Hero Diwali Offer: ಈ ಹೀರೋ ಬೈಕ್ ಗಳ ಮೇಲೆ ದೀಪಾವಳಿ ಹಬ್ಬದ ಭರ್ಜರಿ ಡಿಸ್ಕೌಂಟ್ ಘೋಷಣೆ, ಬೈಕ್ ಜೊತೆಗೆ ಗಿಫ್ಟ್ ಕೂಡ ಸಿಗಲಿದೆ.
ಹೀರೋ ಕಂಪನಿ ತನ್ನ ಬೈಕ್ ಗಳ ದೀಪಾವಳಿ ಹಬ್ಬದ ಡಿಸ್ಕೌಂಟ್ ಘೋಷಣೆ ಮಾಡಿದೆ.
Hero Bike Diwali Offer: ಸದ್ಯ ಹಬ್ಬದ ಸೀಸನ್ ಆರಂಭಗೊಂಡಿದೆ. ನಡ ಹಬ್ಬ ದಾಸ್ರ ಬೆನ್ನಲ್ಲೇ ದೀಪಾವಳಿ ಕೂಡ ಬರುತ್ತಿದೆ. ಈ ಹಬ್ಬದ ವಿಶೇಷಕ್ಕೆ ಇಲೆಕ್ಟ್ರಾನಿಕ್ ವಸ್ತುಗಳು, ವಾಹನಗಳು ಸೇರಿದಂತೆ ಯಾವುದೇ ವಸ್ತುವಿನ ಖರೀದಿಗೆ ಎಲ್ಲ ಕಂಪನಿಗಳು ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ.
ಸದ್ಯ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Hero ಇದೀಗ ತನ್ನಾ ಬೈಕ್ ಖರೀದಿಗೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ನೀವು Hero ನೀಡುತ್ತಿರುವ ಸ್ಪೆಷಲ್ ಆಫರ್ ನ ಮೂಲಕ ನಿಮ್ಮ ಬೈಕ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು. ಇದೀಗ ದೀಪಾವಳಿ ವಿಶೇಷಕ್ಕೆ ಹೀರೋ ಕಂಪನಿ ನೀಡುತ್ತಿರುವ ಬೈಕ್ ಡಿಸ್ಕೌಂಟ್ ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.
ದೀಪಾವಳಿ ಹಬ್ಬಕ್ಕೆ ಡಿಸ್ಕೌಂಟ್ ಜೊತೆ ಗಿಫ್ಟ್ ಸ್ಕೀಮ್
ಇದೀಗ Hero MotoCorp ದೀಪಾವಳಿ ಹಬ್ಬದ ವಿಶೇಷಕ್ಕೆ ಡಿಸ್ಕೌಂಟ್ ಜೊತೆ ಗಿಫ್ಟ್ ಸ್ಕೀಮ್ ನೀಡುತ್ತಿದೆ. ಕಂಪನಿ ನೀಡುತ್ತಿರುವ ಈ ಯೋಜನೆಯ ಮೂಲಕ ಗ್ರಾಹಕರು ದ್ವಿಚಕ್ರ ವಾಹನ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ಪಡೆಯಬಹುದು. ಆದಷ್ಟು ಬೇಗ ಗ್ರಾಹಕರು ಈ ಆಫರ್ ಗಳನ್ನೂ ನ್ನು ಬಳಸಿಕೊಳಬೇಕಿದೆ. ಏಕೆಂದರೆ ದೀಪಾವಳಿ ಆಫರ್ ಸೀಮಿತ ಅವಧಿಗೆ ಲಭ್ಯವಾಗಲಿದೆ.
ಹೀರೋ ಬೈಕ್ ಖರೀದಿಗೆ ಏನೆಲ್ಲಾ ಡಿಸ್ಕೌಂಟ್ ಇದೆ ಗೊತ್ತಾ..?
*ಹೀರೋ ಇದೀಗ ಬೈಕ್ ಖರೀದಿಗೆ 5500 ಕ್ಯಾಶ್ ಬೋನಸ್, 3000 ಎಕ್ಸ್ಚೇಂಜ್ ಬೋನಸ್ ಸೇರಿದಂತೆ ಇನ್ನಿತರ ಹಲವು ಡಿಸ್ಕೌಂಟ್ ಅನ್ನು ಕಂಪನಿ ಘೋಷಿಸಿದೆ. ಬೈಕ್ ಹಾಗೂ ಸ್ಕೂಟರ್ ಮೇಲೆ ಈ ಆಫರ್ ಅನ್ವಯವಾಗಲಿದೆ.
*ಶೇ. 6.99 ರ ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯ, ಅತಿ ಕಡಿಮೆ ಡೌನ್ ಪೇಮೆಂಟ್, ಆಧಾರ್ ಕಾರ್ಡ್ ಆಧಾರಿತ ಲೋನ್, ಶೂನ್ಯ ಹೈಪೋಥಿಕೇಷನ್ ಫೀ, ಕಡಿಮೆ EMI ಸೌಲಭ್ಯ ಪಡೆಯಬಹುದು.
*ಇನ್ನು ಹೀರೋ Gift Scheme ನ ಅಡಿಯಲ್ಲಿ ಸ್ಕೂಟರ್ ಅಥವಾ ಬೈಕ್ ಖರೀದಿಸುವ ಗ್ರಾಹಕರಿಗೆ ಬಂಪರ್ ಕೊಡುಗೆ ಲಭ್ಯವಾಗಲಿದೆ.