Hero: ಹೀರೋ ಈ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಯಮಹಾ R15, ಕಡಿಮೆ ಬೆಲೆ 33 Km ಮೈಲೇಜ್.
ಇದೀಗ ಹೀರೋ ಕಂಪನಿ ಹೆಚ್ಚು ಮೈಲೇಜ್ ನೀಡುವ ಬೈಕ್ ಅನ್ನು ಬಜೆಟ್ ಬೆಲೆಗೆ ಬಿಡುಗಡೆ ಮಾಡಿದೆ.
Hero Karizma XMR Bike: ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೀರೋ (Hero) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಬಜೆಟ್ ಬೆಲೆಯಲ್ಲಿ ಹೀರೋ ಕಂಪನಿ ಬಿಡುಗಡೆ ಮಾಡಿದೆ.
ಹೀರೋ ಮೋಟೊಕಾರ್ಪ್ ಈಗಾಗಲೇ ವಿವಿಧ ಮಾದರಿಯ ಸ್ಪೋರ್ಟ್ಸ್ ಬೈಕ್ ಗಳನ್ನೂ ಬಿಡುಗಡೆ ಮಾಡಿದೆ. ಹೀರೋ ಸ್ಪೋರ್ಟ್ಸ್ ಬೈಕ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ವಿವಿಧ ವಿನ್ಯಾಸದ ಬೈಕ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಕಂಪನಿಯು ಗ್ರಾಹಕರನ್ನು ಸೆಳೆಯುತ್ತಿದೆ.
ಹೀರೋ ಮೋಟೊಕಾರ್ಪ್ ಹೊಸ ಬೈಕ್ ಬಿಡುಗಡೆ
ಹೀರೋ ಮೋಟೋಕೋರ್ಪ್ ಕಂಪನಿಯು ಹೊಚ್ಚ ಹೊಸ ಹೀರೊ ಕರಿಜ್ಮಾ XMR ಬೈಕ್ ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿದೆ. ಕಂಪನಿಯು ಹೀರೊ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಬಿಡುಗಡೆಗೊಳಿಸುವ ದಿನಾಂಕವನ್ನು ಕೂಡ ಬಹಿರಂಗಪಡಿಸಿದೆ.
ಈ ಹೊಚ್ಚ ಹೊಸ ಕರಿಜ್ಮಾ ಆಗಸ್ಟ್ 29 2023 ರಲ್ಲಿ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದೆ. ಜುಲೈ ನಲ್ಲಿಯೇ ಈ ಬೈಕ್ ಬಿಡುಗಡೆಯ ಬಗ್ಗೆ ಕಂಪನಿ ಸುಳಿವು ನೀಡಿದ್ದು ಗ್ರಾಹಕರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಬೈಕ್ ಬಿಡುಗಡೆಗೊಳ್ಳುವ ಮೂಲಕ ಹೆಚ್ಚಿನ ಬೇಡಿಕೆ ಪಡೆದಿದೆ.
ಹೀರೊ ಕರಿಜ್ಮಾ XMR ಬೈಕ್ (Hero Karizma XMR Bike) ವಿಶೇಷತೆ
ಇನ್ನು ಬೈಕ್ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟುಥ್ ಕನೆಕ್ಟಿವಿಟಿ, ನಿವಿಗೇಷನ್ ಸೇರಿದಂತೆ ಇನ್ನಿತರ ಹತ್ತು ಹಲವು ಫೀಚರ್ ಗಳನ್ನೂ ಈ ಬೈಕ್ ನಲ್ಲಿ ಅಳವಡಿಸಲಾಗಿದೆ. ಕರಿಜ್ಮಾ ಬೈಕ್ ಮಾರುಕಟ್ಟೆಯಲ್ಲಿ Gixxer SF 250 ಮತ್ತು Yamaha YZF-R15 ಬೈಕ್ ಗಳಿಗೆ ತೀವ್ರ ಪೈಪೋಟಿ ನೀಡಲಿದೆ.
ಹೀರೊ ಕರಿಜ್ಮಾ XMR ಬೈಕ್ ಬೆಲೆ ಮತ್ತು ಮೈಲೇಜ್
ಹೀರೊ ಕರಿಜ್ಮಾ XMR ಬೈಕ್ 210 ಸಿಸಿ ಎಂಜಿನ್ ಹೊಂದಿರುವ ಬಗ್ಗೆ ಮಾಹಿತಿ ಲಭಿಸಿದೆ. 210 ಸಿಸಿ ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು 25bhp ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಇನ್ನು ಈ ಹೊಸ ಬೈಕ್ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಪೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಕ್ಷನ್ ಅನ್ನು ಒಳಗೊಂಡಿದೆ. ಕರಿಜ್ಮಾ ಬೈಕ್ ನ ಬೆಲೆಯ ಬಗ್ಗೆ ಹೇಳುವುದಾದರೆ 1.90 ಲಕ್ಷದಿಂದ 2.10 ಲಕ್ಷ ಆಗಿದೆ. ಇನ್ನು ಈ ಬೈಕ್ ಪ್ರತಿ ಲೀಟರ್ ಗೆ ಸುಮಾರು 32.8 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಇದಾಗಿದ್ದು ಬಿಡುಗೊಂಡ ಬಳಿಕ ಹೆಚ್ಚಿನ ಬುಕಿಂಗ್ ಕಂಡಿದೆ.