Online Loan: 21 ವರ್ಷ ಮೇಲ್ಪಟ್ಟವರಿಗೆ 30 ನಿಮಿಷದಲ್ಲಿ ಸಿಗಲಿದೆ 3 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ ಹಣ ಪಡೆದುಕೊಳ್ಳಿ.
21 ವರ್ಷ ಮೇಲ್ಪಟ್ಟ ಜನರು ಆನ್ಲೈನ್ ನಲ್ಲಿ ಈಗ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು.
Hero PinCorp Loan Facility: ಸಾಮಾನ್ಯವಾಗಿ ಹೆಚ್ಚಿನ ಜನರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಗಳನ್ನು ಪಡೆಯುತ್ತಾರೆ. ವಾಹನ ಸಾಲ, ವೈಯಕ್ತಿಕ ಸಾಲ, ಗೃಹ ಸಾಲ ಹೀಗೆ ವಿವಿಧ ರೀತಿಯ ಸಾಲವನ್ನು ಬ್ಯಾಂಕುಗಳು ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳು ನೀಡುತ್ತದೆ. ಬ್ಯಾಂಕುಗಳು ನೀಡುವ ಸಾಲಗಳಿಗೆ ಬಡ್ಡಿದರ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಸಾಲವನ್ನು ಪಡೆಯುವಾಗ ಬಡ್ಡಿದರದ ಬಗ್ಗೆ ಹೆಚ್ಚು ಯೋಚಿಸಲಾಗುತ್ತದೆ.
ಯಾವ ಸಂಸ್ಥೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೋ ಆ ಸಂಸ್ಥೆಯನ್ನು ಸಾಲಕ್ಕಾಗಿ ಆರಿಸಿಕೊಳ್ಳಲಾಗುತ್ತದೆ. ಇತ್ತೀಚೆಗಂತೂ ಆನ್ಲೈನ್ ನ ಮೂಲಕ ಕೂಡ ಜನರಿಗೆ ಸಾಲವನ್ನು ನೀಡಲಾಗುತ್ತಿದೆ. ಯುಪಿಐ ಪಾವತಿ ಅಪ್ಲಿಕೇಶನ್ ಗಳು ಬಳಕೆದಾರರಿಗೆ ಸಾಲವನ್ನು ನೀಡುತ್ತಿದೆ. ಸಾಲವನ್ನು ಬಯಸುವವರು ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಹೀರೊ ಪಿನ್ ಕಾರ್ಪ್ ಸಾಲ ಸೌಲಭ್ಯ (Hero PinCorp Loan Facility)
ಆನ್ಲೈನ್ ನ ಮೂಲಕ ನೀವು ಹೀರೊ ಪಿನ್ ಕಾರ್ಪ್ ನ ಸಾಲದ ಸೌಲಭ್ಯವನ್ನು ಪಡೆಯಬಹುದು. ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ ಇದರ ಮೂಲಕ 3 ಲಕ್ಷದ ಸಾಲವನ್ನು ಪಡೆಯಬಹುದಾಗಿದೆ. ಸ್ವಯಂ ಚಾಲಿತ ಮರುಪಾವತಿಯ ಆಯ್ಕೆಯಿದ್ದು ಕನಿಷ್ಠ 50 ಸಾವಿರದಿಂದ ಗರಿಷ್ಟ 3 ಲಕ್ಷ ಸಾಲವನ್ನು ಪಡೆಯಬಹುದು. ಹೀರೊ ಪಿನ್ ಕಾರ್ಪ್ ನಲ್ಲಿ ಶೇ. 12.5 ರಿಂದ ಬಡ್ಡಿದರ ಪ್ರಾರಂಭವಾಗುತ್ತದೆ. ಇನ್ನು ಸಂಸ್ಕರಣಾ ಶುಲ್ಕವು ಸಾಲದ ಮೊತ್ತದ 25 ಪ್ರತಿಶತವಾಗಿದೆ.
ಈ ಸಾಲವನ್ನು ಪಡೆಯಲು ಯಾರು ಅರ್ಹರು
ಈ ಸಾಲವನ್ನು ಪಡೆಯಲು ಈ ಇಂತವರು ಮಾತ್ರ ಅರ್ಹರಾಗಿರುತ್ತಾರೆ. ನೀವು ಮಾಸಿಕವಾಗಿ 15000 ಸಂಬಳವನ್ನು ಪಡೆಯುತ್ತಿದ್ದರು ಈ ಸಾಲದ ಸೌಲಭ್ಯಕ್ಕೆ ಅರ್ಹರಾಗಿರುತ್ತೀರಿ. 21 ರಿಂದ 58 ವರ್ಷದವರು ಈ ಸಾಲದ ಪ್ರಯೋಜನವನ್ನು ಪಡೆಯಬಹುದು. ಈ ಸಾಲವನ್ನು ಪಡೆಯಲು ನೆಟ್ ಬ್ಯಾಂಕಿಂಗ್ ಮೂಲಕ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗುತ್ತದೆ.
CIBIL ಸ್ಕೊರ್ 600 ಕ್ಕಿಂತ ಹೆಚ್ಚಿದ್ದು KYC ದಾಖಲೆಗಳು ನೀಡಬೇಕು. ಆಧಾರ್ ಕಾರ್ಡ್, ಪಾನ್ ಸೇರಿದಂತೆ ಇನ್ನಿತರ ವೈಯಕ್ತಿಕ ವಿವರವನ್ನು ನೀಡಿ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಹತೆಯ ಆಧಾರದ ಮೇಲೆ ನಿಮ್ಮ ಸಾಲದ ಅರ್ಹತೆ ಬದಲಾಗುತ್ತದೆ. ವಾಹನ ಖರೀದಿ , ಮನೆ ಖರೀದಿ ಸೇರಿದಂತೆ ಯಾವುದೇ ರೀತಿಯ ಸಾಲದ ಅವಶ್ಯಕತೆ ನಿಮಗಿದ್ದರೂ ಹೀರೊ ಪಿನ್ ಕಾರ್ಪ್ ಸಾಲವನ್ನು ನೀಡುತ್ತದೆ.