Hero EV: ಕಡಿಮೆ ಬೆಲೆ ಮತ್ತು 200 Km ಮೈಲೇಜ್, ಇತಿಹಾಸ ಸೃಷ್ಟಿಸಲು ಬಂತು ಹೋಂಡಾ ಎಲೆಕ್ಟ್ರಿಕ್ ಬೈಕ್.
ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಹೀರೋ ಕಂಪನಿಯ ಹೊಸ ಬೈಕ್ ಶೀಘ್ರದಲ್ಲೇ ಬಿಡುಗಡೆ.
Hero HF Deluxe Electric Bike: ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ (Hero MotoCorp Company) ಕಂಪನಿಯ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚುತ್ತಿದ್ದು ಮಾರಾಟ ಕೂಡ ಹೆಚ್ಚಾಗಿವೆ. ಹೊಸ ಹೊಸ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಹೀರೋ ಕಂಪನಿ ತನ್ನ ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಹೀರೋ ಕಂಪನಿಯ ಸಾಕಷ್ಟು ಎಲೆಕ್ಟ್ರಿಕ್ ಬೈಕ್ ಗಳನ್ನೂ ಕೂಡ ಬಿಡುಗಡೆ ಮಾಡಿದೆ.
ಇನ್ನು ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿ ಹೊಚ್ಚ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಇನ್ನಿತರ ಬೈಕ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೀರೋ ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ (Hero HF Deluxe Electric Bike)
ಈಗಾಗಲೇ ಮಾರುಕಟ್ಟೆಯಲ್ಲಿ ಹೀರೋ ಕಂಪನಿಯ ಹೆಚ್ ಎಫ್ ಡಿಲಕ್ಸ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಈ ಡಿಲಕ್ಸ್ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಆಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಸೆಲ್ ಕಾಣುತ್ತಿದೆ. ಇದೀಗ ಕಂಪನಿ ತನ್ನ ಡಿಲಕ್ಸ್ ಮಾದರಿಯನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಹೀರೋ ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ ರೂಪಾಂತರ ಸಂಚಲನ ಮೂಡಿಸಲಿದೆ.
ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ ಬೆಲೆ ಮತ್ತು ವಿಶೇಷತೆ
ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ ರೂಪಾಂತರದಲ್ಲಿ ಸಾಕಷ್ಟು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ವಾಹನ ಸವಾರರ ಸುರಕ್ಷತೆಗಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಜೊತೆಗೆ ವೇಗದ ಯುಎಸ್‌ಬಿ ಚಾರ್ಜಿಂಗ್ ಸಪೋರ್ಟ್, ಮೊಬೈಲ್ ಕನೆಕ್ಟಿವಿಟಿ, ಬ್ಲೂಟೂತ್, ನ್ಯಾವಿಗೇಷನ್, ರೈಡಿಂಗ್ ಮೋಡ್ ಮತ್ತು ಹೆಲ್ಥ್ ಮೊನಿಟರ್ ಫೀಚರ್ ಅನ್ನು ನೀಡಲಾಗಿದೆ. ಇನ್ನು ನೂತನ ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ ಮಾದರಿಗೆ ಮಾರುಕಟ್ಟೆಯಲ್ಲಿ 1 ಲಕ್ಷಕ್ಕಿಂತಲೂ ಕಡಿಮೆ ಬೆಲೆಯನ್ನು ನಿಗದಿಪಡಿಸಲಾಗಿದೆ.
ಹೀರೋ ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ ಮೈಲೇಜ್
ಹೆಚ್ ಎಫ್ ಡಿಲಕ್ಸ್ ಎಲೆಕ್ಟ್ರಿಕ್ 3.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದೆ. ನೀವು ಅದನ್ನು ಸಾಮಾನ್ಯ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿದರೆ, ಅದು ಚಾರ್ಜ್ ಮಾಡಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ವೇಗದ ಚಾರ್ಜರ್ನೊಂದಿಗೆ, ಇದು ಕೇವಲ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಒಂದೇ ಚಾರ್ಜ್ ನಲ್ಲಿ ಈ ಬೈಕ್ ಸುಮಾರು 150 ರಿಂದ 200 ಕಿಲೋಮೀಟರ್ ಮೈಲೇಜ್ ನೀಡಲಿದೆ.