Hero: 68 ಕಿಲೋ ಮೀಟರ್ ಮೈಲೇಜ್ ಜೊತೆಗೆ ಬಂತು ಇನ್ನೊಂದು ಹೀರೋ ಬೈಕ್, ದಿನವಿಡೀ ಸುತ್ತಾಡಿ.
68 ಕಿಲೋ ಮೀಟರ್ ಮೈಲೇಜ್ ಕೊಡುವ ಈ ಹೀರೋ ಬೈಕ್ ದೇಶದಲ್ಲಿ ಸಾಕಷ್ಟು ಮಾರಾಟ ಆಗಿದೆ.
Hero Passion Xtec: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ (Bike) ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೀರೋ (Hero) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.
ಹೀರೋ ಬೈಕ್ ಗಳ ಮೇಲೆ ಕಂಪನಿ ವಿವಿಧ ರೀತಿಯ ಹಣಕಾಸಿನ ಯೋಜನೆಗಳನ್ನು ನೀಡುತ್ತಿದೆ. ಇದೀಗ ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಹೀರೋ ಕಂಪನಿ ಬಿಡುಗಡೆ ಮಾಡಿದೆ.
ಹೀರೋ ಪ್ಯಾಷನ್ Xtec (Hero Pasion Xtec)
ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ ಹೀರೋ ತನ್ನ ನೂತನ ಮಾದರಿಯ ಹೀರೋ ಪ್ಯಾಷನ್ Xtec ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಚ್ಚ ಹೊಸ ಬೈಕ್ ಇನ್ನಿತರ ಮಾದರಿಯ ಸ್ಪೋರ್ಟ್ಸ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ಹೊಸಾ ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ. ಹೀರೋ ಪ್ಯಾಷನ್ Xtec ಬೈಕ್ ನಲ್ಲಿ ಹತ್ತು ಹಲವು ಸುಧಾರಿತ ಡಿಜಿಟಲ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಹೀರೋ ಪ್ಯಾಷನ್ Xtec ವಿಶೇಷತೆ
ಹೀರೋ ಪ್ಯಾಷನ್ Xtec ಬೈಕ್ ನಲ್ಲಿ ಡಿಜಿಟಲ್ ಸ್ಪೀಡೋಮೀಟರ್ ಕನ್ಸೋಲ್, ಡಿಜಿಟಲ್ ಸ್ಪೀಡೋಮೀಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಬ್ಲೂಟೂತ್ ಕನೆಕ್ಟಿವಿಟಿ, ಕರೆ ಮತ್ತು ಎಸ್ ಎಂಎಸ್ ಅಲರ್ಟ್‌ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ರಿಯಲ್-ಟೈಮ್ ಮೈಲೇಜ್ ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ಈ ಬೈಕ್ ನ ಬೆಲೆಯ ಬಗ್ಗೆ ಹೇಳುವುದಾದರೆ ಕಂಪನಿಯು 74,590 ರೂ. ಅನ್ನು ನಿಗದಿಪಡಿಸಿದೆ.
ಹೀರೋ ಪ್ಯಾಷನ್ Xtec ಬೈಕ್ ಎಂಜಿನ್ ಸಾಮರ್ಥ್ಯ
ಈ ಹೀರೋ ಪ್ಯಾಷನ್ Xtec ಬೈಕ್ ನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಬಿಎಸ್ 6 ಕಾಂಪ್ಲೈಂಟ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ ಅನ್ನು 4 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ಹೀರೋ ಪ್ಯಾಷನ್ Xtec ಬೈಕ್ 7500 rpm ನಲ್ಲಿ 9 bhp ಗರಿಷ್ಟ ಟಾರ್ಕ್ ಮತ್ತು 5000 rpm ನಲ್ಲಿ 9 .79 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಬೈಕ್ 68 kmpl ಮೈಲೇಜ್ ನೀಡಲಿದೆ.