Ads By Google

Karizma: ಹೊಸ ಕರಿಜ್ಮಾ ಬೈಕಿನ ಬೆಲೆ ಮತ್ತು ಮೈಲೇಜ್ ಕಂಡು ಜನರು ಫಿದಾ, ಒಂದೇ ದಿನದಲ್ಲಿ ದಾಖಲೆಯ ಬುಕಿಂಗ್.

Hero Karizma is back in the market with new look and mileage

Image Credit: youtube

Ads By Google

Hero Karizma Sports Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೀರೋ (Hero) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಹೀರೋ ಕಂಪನಿ ಬಿಡುಗಡೆ ಮಾಡಿದೆ. ಹೀರೋ ಮೋಟೊಕಾರ್ಪ್ ಈಗಾಗಲೇ ವಿವಿಧ ಮಾದರಿಯ ಸ್ಪೋರ್ಟ್ಸ್ ಬೈಕ್ ಗಳನ್ನೂ ಬಿಡುಗಡೆ ಮಾಡಿದೆ. ವಿವಿಧ ಬೈಕ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಕಂಪನಿಯು ಗ್ರಾಹಕರನ್ನು ಸೆಳೆಯುತ್ತಿದೆ.

Image Credit: autocarindia

ಹೀರೋ ಮೋಟೊಕಾರ್ಪ್ ಹೊಸ ಸ್ಪೋರ್ಟ್ಸ್ ಬೈಕ್ ಬಿಡುಗಡೆ
ಹೀರೋ ಮೋಟೋಕೋರ್ಪ್ ಕಂಪನಿಯು ಹೊಚ್ಚ ಹೊಸ ಹೀರೊ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿದೆ. ಕಂಪನಿಯು ಹೀರೊ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಬಿಡುಗಡೆಗೊಳಿಸುವ ದಿನಾಂಕವನ್ನು ಕೂಡ ಬಹಿರಂಗಪಡಿಸಿದೆ.

ಈ ಹೂಚೆ ಹೊಸ ಕರಿಜ್ಮ್ ಆಗಸ್ಟ್ 29 2023 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಹೊಸ ಸ್ಪೋರ್ಟ್ಸ್ ಬೈಕ್ ಬಿಡುಗಡೆಯ ದಿನಾಂಕ ಮಾತ್ರ ಬಹಿರಂಗವಾಗಿದ್ದು ಕಂಪನಿಯು ಈ ಬೈಕ್ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಹೀರೊ ಕರಿಜ್ಮಾ ಸ್ಪೋರ್ಟ್ಸ್ ಬೈಕ್ (Hero Karizma Sports Bike) 
ಹೀರೊ ಕರಿಜ್ಮಾ ಸ್ಪೋರ್ಟ್ಸ್ ಬೈಕ್ 210 ಸಿಸಿ ಎಂಜಿನ್ ಹೊಂದಿರುವ ಬಗ್ಗೆ ಮಾಹಿತಿ ಲಭಿಸಿದೆ. 210 ಸಿಸಿ ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು 25bhp ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

Image Credit: talkingtrendo

ಇನ್ನು ಈ ಹೊಸ ಸ್ಪೋರ್ಟ್ ಬೈಕ್ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಪೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಕ್ಷನ್ ಅನ್ನು ಒಳಗೊಂಡಿದೆ. ಕರಿಜ್ಮಾ ಸ್ಪೋರ್ಟ್ಸ್ ಬೈಕ್ ನ ಬೆಳೆಯ ಬಗ್ಗೆ ಹೇಳುವುದಾದರೆ 1.08 ಲಕ್ಷದಿಂದ 1.11 ಲಕ್ಷ ಆಗಿದೆ. ಇನ್ನು ಈ ಬೈಕ್ ಸುಮಾರು ಸುಮಾರು 40 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ.

ಹೀರೊ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಬೆಲೆ
ಇನ್ನು ಬೈಕ್ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರಾಕ್ ಅನ್ನು ಅಳವಡಿಸಲಾಗಿದೆ. ಆಗಸ್ಟ್ ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಈ ಬೈಕ್ ನಲ್ಲಿ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆಯಲ್ಲಿ Gixxer SF 250 ಮತ್ತು Yamaha YZF-R15 ಬೈಕ್ ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in