಾಂಕ್ ಗಳು ಸಾಲದ ಬಡ್ಡಿದರವನ್ನು ಹೆಚ್ಚಿಸುತ್ತವೆ. ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಎಂಸಿಎಲ್ಆರ್ (MCLR) ದರವನ್ನು ಹೆಚ್ಚಿಸಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.

MCLR ದರ ಹೆಚ್ಚಿಸಿದ ಹೆಚ್ ಡಿಎಫ್ ಸಿ ಬ್ಯಾಂಕ್
ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಮಾರ್ಜಿನಲ್ ಕೋಸ್ಟ್ ಆಫ್ ಫಂಡ್ಸ್ ಬೇಸ್ಡ್ ರೆಟ್ (MCLR) ದರವನ್ನು ಮತ್ತೊಮ್ಮೆ ಹೆಚ್ಚಿಸಲು ನಿರ್ಧರಿಸಿದೆ. ಎಂಸಿಎಲ್ಆರ್ ದರವನ್ನು ಶೇ. 0.05 ರಿಂದ ಶೇ. 0.15 ಗೆ ಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನ ಮೂಲಕ ಮಾಹಿತಿ ನೀಡಿದೆ. ಎಂಸಿಎಲ್ಆರ್ ದರದ ಹೆಚ್ಚಳವು EMI ನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

HDFC Bank has again hiked its interest rates
Image Credit: Forbesindia

ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಆಗಸ್ಟ್ 7 ರಿಂದ ಹೊಸ MCLR ದರ ಜಾರಿ
ಕಳೆದ ತಿಂಗಳಿನಲ್ಲಿಯೇ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಹೊಸ ಎಂಸಿಎಲ್ಆರ್ ದರಗಳು ಜಾರಿಗೆ ಬಂದಿದೆ. ಬ್ಯಾಂಕ್ ನೀಡಿರುವ ವರದಿಗಳ ಪ್ರಕಾರ, ಒಂದು ರಾತ್ರಿಯ ಎಂಸಿಎಲ್ಆರ್ ದರವು 10 ಮೂಲಾಂಕ ಹೆಚ್ಚಳವಾಗುವ ಮೂಲಕ ಶೇ. 8.35 ಕ್ಕೆ ತಲುಪಿದೆ.

Join Nadunudi News WhatsApp Group

ಒಂದು ತಿಂಗಳ MCLR ದರವು 15 ಬಿಪಿಎಸ್ ಹೆಚ್ಚಾಗುವ ಮೂಲಕ 8.45 ತಲುಪಿದೆ. ಮೂರು ತಿಂಗಳ ನಂತರ ಎಂಸಿಎಲ್ಆರ್ ದರವು ಶೇ. 8.95 ಬೇಸಿಸ್ ಪಾಯಿಂಟ್ ಅಷ್ಟು ಹೆಚ್ಚಳವಾಗಿದೆ. ಆರು ತಿಂಗಳ ನಂತರ ಎಂಸಿಎಲ್ಆರ್ ದರವು ಶೇ. 5 ಬೇಸಿಸ್ ಪಾಯಿಂಟ್ ಅಷ್ಟು ಹೆಚ್ಚಳವಾಗಿದೆ.

Join Nadunudi News WhatsApp Group