Hero Gift Offer: ಈ ವರ್ಷ ಬೈಕ್ ಖರೀದಿಸಿ 2024 ಕ್ಕೆ ಹಣ ಪಾವತಿಸಿ, ಹೀರೋ ಬೈಕ್ ಖರೀದಿಸುವವರಿಗೆ ದಸರಾ ಆಫರ್.
ಬೈಕ್ ಖರೀದಿ ಮಾಡುವ ಜನರಿಗೆ ವಿಶೇಷ ಗಿಫ್ಟ್ ಆಫರ್ ಘೋಷಣೆ ಮಾಡಿದ ಹೀರೋ.
Hero Buy Now, Pay In 2024 Offer: ಸದ್ಯ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Hero ಇದೀಗ ತನ್ನಾ ಬೈಕ್ ಖರೀದಿಗೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ನೀವು Hero ನೀಡುತ್ತಿರುವ ಸ್ಪೆಷಲ್ ಆಫರ್ ನ ಮೂಲಕ ನಿಮ್ಮ ಬೈಕ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು. ಸದ್ಯ ದೀಪಾವಳಿ ವಿಶೇಷಕ್ಕೆ ಹೀರೋ ಕಂಪನಿ ನೀಡುತ್ತಿರುವ ಬೈಕ್ ಡಿಸ್ಕೌಂಟ್ ಬಾರಿ ಲಾಭವನ್ನು ನೀಡಲಿದೆ.
Grand Indian Festival Of Trust (GIFT)
ಸದ್ಯ HERO ಕಂಪನಿ ಗ್ರಾಹಕರಿಗೆ ಬೈಕ್ ಖರೀದಿಗಾಗಿ ವಿಶೇಷ ಕೊಡುಗೆ ನೀಡುವ ಸಾಲುವಾಗಿ “Grand Indian Festival Of Trust” ಎರಡನೇ ಆವೃತ್ತಿಯನ್ನು ಪರಿಚಯಿಸಿದೆ. ಕಂಪನಿಯು ಹೊಸ ಹೀರೋ ಬೈಕ್ ಖರೀದಿಸುವವರಿಗೆ ವಿಶೇಷ ಆಫರ್ ನೀಡಲು ಮುಂದಾಗಿದೆ. ವಿಶೇಷ ಕೊಡುಗೆಯ ಅಡಿಯಲ್ಲಿ ಹೀರೋ ತನ್ನ ಜನಪ್ರಿಯ ಸ್ಕೂಟರ್ ಗಳಿಗೆ ಹೊಸ ಬಣ್ಣದ ಆಯ್ಕೆಯನ್ನು ನೀಡಲು ಮುಂದಾಗಿದೆ.
Hero ಬೈಕ್ ಗಳ ಹೊಸ ಬಣ್ಣಗಳ ಆಯ್ಕೆ
*Xoom LX – Pearl White Silver,
*Pleasure LX – Matter Vernier Grey,
*Pleasure VX – Matt Black, Pearl Silver Color
*Hero Passion – Black Gray and Matte Axis Grey
‘ಈಗ ಖರೀದಿಸಿ, 2024 ರಲ್ಲಿ ಪಾವತಿಸಿ’
ಹೀರೋ ಇದೀಗ ಬೈಕ್ ಖರೀದಿಗೆ 5500 ರೂಪಾಯಿ ಕ್ಯಾಶ್ ಬೋನಸ್, 3000 ರೂಪಾಯಿ ಎಕ್ಸ್ಚೇಂಜ್ ಬೋನಸ್ ಸೇರಿದಂತೆ ಇನ್ನಿತರ ಹಲವು ಡಿಸ್ಕೌಂಟ್ ಅನ್ನು ಕಂಪನಿ ಘೋಷಿಸಿದೆ. ಬೈಕ್ ಹಾಗೂ ಸ್ಕೂಟರ್ ಮೇಲೆ ಈ ಆಫರ್ ಅನ್ವಯವಾಗಲಿದೆ.
ಹಾಗೆಯೆ ಶೇ. 6.99 ರ ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯ, ಅತಿ ಕಡಿಮೆ ಡೌನ್ ಪೇಮೆಂಟ್, ಆಧಾರ್ ಕಾರ್ಡ್ ಆಧಾರಿತ ಲೋನ್, ಶೂನ್ಯ ಹೈಪೋಥಿಕೇಷನ್ ಫೀ, ಕಡಿಮೆ EMI ಸೌಲಭ್ಯ ಪಡೆಯಬಹುದು. ಇವೆಲ್ಲದರ ಜೊತೆಗೆ ಹೀರೋ “ಈಗ ಖರೀದಿಸಿ, 2024 ರಲ್ಲಿ ಪಾವತಿಸಿ” (Buy Now , Pay In 2024) ಯೋಜನೆಯನ್ನು ಪ್ರಾರಂಭಿಸಿದೆ.