Hero Electric: ದೇಶದ ಅಗ್ಗದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಹೀರೋ, 230 ಕಿಲೋ ಮೀಟರ್ ಮೈಲೇಜ್.

Hero Electric Bike: ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ (Hero MotoCorp Company) ಕಂಪನಿಯ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚುತ್ತಿದ್ದು ಮಾರಾಟ ಕೂಡ ಹೆಚ್ಚಾಗಿವೆ. ಹೊಸ ಹೊಸ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಹೀರೋ ಕಂಪನಿ ತನ್ನ ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಹೀರೋ ಕಂಪನಿಯ ಸಾಕಷ್ಟು ಎಲೆಕ್ಟ್ರಿಕ್ ಬೈಕ್ ಗಳನ್ನೂ ಕೂಡ ಬಿಡುಗಡೆ ಮಾಡಿದೆ.

ಇನ್ನು ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿ   ಹೊಚ್ಚ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಇನ್ನಿತರ ಬೈಕ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

hero battery
Image Credit: News18

ಹೀರೋ ಎಲೆಕ್ಟ್ರಿಕ್ ಬೈಕ್ (Hero Electric Bike) 
ಕಂಪನಿಯು ಪ್ರಸ್ತುತ ವಿಡಾ ಸರಣಿಯನ್ನು ಹೊಂದಿದ್ದು, ಅದರ ಅಡಿಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಝೀರೋ ಮೋಟಾರ್‌ಸೈಕಲ್ಸ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಕಳೆದ ವರ್ಷ ಹೀರೋ ಶೀಘ್ರದಲ್ಲೇ ಜೀರೋ ಮೋಟಾರ್‌ಸೈಕಲ್‌ಗಳಲ್ಲಿ 491 ಕೋಟಿ ಹೂಡಿಕೆ ಮಾಡಲಿದೆ ಎಂದು ಘೋಷಿಸಲಾಗಿತ್ತು. ಹೀರೋ ಝೀರೋ ಬೈಕ್‌ಗಳ ಸಹಯೋಗದಲ್ಲಿ ಅತಿ ಶೀಘ್ರದಲ್ಲೇ ಹೀರೋ ಉತ್ತಮ ಎಲೆಕ್ಟ್ರಿಕ್ ಬೈಕ್ ಅನ್ನು ತಯಾರಿಸಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ನೂತನ ಹೀರೋ ಎಲೆಕ್ಟ್ರಿಕ್ ಬೈಕ್ 230 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್
ಕಳೆದ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ಹೀರೋ ಕಂಪನಿ ವಿಡಾ ಎಲೆಕ್ಟ್ರಿಕ್ ಸ್ಕೂಟರ್ (Hero Vida Electric Scooter) ಅನ್ನು ಪರಿಚಯಿಸಿದೆ. ಇನ್ನು ಮುಂದಿನ ವರ್ಷ ಈ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೀರೋ ವಿಡಾ ವಿ1 ಪ್ಲಸ್ ವೇರಿಯೆಂಟ್ 3 .44 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಹೀರೋ ವಿಡಾ ವಿ1 ಪ್ರೊ ವೇರಿಯೆಂಟ್ 3 .94 kWh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

hero vida 1
Image Credit: News18

ಹೆಚ್ಚಿನ ಮೈಲೇಜ್ ನೀಡಲಿದೆ ಹೀರೋ ವಿಡಾ
ಇನ್ನು ಒಂದೇ ಚಾರ್ಜ್ ನಲ್ಲಿ ಹೀರೋ ವಿಡಾ ವಿ1 ಪ್ಲಸ್ ವೇರಿಯೆಂಟ್ ಬೈಕ್ 143 km ಮೈಲೇಜ್ ನೀಡಲಿದ್ದು ಹೀರೋ ವಿಡಾ ವಿ1 ಪ್ರೊ ವೇರಿಯೆಂಟ್ 165 km ರೆಂಜ್ ನೀಡಲಿದೆ. ಟಚ್ ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್, ರಿವರ್ಸ್ ಮೋಡ್ ಸೇರಿದಂತೆ ಇನ್ನು ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಹೀರೋ ವಿಡಾ ವಿ1 ರೂಪಾಂತರಗಳು ಗ್ರಾಹಕರಿಗೆ ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್, ಗ್ಲೋಸ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group