Bike Price: ಹೊಸ ಬೈಕ್ ಖರೀದಿಸುವವರಿಗೆ ಬೇಸರದ ಸುದ್ದಿ, ಇಂದಿನಿಂದ ಈ ಬೈಕುಗಳ ಮೇಲೆ ಹೆಚ್ಚಳ.

HERO MotoCorp ತನ್ನ ವಾಹನಗಳ ದರದ ಏರಿಕೆ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Hero Bike Price Hike From October 3rd: ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೈಕ್ ಗಳ ಆಯ್ಕೆಗೆ ಯಾವುದೇ ಕೊರತೆಯಿಲ್ಲ ಎನ್ನಬಹುದು. ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಮಾದರಿಯ ಬೈಕ್ ಗಳು ಕೂಡ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.

ಇನ್ನು ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Hero ಈಗಾಗಲೇ ಹತ್ತು ಹಲವು ಮಾದರಿಯ ಬೈಕ್ ಗಳನ್ನೂ ಗ್ರಾಹಕರಿಗೆ ಪರಿಚಯಿಸಿದೆ. Hero Bike ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಹೆಚ್ಚಿನ ಸೇಲ್ ಕಾಣುತ್ತವೆ.

Hero ಬೈಕ್ ಗಳು ಹೆಚ್ಚಿನ ಮೈಲೇಜ್ ನೀಡಲು ಹೆಸರುವಾಸಿಯಾಗಿದೆ. ಸದ್ಯ HERO MotoCorp ತನ್ನ ವಾಹನಗಳ ದರದ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ Hero Bike ಖರೀದಿಯ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿದೆ.

Hero Bike Price Hike
Image Credit: Zeebiz

ಇಂದಿನಿಂದ ಹೆಚ್ಚಾಗಲಿದೆ Hero Bike ಗಳ ಬೆಲೆ
ಸದ್ಯ ದುನಿಯಾ ದಿನಕಳೆಯುತ್ತಿದ್ದಂತೆ ದುಬಾರಿಯಾಗುತ್ತಿದೆ. ದಿನಬಳಕೆಯ ವಸ್ತುಗಳಿಂದ ಹಿಡಿದು ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಉಂಟಾಗುತ್ತಿದೆ. ಪ್ರಸ್ತುತ ಜನಸಾಮನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ.

ಹೊಸ ಹಣಕಾಸು ವರ್ಷದ ಆರಂಭದಿಂದ ಜನರು ಹೆಚ್ಚು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ ಎನ್ನಬಹುದು. ಸದ್ಯ ಬೆಲೆ ಏರಿಕೆಯ ನಡುವೆ ಕಂಗಾಲಾಗಿರುವ ಜನತೆಗೆ ಇದೀಗ ದ್ವಿಚಕ್ರ ವಾಹನಗಳ ದರದ ಏರಿಕೆಯ ಬಿಸಿ ಮುತ್ತಲಿದೆ. ಜನಪ್ರಿಯ ವಾಹನ ತಯಾರಕ ಕಂಪನಿಯಾದ Hero ತನ್ನ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

Join Nadunudi News WhatsApp Group

Hero Bike Price Hike From October 3rd
Image Credit: Linkedin

Hero Bike  ಗಳ ಬೆಲೆಯಲ್ಲಿ ಶೇ. 1 ರಷ್ಟು ಹೆಚ್ಚಳ
October 3 ರಿಂದ Hero MotoCorp ಕಂಪನಿ ತನ್ನ ವಾಹನಗಳ ದರದವನ್ನು ಹೆಚ್ಚಿಸಲು ನಿರ್ಧರಿಸಿದೆ. ಇಂದಿನಿಂದ ಕೆಲವು ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಲಿದ್ದು, ದರದಲ್ಲಿ ಶೇ. 1 ರಷ್ಟು ಹೆಚ್ಚಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಬೆಲೆ ಹೆಚ್ಚಳವು ಶೇ. 1 ರಷ್ಟಿರುತ್ತದೆ ಮತ್ತು ನಿರ್ದಿಷ್ಟ ಮಾದರಿಗಳು ಮತ್ತು ಮಾರುಕಟ್ಟೆಗಳಿಂದ ನಿಖರವಾದ ಹೆಚ್ಚಳದ ಪ್ರಮಾಣವು ಬದಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group