Splendor 150cc: ಬೆಂಕಿಯಂತೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೀರೋ ಸ್ಪ್ಲೆಂಡರ್ 150, ಕಡಿಮೆ ಬೆಲೆ 80 ಕೀ ಮೀ ಮೈಲೇಜ್.
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೀರೊ ಕಂಪನಿಯ ಹೀರೋ ಸ್ಪ್ಲೆಂಡರ್ 150.
Hero Splendor 150cc Bike: ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಬೈಕ್ ಖರೀದಿ ಮಾಡುವವರಿಗೆ ಆಯ್ಕೆಯ ವಿಚಾರದಲ್ಲಿ ಕೊರತೆ ಅಂತೂ ಆಗುವುದಿಲ್ಲ.
ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ ಹೀರೊ ತನ್ನ ಬೈಕ್ ಸ್ಕೂಟರ್ ನ್ನು ಬಿಡುಗಡೆ ಮಾಡುತ್ತಲೇ ಇದೆ. ಇದೀಗ ಹೀರೊ ಕಂಪನಿಯಿಂದ ಇನ್ನೊಂದು ಬೈಕ್ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.
ಹೀರೊ ಸ್ಪ್ಲೆಂಡರ್ 150 cc ಬೈಕ್
ಹೀರೊ ಕಂಪನಿ ದೇಶದಲ್ಲಿ ಅತಿ ದೊಡ್ಡ ಬೈಕ್ ಮಾರಾಟ ಕಂಪನಿಯಾಗಿದೆ. ಇದರ ಹೀರೊ ಸ್ಪ್ಲೆಂಡರ್ ಪ್ಲಸ್ ಪ್ರತಿ ತಿಂಗಳು 2 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನೂ ಮಾರಾಟ ಮಾಡುತ್ತದೆ. ಸ್ಪ್ಲೆಂಡರ್ ನ 150 ಸಿಸಿ ರೂಪಾಂತರವು ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಸುದ್ದಿ ಈಗ ಮಾರುಕಟ್ಟೆಯಲ್ಲಿದೆ. ಇದೀಗ ಈ ಕಮ್ಯೂಟರ್ ಬೈಕ್ ಕ್ರೀಡಾ ವಿಭಾಗದಲ್ಲಿ ಬಿಡುಗಡೆಯಾಗಲಿದೆ.
ಹೀರೊ ಸ್ಪ್ಲೆಂಡರ್ 150 cc ಬೈಕ್ ನ ವಿಶೇಷತೆ
ಇತ್ತೀಚಿಗೆ ಹೀರೊ ಹೊಸ Xtreme 160 ಬೈಕ್ ಅನ್ನು ಬಿಡುಗಡೆ ಮಾಡಿದೆ. ಆದ್ದರಿಂದಲೇ ಅದೇ ಎಂಜಿನ್ ಅನ್ನು ಹೀರೋ splendor 150cc ಬೈಕ್ ನಲ್ಲಿ ಕಾಣಬಹುದು. ಎಂಜಿನ್ ಹೆಚ್ಚಾದಂತೆ ಅದರ ಶಕ್ತಿ ಮತ್ತು ವೇಗವು ಗಣನೀಯವಾಗಿ ಹೆಚ್ಚುತ್ತದೆ. ಹೀರೊ ಕಂಪನಿಯ ಈ ಬೈಕ್ ಹೆಚ್ಚಿನ ಮೈಲೇಜ್ ಅನ್ನು ಸಹ ಹೊಂದಿದೆ. ಹೀರೊ ಸ್ಪ್ಲೆಂಡರ್ ಪ್ಲಸ್ ಈ ಎಂಜಿನ್ ನೊಂದಿಗೆ 75 ರಿಂದ 80 ಕಿಲೋಮೀಟರ್ ಮೈಲೇಜ್ ನೀಡಬಹುವು.
ಹೀರೊ ಸ್ಪ್ಲೆಂಡರ್ 150 cc ಬೈಕ್ ನ ಬೆಲೆ
ಹೀರೊ ಸ್ಪ್ಲೆಂಡರ್ 150 cc ಬೈಕ್ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಎಬಿಎಸ್ ಸಿಸ್ಟಮ್ ಅಲ್ಲದೆ ಫ್ಯುಯಲ್ ಗೇಜ್, ಯು ಎಸ್ ಬಿ ಚಾರ್ಜಿಂಗ್ ಪೋರ್ಟ್, ಎಲ್ಇಡಿ, ಟೈಲ್ ಲೈಟ್, ಸ್ಟಾಂಡ್ ಇಂಡಿಕೇಟರ್, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಎಂಜಿನ್ ಆನ್ ಆಫ್ ಬಟನ್ ಅನ್ನು ನೀಡಲಾಗುವುದು. ಇದಲ್ಲದೆ ಈ ಬೈಕ್ ನಲ್ಲಿ ಹಲವು ವಿಶೇಷತೆಗಳನ್ನು ನೀಡಲಾಗುವುದು. ಈ ಹೊಸ ಹೀರೊ ಬೈಕ್ ನ ಬೆಲೆ ಸುಮಾರು 1 ಲಕ್ಷ ರೂಪಾಯಿ ಆಗಿರುತ್ತದೆ.