Ads By Google

Vande Bharath Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಯಾರಿಸಲು ಎಷ್ಟು ಹಣ ಖರ್ಚಾಗಿದೆ, ಮಾಹಿತಿ ಇಲ್ಲಿದೆ.

Vande Bharat Express Train Cost

Image Source: Mint

Ads By Google

Vande Bharat Express Train Cost: ದೇಶದಲ್ಲಿ ಲಕ್ಷಾಂತರ ಜನ ರೈಲಿನಲ್ಲಿಯೇ ದಿನವೂ ಪ್ರಯಾಣ ಮಾಡುತ್ತಾರೆ. ಜನರ ಪ್ರಯಾಣ ಸುಖಕರವಾಗಿರಲು ರೈಲು ನಿರಂತರವಾಗಿ ಆಧುನಿಕ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. ಹೀಗೆ ಅತ್ಯುತ್ತಮ ಆಧುನಿಕ ಸೌಲಭ್ಯಗಳ ಜೊತೆಗೆ ವೇಗವಾಗಿಯೂ ಇರುವಂತಹ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೇಶದಲ್ಲಿ ಆರಂಭವಾಗಿದ್ದು ಸಾಮಾನ್ಯ ರೈಲುಗಳಿಗಿಂತ ವಿಭಿನ್ನವಾಗಿದೆ.

ದೇಶದಲ್ಲಿ 13 ಮಾರ್ಗಗಳಲ್ಲಿ ಒಂದೇ ಭಾರತ ರೈಲು ಆರಂಭಿಸಲಾಗಿದೆ. ಈ ಸೆಮಿ ಹೈ ಸ್ಪೀಡ್ ಇಂಜಿನ್(High Speed Engine) ರಹಿತ ರೈಲನ್ನು ತಯಾರಿಸಲು ವೆಚ್ಚ ಎಷ್ಟಾಗಿದೆ? ಪ್ರತಿ ತಿಂಗಳ ಗಳಿಕೆ ಎಷ್ಟಿದೆ ಗೊತ್ತಾ?

Image Source: India Today

ಒಂದೇ ಭಾರತ್ ರೈಲು ತಯಾರಿಸಲು ಎಷ್ಟು ವ್ಯಯಿಸಿದೆ ಸರ್ಕಾರ?

ವರದಿಯ ಪ್ರಕಾರ ಒಂದೇ ಭಾರತ್ ಎಕ್ಸ್ ಪ್ರೆಸ್ ರೈಲು ತಯಾರಿಸಲು 110 ರಿಂದ 120 ಕೋಟಿ ವೆಚ್ಚ ಮಾಡಲಾಗಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಚೆನ್ನೈ, ಜನರಲ್ ಮ್ಯಾನೇಜರ್ ಆಗಿರುವ ಎ. ಕೆ ಅಗರ್ವಾಲ್ 16 ಭೋಗಿಗಳ ಇಂಜಿನ್ ರಹಿತ ಸೆಮಿ ಹೈ ಸ್ಪೀಡ್ ಒಂದೇ ಭಾರತ್ ರೈಲನ್ನು ನಿರ್ಮಾಣ ಮಾಡಲು 120 ಕೋಟಿ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

Image Source: ANI News

ಸಾಮಾನ್ಯ ಟ್ರೈನ್ ನಿರ್ಮಾಣಕ್ಕೆ ತಗುಲುವ ವೆಚ್ಚ ಎಷ್ಟು?

ಸುಮಾರು 24 ಭೋಗಿಗಳಿರುವ ದೇಶದ ಸಾಮಾನ್ಯ ರೈಲು ತಯಾರಿಸಲು 66 ಕೋಟಿ ವೆಚ್ಚವಾಗುತ್ತದೆ ಎಂದು ವರದಿ ಹೇಳಿದೆ. ಸಾಮಾನ್ಯ ರೈಲಿಗೆ ಇಂಜಿನ್ ತಯಾರಿಸಲು ಸರಾಸರಿ 18 ಕೋಟಿ ವೆಚ್ಚವಾಗುತ್ತದೆ. ಒಂದು ಭೋಗಿಯ ವೆಚ್ಚ ಸುಮಾರು ಎರಡು ಕೋಟಿ. ಹಾಗಾಗಿ 24 ಭೋಗಿಗಳ ಸಾಮಾನ್ಯ ರೈಲು ತಯಾರಿಸಲು 66 ಕೋಟಿ ರೂಪಾಯಿ ಖರ್ಚಾಗುತ್ತದೆ.

Image Source: DNA

ಒಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ತಿಂಗಳ ಗಳಿಕೆ ಎಷ್ಟು?

ದೇಶಾದ್ಯಂತ 13 ಮಾರ್ಗಗಳಲ್ಲಿ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗಿದೆ. ಪ್ರತಿ ಮಾರ್ಗದ ರೈಲಿನ ದರ ವಿಭಿನ್ನವಾಗಿದೆ. ಉದಾಹರಣೆಗೆ ದೆಹಲಿಯಿಂದ ವಾರಣಾಸಿ ಮಾರ್ಗದಲ್ಲಿ ಚಲಿಸುವ ವಂದೇ ಭಾರತ್ ರೈಲು ಪ್ರತಿ ತಿಂಗಳಿಗೆ ಸರಾಸರಿ ಏಳು ಕೋಟಿ ರೂಪಾಯಿ ಗಳಿಸುತ್ತದೆ. ಅದೇ ರೀತಿ ಕಳೆದ ಫೆಬ್ರುವರಿಂದ ಆರಂಭಿಸಲಾಗಿರುವ ಮುಂಬೈ ಸೋಲಾಪುರ್ ಹಾಗೂ ಮುಂಬೈ ಸಾಯಿ ನಗರ ಶಿರಡಿ ಮಾರ್ಗದಲ್ಲಿ ಚಲಿಸುವ ಒಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ತಿಂಗಳಿಗೆ 8.6 ಕೋಟಿ ಗಳಿಕೆ ಮಾಡುತ್ತದೆ.

Image Source: Mint
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field