Google Crome: ಗೂಗಲ್ ಕ್ರೋಮ್ ಅಲ್ಲಿ ಸರ್ಚಿಂಗ್ ಸ್ಪೀಡ್ ಹೆಚ್ಚಾಗಿಸಲು ಇಲ್ಲಿದೆ ಮಾಹಿತಿ
Google Crome: ಸಾಮನ್ಯವಾಗಿ ಎಲ್ಲರೂ ಗೂಗಲ್ ಕ್ರೋಮ್ ಅನ್ನು ಬಳಸುತ್ತಾರೆ.ಗೂಗಲ್ ಕ್ರೋಮ್ ಅಲ್ಲಿ ಸರ್ಚಿಂಗ್ ಸ್ಪೀಡ್ (Searching Speed) ಹೆಚ್ಚಾಗಿಸಲು ಈಗ ಹೊಸ ವಿಧಾನಗಳು ಬಂದಿವೆ.ಯಾವುದಾದರು ವಿಷಯದ ಬಗ್ಗೆ ಸರ್ಚ್ ಮಾಡಬೇಕಾದರೆ ತುಂಬಾ ಸಮಯ ತಗೆದುಕೊಳ್ಳುತ್ತದೆ.ಕಾಯುವ ತಾಳ್ಮೆ ಇಲ್ಲದೆ ಅದನ್ನು ರಿಫ್ರೆಶ್(Refresh) ಮಾಡುತ್ತ ಹೋಗುದನ್ನು ನೀವು ಗಮನಿಸಿರುತ್ತೀರಿ.ಆದರೆ ಇದೀಗ ಗೂಗಲ್ ಇದೀಗ ಹೊಸ ಮಾರ್ಗ ಒಂದನ್ನು ಪರಿಚಯಿಸಿದೆ.
ನಿಮ್ಮ ಸರ್ಚಿಂಗ್ ಸ್ಪೀಡ್ ಮಾಡಲು ಇದೀಗ ಗೂಗಲ್(Google) ಹೊಸ ಫೀಚರ್ ಅನ್ನು ಪರಿಚಯಿಸಿದೆ.ಸೆಡ್ ಬಾರ್ ವಿಶೇಷತೆಯನ್ನು ಬಳಸುದರಿಂದ ನೀವು ನಿಮ್ಮ ಸರ್ಚಿಂಗ್ಅನ್ನು ಸ್ಪಿಫ್ಡ್ ಮಾಡಿಕೊಳ್ಳಬಹುದು.ಟೆಕ್ ಕಂಪನಿಯು ಬಳಕೆದಾರರಿಗೆ ವೈಶಿಷ್ಟ್ಯವನ್ನು ಹೇಗೆ ಬಳಸುವುದು ಎಂದು ಸಹ ತಿಳಿಸಿದೆ.
ಗೂಗಲ್ ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯ ಗಳನ್ನೂ ಪರಿಚಯಿಸುತ್ತ,ಬಳಕೆದಾರರಿಗೆ ತಮ್ಮ ಮಾರ್ಗ ವನ್ನು ಸುಲಬಗೊಳಿಸುತ್ತಿದೆ. ಪ್ರಸ್ತುತ ಪರಿಚಯಿಸಿರುವ ಫೀಚರ್ ಕ್ರೋಮ್ ಬಳಕೆದಾರರಿಗೆ ತಮ್ಮ ಸರ್ಚಿಂಗ್ ಸ್ಪೀಡ್ ಅನ್ನು ಹೆಚ್ಚಿಸುತ್ತದೆ.ಹೌದು !ಹೊಸ ಟ್ಯಾಬ್ ಅನ್ನು ತೆರೆಯದೆಯೇ ಅಥವಾ ಹೊಸ ಪುಟವನ್ನು ಇನ್ಪುಟ್ ಮಾಡಿದ ನಂತರ ಹಿಂದಿನ ಪುಟಕ್ಕೆ ಹಿಂತಿರುಗದೆಯೇ ಹುಡುಕಾಟವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಗೂಗಲ್ ಕ್ರೋಮ್ ತನ್ನ ಬ್ರೌಸರ್ ಗೆ ಹೊಸ ನವೀಕರಣವನ್ನು ಹೊರತಂದಿದೆ.
ಗೂಗಲ್ ಕ್ರೋಮ್ ನಿಂದ ಸೈಡ್ ಬಾರ್ ಫೀಚರ್:
ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಮೈಕ್ರೋಸಾಫ್ಟ್ ತನ್ನ ಸ್ವಂತ ಬ್ರೌಸರ್ ಎಡ್ಜ್ ಗೆ ಇದೆ ರೀತಿಯ ವೈಶಿಷ್ಟ್ಯ ವನ್ನು ಪರಿಚಯಿಸಿದ ಕೆಲವೇ ತಿಂಗಳ ನಂತರ ಗೂಗಲ್ ಕ್ರೋಮ್ ಸೈಡ್ ಬಾರ್ ವೈಶಿಷ್ಟ್ಯ ವನ್ನು ಪರಿಚಯಿಸಿದೆ.
