Hero HF Deluxe: ಕೇವಲ 7,777 ರೂಪಾಯಿಗೆ ಖರೀದಿಸಿ ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್, ಆಫರ್ ಕೆಲವು ದಿನ ಮಾತ್ರ.

ಇದೀಗ ಉತ್ತಮ ಮೈಲೇಜ್ ನೀಡುವ ಹೊಸ ಬೈಕ್ ಒಂದು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ.ನಿಮ್ಮ ಜೇಬಿನ ಮೇಲಿನ ಪೆಟ್ರೋಲ್ ಹೊರೆಯನ್ನು ಕಡಿಮೆ ಮಾಡುವ ಬೈಕ್​ ಇದಾಗಿದೆ.

Hero HF Deluxe Price: ಇದೀಗ ಬೈಕ್ ಖರೀದಿ ಮಾಡುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಸಾಮಾನ್ಯವಾಗಿ ಬೈಕ್ ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಇದೀಗ ಉತ್ತಮ ಮೈಲೇಜ್ ನೀಡುವ ಹೊಸ ಬೈಕ್ ಒಂದು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಯಿಂದ ಜನಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜೇಬಿನ ಮೇಲಿನ ಪೆಟ್ರೋಲ್ ಹೊರೆಯನ್ನು ಕಡಿಮೆ ಮಾಡುವ ಬೈಕ್​ ಇದಾಗಿದೆ.

Hero HF Deluxe Price
Image Source: Youtube

Hero HF Deluxe ಬೈಕ್ ನ ಬೆಲೆ
ಉತ್ತಮ ಮೈಲೇಜ್ ನೀಡುವ ಬೈಕ್ ಗಳಲ್ಲಿ Hero HF Deluxe ಬೈಕ್ ಸಹ ಒಂದು. ಅದರ ಮೇಲೆ ಕಂಪನಿಯು ಈ ತಿಂಗಳು ಬಡ್ಡಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಕೇವಲ 7777 ರೂಪಾಯಿಗಳ ಕಡಿಮೆ ಡೌನ್ ಪಾವತಿಯೊಂದಿಗೆ Hero HF ಡೀಲಕ್ಸ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಉಳಿದ ವೆಚ್ಚವನ್ನು ಸುಲಭ ಕಂತುಗಳಲ್ಲಿ ಪಾವತಿಸಬಹುದು. ಈ ಬೈಕಿನ ಬೆಲೆ ರೂಪಾಯಿ 54738 ರಿಂದ ಪ್ರಾರಂಭವಾಗುತ್ತದೆ.

Hero HF Deluxe Price
Image Source: Zigwheels

Hero HF Deluxe ಬೈಕ್ ನ ವೈಶಿಷ್ಟ್ಯತೆ
ಹೀರೋ ಹೆಚ್‌ಎಫ್ ಡಿಲಕ್ಸ್ ಉತ್ತಮ ಮೈಲೇಜ್ ಬೈಕ್. ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ 83 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಬೈಕ್‌ ನಲ್ಲಿ ಬೆಳಕಿಗಾಗಿ ಹ್ಯಾಲೊಜೆನ್ ಬಲ್ಬ್‌ಗಳನ್ನು ಬಳಸಲಾಗಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅನಲಾಗ್ ರೂಪದಲ್ಲಿ ನೀಡಲಾಗಿದೆ. ಈ ಬೈಕ್ 97.2cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 8.36PS ಪವರ್ ಮತ್ತು 8.05Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ 4 ಸ್ಪೀಡ್ ಗೇರ್ ಬಾಕ್ಸ್ ಮತ್ತು ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ. Hero HF Deluxe ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಸೈಡ್ ಸ್ಟ್ಯಾಂಡ್ ಕಟ್ಆಫ್ ಸ್ವಿಚ್, Xsense FI ಮತ್ತು ಹೀರೋನ ಪೇಟೆಂಟ್ i3S ತಂತ್ರಜ್ಞಾನವನ್ನು ಸಹ ನೀಡಿದೆ. ಈ ಬೈಕ್ ಈಗ ಮೊದಲಿಗಿಂತ ಶೇ.6ರಷ್ಟು ಹೆಚ್ಚು ಪವರ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Hero HF Deluxe Price
Image Source: HT Auto

Join Nadunudi News WhatsApp Group

 

Join Nadunudi News WhatsApp Group