HDFC Interest Rate: ಹೋಳಿ ಹಬ್ಬದಂದೇ ಗ್ರಾಹಕರಿಗೆ ಶಾಕ್ ನೀಡಿದ HDFC ಬ್ಯಾಂಕ್, ಬಡ್ಡಿದರ ಹೆಚ್ಚಳ.

HDFC Bank Loan Interest Rate: ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಇತೀಚಿಗೆ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಸಾಲದ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದು ಬ್ಯಾಂಕ್ ನಿಂದ ಪಡೆದವರ ಮೇಲೆ ಪರಿಣಾಮ ಬೀರುತ್ತದೆ. ಹೊಸ ಗ್ರಾಹಕರ ಮೇಲು ಪರಿಣಾಮ ಬೀರಲಿದೆ.

HDFC hiked interest rates on consumer loans again
Image Credit: economictimes.indiatimes

ಸಾಲದ ದರ ಹೆಚ್ಚಿಸಿದ ಎಚ್ ಡಿ ಎಫ್ ಸಿ ಬ್ಯಾಂಕ್
ಎಚ್ ಡಿ ಎಫ್ ಸಿ ಬ್ಯಾಂಕ್ ಮಾರ್ಚ್ 7 ರಂದು ಸಾಲದ ದರವನ್ನು ಹೆಚ್ಚಿಸಿದೆ. ಮಾರ್ಜಿನಲ್ ಕಾಸ್ಟ್ ಆಫ್ ಫ್ಯಾನ್ಡ್ ಬೇಸ್ಡ್ ಲೆಂಡಿಂಗ್ ರೇಟ್ ಹೆಚ್ಚಿಸುವ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಂ ಸಿ ಎಲ್ ಆರ್ 5 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಕಂಡಿದೆ. ಇದು ಬ್ಯಾಂಕ್ ಗ್ರಾಹಕರ ಮೇಲೆ ಪಾರಿಣಾಮ ಬೀರಲಿದೆ.

HDFC hiked interest rates again
Image Credit: economictimes.indiatimes

ಸಾಲ ಪಡೆಯುವವರಿಗೆ ವಿಶೇಷ ಸೂಚನೆ
ಹೊಸದಾಗಿ ಸಾಲ ಪಡೆಯುವ ಉದ್ದೇಶ ಹೊಂದಿರುವವರು ಹೆಚ್ಚಿನ ಬಡ್ಡಿಯ ಹೊರೆಯನ್ನು ಹೊರಬೇಕಾಗುತ್ತದೆ. ಇಲ್ಲದಿದ್ದರೆ, ಅವರು ಈಗಾಗಲೇ ಬ್ಯಾಂಕ್ ನಿಂದ ಸಾಲ ಪಡೆದಿದ್ದರೆ, ಅವರ ಮಾಸಿಕ ಇಎಂಐ ಹೆಚ್ಚಾಗುತ್ತದೆ. ಇದು ಇಬ್ಬರ ಮೇಲು ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಬಹುದು. ಅಲ್ಲದೆ ಆರು ತಿಂಗಳ MCLR ಗೆ ಬಂದಾಗ ಇದು 8.8 ಪರ್ಸೆಂಟ್ ಆಗಿ ಮುಂದುವರೆಯುತ್ತಿದೆ.

HDFC Bank increased the loan interest rate on the day of Holi festival
Image Credit: instagram

ವರ್ಷದ ಎಂ ಸಿ ಎಲ್ ಆರ್ ಶೇಕಡಾ 8.95 ಆಗಿದೆ. ಹಾಗೆಯೇ ಎರಡು ವರ್ಷದ ಎಂ ಸಿ ಎಲ್ ಆರ್ ಶೇ.9.05 ಮೂರೂ ವರ್ಷದ ಎಂ ಸಿ ಎಲ್ ಆರ್ ನೋಡಿದರೆ ಶೇ. 9.15 ರಷ್ಟಿದೆ. MCLR ದರ ಹೆಚ್ಚಳದಿಂದಾಗಿ ಬ್ಯಾಂಕ್ ಸಾಲ EMI ಗಳು ಕೂಡ ಹೆಚ್ಚಾಗಬಹುದು. MCLR ದರಕ್ಕೆ ಲಿಂಕ್ ಮಾಡಲಾದ ಸಾಲಗಳಿಗೆ ಇದು ಅನ್ವಯಿಸುತ್ತದೆ. ಬ್ಯಾಂಕುಗಳು MCLR ಜೊತೆಗೆ ಪ್ರೀಮಿಯಂ ಮತ್ತು ಮಾರ್ಜಿನ್ ಅನ್ನು ವಿಧಿಸುತ್ತವೆ.

Join Nadunudi News WhatsApp Group

Join Nadunudi News WhatsApp Group