Ads By Google

Hero Vida: 165 KM ಮೈಲೇಜ್ ಮತ್ತು ಬೆಲೆ ತುಂಬಾ ಕಡಿಮೆ, ಇತಿಹಾಸ ಸೃಷ್ಟಿಸಲು ಬರುತ್ತಿದೆ ಇನ್ನೊಂದು EV.

Hero Vida electric scooter will be launched in the market soon

Image Credit: giznext

Ads By Google

Hero Vida Electric Scooter: ಹೀರೋ ಮೋಟೊಕಾರ್ಪ್ (Hero) ಕಂಪನಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ. ಹೀರೋ ಕಂಪನಿಯ ಅನೇಕ ಬೈಕ್ ಗಳು ಹೊಸ ಹೊಸ ಮಾದರಿಯಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೀರೋ ಬೈಕ್ ಗಳ ಮೇಲಿನ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇನ್ನು ಹೀರೋ ಕಂಪನಿ ವಿಭಿನ್ನ ಮಾದರಿಯಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿವೆ. ಇದೀಗ ಹೀರೋ ಕಂಪನಿಯ ಇ- ಸ್ಕೂಟರ್ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

Image Credit: Bikewale

ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್
ಕಳೆದ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ಹೀರೋ ಕಂಪನಿ ವಿಡಾ ಎಲೆಕ್ಟ್ರಿಕ್ ಸ್ಕೂಟರ್ (Hero Vida Electric Scooter) ಅನ್ನು ಪರಿಚಯಿಸಿದೆ.

ಇನ್ನು ಮುಂದಿನ ವರ್ಷ ಈ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೀರೋ ಕಂಪನಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಇನ್ನು ಹೀರೋ ಕಂಪನಿ ಈ ಹೊಸ ಮಾದರಿಯ ಬೈಕ್ ನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

Image Credit: Carandbike

ಒಂದೇ ಚಾರ್ಜ್ ನಲ್ಲಿ 165 km ಮೈಲೇಜ್ ನೀಡುವ ಬೈಕ್
ಹೀರೋ ವಿಡಾ ವಿ1 ಪ್ಲಸ್ ವೇರಿಯೆಂಟ್ 3 .44 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಹೀರೋ ವಿಡಾ ವಿ1 ಪ್ರೊ ವೇರಿಯೆಂಟ್ 3 .94 kWh ಸ್ಮಾರ್ತ್ಯದ ಬ್ಯಾಟರಿಯನ್ನು ಹೊಂದಿದೆ.

ಇನ್ನು ಒಂದೇ ಚಾರ್ಜ್ ನಲ್ಲಿ ಹೀರೋ ವಿಡಾ ವಿ1 ಪ್ಲಸ್ ವೇರಿಯೆಂಟ್ ಬೈಕ್ 143 km ಮೈಲೇಜ್ ನೀಡಲಿದ್ದು ಹೀರೋ ವಿಡಾ ವಿ1 ಪ್ರೊ ವೇರಿಯೆಂಟ್ 165 km ರೆಂಜ್ ನೀಡಲಿದೆ.

ಹೀರೋ ವಿಡಾ ವಿ1 ರೂಪಾಂತರಗಳು
ಹೀರೋ ವಿಡಾ ವಿ1 ರೂಪಾಂತರಗಳಲ್ಲಿ ಮೂರು ರೈಡಿಂಗ್ ಮೋಡ್ ನ ಆಯ್ಕೆ ಲಭ್ಯವಾಗಲಿದೆ.ಹೀರೋ ವಿಡಾ ವಿ1 ಪ್ಲಸ್ ವೇರಿಯೆಂಟ್ 3 .4 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಹೊಂದಿದ್ದು, ಹೀರೋ ವಿಡಾ ವಿ1 ಪ್ರೊ ವೇರಿಯೆಂಟ್ 3 .2 ಸೆಕೆಂಡುಗಳಲ್ಲಿ 9 ರಿಂದ 40 kmph ಸ್ಪೀಡ್ ಅನ್ನು ನೀಡುತ್ತದೆ.

Image Credit: Abplive

ಹೀರೋ ವಿಡಾ ವಿ1 ವಿಶೇಷತೆ
ಹೀರೋ ವಿಡಾ ವಿ1 ಬೈಕ್ ಗಳು ಟಚ್ ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್, ರಿವರ್ಸ್ ಮೋಡ್ ಸೇರಿದಂತೆ ಇನ್ನು ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಹೀರೋ ವಿಡಾ ವಿ1 ರೂಪಾಂತರಗಳು ಗ್ರಾಹಕರಿಗೆ ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್, ಗ್ಲೋಸ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಲಾಭ್ಯವಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in