HDFC MCLR: HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಇನ್ಮುಂದೆ ಕಟ್ಟಬೇಕು ಹೆಚ್ಚು EMI.
HDFC ಗ್ರಾಹಕರಿಗೆ ಬೇಸರದ ಸುದ್ದಿ, MCLR ದರ ಹೆಚ್ಚಳ, ಇನ್ಮುಂದೆ ಕಟ್ಟಬೇಕು ಹೆಚ್ಚು EMI
HDFC MCLR Rate Hike: ಪ್ರಸ್ತುತ 2024 ಆರಂಭವಾಗಿದ್ದು ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿವೆ. ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಪರಿಚಯವಾಗಲಿದೆ. ಇನ್ನು ಹೊಸ ವರ್ಷದಲ್ಲಿ ಹಣಕಾಸಿನ ವಹಿವಾಟುಗಳು ಸಾಕಷ್ಟು ಬದಲಾಗಲಿವೆ. ಬ್ಯಾಂಕ್ ನ ವಹಿವಾಟಿನಲ್ಲಿ ಅನೇಕ ರೀತಿಯ ಬದಲಾವಣೆ ಆಗುವ ಸಾಧ್ಯತೆ ಇದೆ.
ಇನ್ನು ಬ್ಯಾಂಕ್ ಬಡ್ಡಿದರಗಳು ಕೂಡ ವ್ಯತ್ಯಾಸವಾಗಬಹುದು. ಸದ್ಯ ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಇದೀಗ ತನ್ನ ಗ್ರಾಹಕರಿಗೆ ಹೊಸ ವರ್ಷದ ಎರಡನೇ ವಾರದಲ್ಲಿ ಬೇಸರದ ಸುದ್ದಿಯೊಂದನ್ನು ನೀಡಿದೆ. ಇನ್ನುಮುಂದೆ HDFC ಬ್ಯಾಂಕ್ ನಿಯಮಗಳು ಬದಲಾಗಲಿವೆ. ನೀವು HDFC Bank ಗ್ರಾಹಕರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
HDFC ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ HDFC ತನ್ನ ಗ್ರಾಹಕರಿಗೆ ಇದೀಗ ಶಾಕ್ ನೀಡಿದೆ. HDFC ಬ್ಯಾಂಕ್ ಫಂಡ್ ಆಧಾರಿತ ಸಾಲದ ದರವನ್ನು ಅಂದರೆ MCLR ದರಗಳನ್ನು ಹೆಚ್ಚಿಸಿದೆ. ಇನ್ನು HDFC ಬ್ಯಾಂಕ್ ತನ್ನ ಬಡ್ಡಿದರವನ್ನು ಹೆಚ್ಚಿಸಿದರೆ ಅದರ ನೇರ ಪರಿಣಾಮ ಬ್ಯಾಂಕ್ ನಲ್ಲಿ ಸಾಲ ಪಡೆದವರ ಮೇಲೆ ಬೀಳುತ್ತದೆ.
ಮೊದಲೇ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ಇದೀಗ ಹೆಚ್ಚಿನ ಬಡ್ಡಿದರದ ಪಾವತಿ ಜನರನ್ನು ಇನ್ನಷ್ಟು ಆರ್ಥಿಕವಾಗಿ ಕುಗ್ಗಿಸಲಿದೆ. ಬ್ಯಾಂಕ್ ಗಳು MCLR ಅನ್ನು ನಿರ್ಧರಿಸುವಾಗ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ರೆಪೊ ದರದಲ್ಲಿನ ಬದಲಾವಣೆಗಳು MCLR ದರದ ಮೇಲೆ ಪರಿಣಾಮ ಬೀರುತ್ತವೆ. ಸದ್ಯ HDFC ಬ್ಯಾಂಕ್ ನ ಹೊಸ MCLR ದರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
HDFC ಗ್ರಾಹಕರು ಇನ್ಮುಂದೆ ಕಟ್ಟಬೇಕು ಹೆಚ್ಚು EMI
•HDFC ಬ್ಯಾಂಕ್ ಒಂದು ರಾತ್ರಿಯ MCLR ಅನ್ನು 10 BPS ನಿಂದ 8.80 ಶೇಕಡಾದಿಂದ 8.90 ಶೇಕಡಕ್ಕೆ ಹೆಚ್ಚಿಸಲಾಗಿದೆ.
•HDFC ಬ್ಯಾಂಕ್ ಒಂದು ತಿಂಗಳ MCLR ಅನ್ನು 5 BPS ನಿಂದ 8.75 ಶೇಕಡಾದಿಂದ 8.80 ಶೇಕಡಕ್ಕೆ ಹೆಚ್ಚಿಸಲಾಗಿದೆ.
•HDFC ಬ್ಯಾಂಕ್ 3 ತಿಂಗಳ MCLR 5 BPS ನಿಂದ ಶೇಕಡಾ 8.95 ರಿಂದ 9 ಕ್ಕೆ ಹೆಚ್ಚಿಸಲಾಗಿದೆ.
•HDFC ಬ್ಯಾಂಕ್ ಅರ್ಧ ವಾರ್ಷಿಕ MCLR ಕೇವಲ 9.20 ಕ್ಕೆ ಹೆಚ್ಚಿಸಲಾಗಿದೆ.
•HDFC ಬ್ಯಾಂಕ್ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ MCLR 9.20 ಪ್ರತಿಶತದಿಂದ 9 .25 ಪ್ರತಿಶತ ನಿಗದಿಮಾಡಲಾಗಿದೆ.
•HDFC ಬ್ಯಾಂಕ್ 3 ವರ್ಷ ಕ್ಕಿಂತ ಹೆಚ್ಚಿನ ಅವಧಿಗೆ MCLR ಶೇಕಡಾ 9.30 ಕ್ಕೆ ನಿಗದಿಪಡಿಸಲಾಗಿದೆ.