HDFC Merge: HDFC ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ನಿಯಮ, ಮರ್ಜ್ ಆಗಿದೆ ನಿಮ್ಮ HDFC ಬ್ಯಾಂಕ್.

ವಿಲೀನಗೊಂಡ ಬಳಿಕ HDFC ಬ್ಯಾಂಕ್ ನಿಯಮದಲ್ಲಿ ಬದಲಾವಣೆ.

HDFC Bank Rule After Merge: ಖಾಸಗಿ ವಲಯದ ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ HDFC ಹಾಗೂ ಹೆಚ್ ಡಿಎಫ್ ಸಿ ಲಿಮಿಟೆಡ್ ವಿಲೀನಗೊಂಡಿದೆ. ಜುಲೈ 1 ರಿಂದಲೇ ಈ ವಿಲೀನ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನವೂ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

HDFC ಹಾಗೂ ಹೆಚ್ ಡಿಎಫ್ ಸಿ ಲಿಮಿಟೆಡ್ ಬ್ಯಾಂಕ್ ನ ಗ್ರಾಹಕರು ತಮ್ಮ ಸಾಲಗಳು, ಹೂಡಿಕೆಯ ಯೋಜನೆಗಳು ಮತ್ತು ಬಡ್ಡಿದರಗಳಲ್ಲಿನ ಬದಲಾವಣೆ, ನಿಯಮ ಮತ್ತು ಷರತ್ತುಗಳಲ್ಲಿನ ಬದಲಾವಣೆಯ ಬಗ್ಗೆ ಗ್ರಾಹಕರು ಗೊಂದಲದಲ್ಲಿರುತ್ತಾರೆ.

Transfer of loan accounts to HDFC Bank
Image Credit: Moneycontrol

ವಿಲೀನಗೊಂಡ ಬಳಿಕ HDFC ಬ್ಯಾಂಕ್ ನಿಯಮದಲ್ಲಿ ಬದಲಾವಣೆ
ಬ್ಯಾಂಕ್ ನ ವಿಲೀನ ಪ್ರಕ್ರಿಯೆಯು ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಚಿಂತಿಸುತ್ತಿದ್ದಾರೆ. ಇನ್ನು ವಿಲೀನವೂ ಗ್ರಾಹಕರು ಮತ್ತು ಹೂಡಿಕೆದಾರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು HDFC ಬ್ಯಾಂಕ್ ಅಧಿಕೃತ ಮಾಹಿತಿ ನೀಡಿದೆ. ಇನ್ನು ಜುಲೈ 1 2023 ರಿಂದಲೇ ಬ್ಯಾಂಕ್ ವಿಲೀನವಾಗಲಿದೆ.

ಸಾಲದ ಖಾತೆಗಳು HDFC ಬ್ಯಾಂಕ್ ಗೆ ವರ್ಗಾವಣೆ
HDFC ಹಾಗೂ ಹೆಚ್ ಡಿಎಫ್ ಸಿ ಲಿಮಿಟೆಡ್ ಗ್ರಾಹಕರ ಸಾಲದ ಖಾತೆಯನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಗೆ ವರ್ಗಾಯಿಸಲಾಗುತ್ತದೆ. ಇನ್ನು ಗ್ರಾಹಕರ ಖಾತೆಗೆ ಅನ್ವಯವಾಗುವ ಬಡ್ಡಿ ದರವನ್ನು ಈಗ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (ಆರ್‌ಪಿಎಲ್‌ಆರ್) ಬದಲಿಗೆ ಇಬಿಎಲ್‌ಆರ್ (ಬಾಹ್ಯ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್) ಗೆ ಲಿಂಕ್ ಮಾಡಲಾಗುತ್ತದೆ.

Transfer of loan accounts to HDFC Bank
Image Credit: BQprime

HDFC ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಲಭ್ಯ
ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಹಾಗೂ ಗ್ರಾಹಕರ ಲಾಗಿನ್ ರುಜುವಾತು ಕೂಡ ಬದಲಾಗುವುದಿಲ್ಲ. ವಿಲೀನದ ನಂತರ EMI ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Join Nadunudi News WhatsApp Group

HDFC ಬ್ಯಾಂಕ್ ಹಿರಿಯ ನಾಗರಿಕರಿಗೆ FD ಯೋಜನೆಯಲ್ಲಿ ಹೂಡಿಕೆ ಮಾಡಲು ನವೆಂಬರ್ 7 2023 ರವರೆಗೆ ಗಡುವನ್ನು ವಿಸ್ತರಿಸಿದೆ. ಬ್ಯಾಂಕ್ ವಿಲೀನದ ನಂತರ FD ಹೂಡಿಕೆ ಹಾಗೂ ಬ್ಯಾಂಕ್ ನಿಯಮದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

Join Nadunudi News WhatsApp Group