ನಿಮ್ಮ ಹುಡುಕಾಟವನ್ನು ವೇಗಗೊಳಿಸುತ್ತದೆ ಸೈಡ್ ಬಾರ್
ಗೂಗಲ್ ಕ್ರೋಮ್ ಪರಿಚಯಿಸಿರುವ ಹೊಸ ಸೈಡ್ ಬಾರ್ ಹುಡುಕಾಟದಲ್ಲಿ ಪಲಿತಾಂಹ್ಸಗಳನ್ನು ಹುಡುಕುವ ಪುಟ ಮತ್ತು ಹುಡುಕಾಟ ಫಲಿತಾಂಶಗಳು ಸೂಚಿಸುವ ವಿವಿಧ ವೆಬ್ ಪುಟಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸದೆಯೇ ಹುಡುಕಾಟ ಫಲಿತಾಂಶ ವನ್ನು ವೇಗವಾಗುತ್ತದೆ ಮತ್ತು ಸುಲಭವಾಗಿಸುತ್ತದೆ.
ಹೊಸ ಫೀಚರ್ ಅನ್ನು ಬಳಸುವುದು ಹೇಗೆ:
ಟೆಕ್ ಕಂಪನಿಯು ಬಳಕೆದಾರರಿಗೆ ವೈಶಿಷ್ಟ್ಯವನ್ನು ಹೇಗೆ ಬಳಸುವುದು ಎಂದು ಸಹ ವಿವರಿಸಿದೆ.
ವಿಳಾಸ ಬಾರ್ ನಲ್ಲಿ ನೀವು ಬಯಸಿದ ಹುಡುಕಾಟವನ್ನು ಟೈಪ್ ಮದ್ಫಲು ನಿಮಗೆ ಅನುಮತಿಸುವ ಮೂಲಕ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದೆ.
ನಂತರ ನೀವು ವಿಳಾಸ ಪಟ್ಟಿಯ ಬಲಭಾಗದಲ್ಲಿರುವ ಗೂಗಲ್ “ಜಿ” ಲೋಗೋ ಅನ್ನು ಕ್ಲಿಕ್ ಮಾಡಿ ಮತ್ತು ಸೈಡ್ ಪ್ಯಾನೆಲ್ ನಲ್ಲಿ ಹುಡುಕಾಟವನ್ನು ತೆರೆಯಿರಿ ಆಯ್ಕೆ ಮಾಡಿ. ಇದು ನಿಮ್ಮ ಸರ್ಚ್ ಫಲಿತಾಂಶವನ್ನು ಬ್ರೌಸರ್ ನ ಬಲಭಾಗದಲ್ಲಿರುವ ಸೈಡ್ ಪ್ಯಾನೆಲ್ ನಲ್ಲಿ ತೆರೆಯುತ್ತದೆ.ಮತ್ತು ನಿಮ್ಮ ಪ್ರಸ್ತುತ ಟ್ಯಾಬ್ ನ ವಿಷಯವು ಎಡಭಾಗದಲ್ಲಿ ತೆರೆದಿರುತ್ತದೆ ಎಂದು ಹೇಳಿದೆ.
ಸರ್ಚ್ ಇನ್ ಸೈಡ್ ಬಾರ್:
ನೀವು ಬ್ರೌಸರ್ ನಲ್ಲಿ ಪಠ್ಯವನ್ನು ಹೈಲೈಟ್ ಮಾಡಿ,ಬಲ ಕ್ಲಿಕ್ ಮಾಡಿ ಮತ್ತು ನಂತರ ಸರ್ಚ್ ಇನ್ ಸೈಡ್ ಬಾರ್ ಆಯ್ಕೆ ಮಾಡುವುದು. ಹಿಂದಿನ ಬಟನ್ ಅನ್ನು ಕ್ಲಿಕ್ ಮಾಡದೆಯೇ ಹುಡುಕಾಟ ಫಲಿತಾಂಶವನ್ನು ತ್ವರಿತವಾಗಿ ಹೋಲಿಸಲು ಬಳಕೆದಾರರು ಸೈಡ್ ಪ್ಯಾನೆಲ್ ಅನ್ನು ಮತ್ತಷ್ಟು ವಿಸ್ತರಿಸಬಹುದು.ಈ ರೀತಿಯಿಂದಲೂ ನೀವು ಸೈಡ್ ಬಾರ್ ಗೆ ಎಂಟ್ರಿ ನೀಡಬಹುದು.
ಗೂಗಲ್ ನಷ್ಟು ಪರಿಣಾಮಕಾರಿ ಆಗಿಲ್ಲ ಮೈಕ್ರೋಸಾಫ್ಟ್ ಹೊರತಂದ ಫೀಚರ್.
ಹೌದು !ಮೈಕ್ರೋಸಾಫ್ಟ್ ತನ್ನ ಎಡ್ಜ್ ಬ್ರೌಸರ್ ನಲ್ಲಿ ಸೈಡ್ ಬಾರ್ ಅನ್ನು ಸೆಪ್ಟೆಂಬರ್ ನಲ್ಲಿ ಪರಿಚಯಿಸಿತು. ಆ ಹೊಸ ಸೈಡ್ ಬಾರ್ ಬಳಕೆದಾರರಿಗೆ ಮತ್ತೊಂದು ಟ್ಯಾಬ್ ತೆರೆಯದೆಯೇ ತಮ್ಮ ಬ್ರೌಸರ್ನಲ್ಲಿ ಅಕ್ಕಪಕ್ಕದ ಪರಿಕರಗಳು ಮತ್ತು ವೈಶಿಷ್ಟ್ಯಗಳನ್ನು ಪ್ರವೇಶಿಸಲು ಅನುಮತಿಸುತ್ತದೆ.ಆದರೆ ಈ ಫೀಚರ್ ಗೂಗಲ್ ನಷ್ಟು ಪರಿಣಾಮಕಾರಿ ಆಗಿಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.