Heart Attack: ಈ ಗುಂಪಿನ ರಕ್ತ ಇದ್ದವರಿಗೆ ಹೃದಯಾಘಾತದ ಸಮಸ್ಯೆ ಹೆಚ್ಚು, ಅಧ್ಯಯನದಿಂದ ಬಹಿರಂಗ.
ಈ ಗುಂಪಿನ ರಕ್ತ ಇದ್ದವರಿಗೆ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತದೆ.
Heart Attack: ಹೃದಯ ನಮ್ಮ ದೇಹದ ಮುಖ್ಯ ಅಂಗವಾಗಿದೆ. ಹೃದಯವು (Heart) ಮುಷ್ಟಿಯ ಗಾತ್ರದ ಅಂಗವಾಗಿದ್ದು ಅದು ನಿಮ್ಮ ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುತ್ತದೆ. ಇದು ನಿಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರಾಥಮಿಕ ಅಂಗವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗಿ ಹೆಚ್ಚಿನ ಜನರು ಸಾವನಪ್ಪಿರುದು ಕೇಳಿಬರುತ್ತಿದೆ.
Heart Attack
ಹೃದಯಾಘಾತವು ಹೃದಯ ರಕ್ತದ ಹರಿವನ್ನು ನಿರ್ಬಂಧಿಸಿದಾಗ ಸಾಮಾನ್ಯವಾಗಿ ಸಂಭವಿಸುತ್ತದೆ. ಹೃದಯಾಘಾತವು ಶಾಶ್ವತ ಹೃದಯ ಹಾನಿ ಮತ್ತು ಸಾವಿಗೆ ಕಾರಣವಾಗುತ್ತದೆ. ರಕ್ತದೊತ್ತಡವು ಸಾಮಾನ್ಯಕ್ಕಿಂತ ಕಡಿಮೆಯಿದ್ದಾಗ ಹೃದಯ ಮತ್ತು ದೇಹದ ಇತರ ಪ್ರಮುಖ ಅಂಗಗಳಿಗೆ ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ. ಇದು ದೀರ್ಘಕಾಲದ ವರೆಗೆ ಮುಂದುವರಿದರೆ ಹೃದಯದ ಸ್ನಾಯುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ.
ಈ ಗುಂಪಿನ ರಕ್ತ ಇದ್ದವರಿಗೆ ಹೃದಯಾಘಾತದ ಸಮಸ್ಯೆ ಹೆಚ್ಚು
ಇದೀಗ ಅಧ್ಯಯನದಿಂದ ರಕ್ತದ ಗುಂಪಿನ ಆಧಾರದ ಮೇಲೆ ಯಾವ ಜನರು ಹೆಚ್ಚಿನ ಹೃದಯ ರೋಗದ ಸಮಸ್ಯೆ ಅನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಸಂಶೋಧಕರ ಪ್ರಕಾರ ಹೃದಯಾಘಾತ ರಕ್ತದ ಗುಂಪಿಗೆ ಸಂಬಂಧಿಸಿದೆ. ಅಧ್ಯಯನದ ಪ್ರಕಾರ A ಮತ್ತು B ರಕ್ತದ ಗುಂಪಿನವರಿಗೆ ಹೆಚ್ಚಾಗಿ ಹೃದಯ ರೋಗ ಸಂಭವಿಸುತ್ತದೆ.
O ರಕ್ತದ ಗುಂಪಿನವರಿಗೆ ಹೃದಯ ರೋಗ ಸಮಸ್ಯೆ ಕಡಿಮೆ ಇರುತ್ತದೆ. ಏಕೆಂದರೆ O ರಕ್ತಕ್ಕಿಂತ A ಹಾಗೂ B ರಕ್ತದ ಗುಂಪಿನ ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಅಧ್ಯಯನಲ್ಲಿ ತಿಳಿಸಿದ ಪ್ರಕಾರ ಹೃದಯಾಘಾತ ಮತ್ತು ಹೃದಯ ವೈಫಲ್ಯದ ಅಪಾಯ ಬೇರೆ ಗುಂಪಿನವರಿಗೆ ಹೋಲಿಸಿದರೆ O ರಕ್ತದ ಗುಂಪಿನವರಲ್ಲಿ ಶೇಕಡಾ 10ರಷ್ಟು ಕಡಿಮೆ ಇರುತ್ತದೆಯಂತೆ.