Hero 2023: 68 Km ಮೈಲೇಜ್ ಕೊಡುವ ಈ ಹೀರೋ ಸ್ಪೋರ್ಟ್ಸ್ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಪಲ್ಸರ್, ಬೆಲೆ ಕೂಡ ಕಡಿಕೆ.

ಪ್ರತಿ ಲೀಟರ್ ಗೆ ಬರೋಬ್ಬರಿ 68 km ಮೈಲೇಜ್ ನೀಡಲಿದೆ ಈ ನೂತನ ಮಾದರಿಯ Hero ಬೈಕ್.

Hero Paasion Xtec 2023 Price And Feature: ಇತ್ತೀಚಿನ ದಿನಗಳಲ್ಲಿ ಮೈಲೇಜ್ ಬೈಕ್‌ ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ Hero ಬೈಕ್ ಭರ್ಜರಿ ಮೈಲೇಜ್ ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.

Hero ಇದೀಗ ಸ್ಪೋರ್ಟಿ ಲುಕ್ ನೊಂದಿಗೆ ಹೊಚ್ಚ ಹೊಸ ಬೈಕ್ ಅನ್ನು ಪರಿಚಯಿಸಿದೆ. ಹೊಸ ನವೀಕರಣದೊಂದಿಗೆ ಹೆಚ್ಚಿನ ಮೈಲೇಜ್ ನೀಡುವ ನೂತನ ಬೈಕ್ ಇದೀಗ ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ.

Hero Passion Xtec 2023 Price
Image Credit: Autocarindia

Hero Pasion Xtec 2023
ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ Hero MotoCorp ತನ್ನ ನೂತನ ಮಾದರಿಯ Hero Pasion Xtec 2023 ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಚ್ಚ ಹೊಸ ಬೈಕ್ ಇನ್ನಿತರ ಮಾದರಿಯ ಸ್ಪೋರ್ಟ್ಸ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ನೂತನ ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ. ಹೀರೋ ಪ್ಯಾಷನ್ Xtec ಬೈಕ್ ನಲ್ಲಿ ಹತ್ತು ಹಲವು ಸುಧಾರಿತ ಡಿಜಿಟಲ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

68 Km ಮೈಲೇಜ್ ಕೊಡುವ ಈ ಹೀರೋ ಸ್ಪೋರ್ಟ್ಸ್ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಪಲ್ಸರ್
ಈ ಹೀರೋ ಪ್ಯಾಷನ್ Xtec ಬೈಕ್ ನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಬಿಎಸ್ 6 ಕಾಂಪ್ಲೈಂಟ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ ಅನ್ನು 4 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ಹೀರೋ ಪ್ಯಾಷನ್ Xtec ಬೈಕ್ 7500 rpm ನಲ್ಲಿ 9 bhp ಗರಿಷ್ಟ ಟಾರ್ಕ್ ಮತ್ತು 5000 rpm ನಲ್ಲಿ 9 .79 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು ಪ್ರತಿ ಲೀಟರ್ ಗೆ ಬರೋಬ್ಬರಿ 68 km ಮೈಲೇಜ್ ನೀಡಲಿದೆ. ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್ ಗಳಿಗೆ ಈ ನೂತನ ಮಾದರಿ ನೇರ ಸ್ಪರ್ಧೆ ನೀಡಲಿದೆ.

Hero Passion Xtec 2023
Image Credit: Morfreeov

ಹೀರೋ ಪ್ಯಾಷನ್ Xtec ಬೆಲೆ ಎಷ್ಟು ತಿಳಿಯಿರಿ
ಹೀರೋ ಪ್ಯಾಷನ್ Xtec ಬೈಕ್ ನಲ್ಲಿ Digital speedometer console, digital speedometer, USB charging port, Bluetooth connectivity, call and SMS alerts, turn by turn navigation, real-time mileage ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ಈ ಬೈಕ್ ನ ಬೆಲೆಯ ಬಗ್ಗೆ ಹೇಳುವುದಾದರೆ ಕಂಪನಿಯು 74,590 ರೂ. ನಿಂದ 78,990 ರೂ. ಅನ್ನು ನಿಗದಿಪಡಿಸಿದೆ.

Join Nadunudi News WhatsApp Group

Join Nadunudi News WhatsApp Group