Hero Discount: ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಬಂಪರ್ ಆಫರ್, ಸ್ಕೂಟರ್ ಮೇಲೆ ಭರ್ಜರಿ 40000 ರೂ ಡಿಸ್ಕೌಂಟ್

ಭರ್ಜರಿ 143km ಮೈಲೇಜ್ ನೀಡಲಿದೆ ಈ ಸ್ಕೂಟರ್

Hero Vida V1 Plus And Vida V1 Pro Discount: ಭಾರತೀಯ ಮಾರುಕಟ್ಟೆಯಲ್ಲಿ ಹೀರೊ ಕಂಪನಿಯು ಅತ್ಯಾಕರ್ಷಕ ಫೀಚರ್ ನ ಬೈಕ್ ಹಾಗೂ ಸ್ಕೂಟರ್ ಗಳನ್ನೂ ಲಾಂಚ್ ಮಾಡುತ್ತಿದೆ. ಕಂಪನಿಯು ಇತ್ತೀಚಿಗೆ Electric ವಿಭಾಗದಲ್ಲಿ ಹೆಚ್ಚಿನ ಮೈಲೇಜ್, ಅಟ್ರಾಕ್ಟಿವ್ ಫೀಚರ್ ಹಾಗೆ ಬಜೆಟ್ ಬೆಲೆಯಲ್ಲಿ Scooter ಗಳನ್ನೂ ಲಾಂಚ್ ಮಾಡುತ್ತಿದೆ.

ಸದ್ಯ ಕಂಪನಿಯು ತನ್ನ ಈ ಎರಡು ಜನಪ್ರಿಯ Electric Scooter ಗಳ ಖರೀದಿಗೆ ಬಂಪರ್ ಡಿಸ್ಕೌಂಟ್ ಅನ್ನು ಘೋಷಿಸುವ ಮೂಲಕ ಸ್ಕೂಟರ್ ಖರೀದಿಸುವವರಿಗೆ ಒಂದೊಳ್ಳೆ ಆಫರ್ ನೀಡಿದೆ ಎನ್ನಬಹುದು. ಕಂಪನಿಯು ಯಾವ ಸ್ಕೂಟರ್ ಗಳ ಮೇಲೆ ರಿಯಾಯಿತಿ ಘೋಷಿಸಿದೆ…? ಹಾಗೂ ಎಷ್ಟು ರಿಯಾಯಿತಿ ಲಭ್ಯವಿದೆ…? ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.

Hero Vida V1 Plus
Image Credit: Bikewale

ಹೀರೊ ಈ ಸ್ಕೂಟರ್ ಗಳ ಮೇಲೆ ಭರ್ಜರಿ 40000 ಡಿಸ್ಕೌಂಟ್
Hero MotoCorp ನ ಎಲೆಕ್ಟ್ರಿಕ್ ಬ್ರ್ಯಾಂಡ್‌ ಗಳಾದ V1 Plus ಮತ್ತು V1 Pro ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ ಗಳ ಮೇಲೆ ಕಂಪನಿಯು ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಕಂಪನಿಯು ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ ಗಳ ಮೇಲೆ 40,000 ರೂಪಾಯಿಗಳವರೆಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಸ್ಕೂಟರ್‌ಗಳು ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿವೆ.

ಈ ಎರಡೂ ಸ್ಕೂಟರ್‌ ಗಳ ನೋಟ ಮತ್ತು ವಿನ್ಯಾಸವು ಬಾರ್ ಆಕರ್ಷಣೀಯವಾಗಿದೆ. ಇನ್ನು ಈ ರಿಯಾಯಿತಿಯ ಬಳಿಕ Hero Vida V1 Plus ಬೆಲೆ 1,02,700 ರೂ., Vida V1 Pro ಬೆಲೆ 1,30,200 ರೂ. ಆಗುವ ಸಾಧ್ಯತೆ ಇದೆ. ಈ ತಿಂಗಳು ನೀವು ಈ ಸ್ಕೂಟರ್ ಅನ್ನು ಪಡೆದರೆ ನೀವು 40,000 ರೂ.ವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಇದರ ಜೊತೆಗೆ 10,000 ಸಬ್ಸಿಡಿ ಪ್ರಯೋಜನವನ್ನು ಪಡೆಯಬಹುದು.

Hero Vida V1 Plus And Vida V1 Pro Discount
Image Credit: Rushlane

ಭರ್ಜರಿ 143km ಮೈಲೇಜ್ ನೀಡಲಿದೆ ಈ ಸ್ಕೂಟರ್
Vida V1 Plus 3.44 kWh ಬ್ಯಾಟರಿಯನ್ನು ಹೊಂದಿದೆ ಮತ್ತು V1 Pro 3.94 kWh ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ನೀವು ಈ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ನೀವು 143 ಕಿ.ಮೀ. ಮೈಲೇಜ್ ಅನ್ನು ಪಡೆಯಬಹುದು. ಈ ಸ್ಕೂಟರ್ ಕೇವಲ 3.4 ಸೆಕೆಂಡುಗಳಲ್ಲಿ ಪಿಕಪ್ ತೆಗೆದುಕೊಳ್ಳುತ್ತದೆ. ಈ ಎರಡೂ ರೂಪಾಂತರಗಳು 6 kW ವಿದ್ಯುತ್ ಮೋಟರ್ ಅನ್ನು ಹೊಂದಿವೆ. ಈ ಸ್ಕೂಟರ್‌ ನ ಮತ್ತೊಂದು ವೈಶಿಷ್ಟ್ಯವೆಂದರೆ ನೀವು ಅದರ ಬ್ಯಾಟರಿಯನ್ನು ತೆಗೆದು ಚಾರ್ಜ್ ಹಾಕಬಹುದಾಗಿದೆ. ಈ ಸ್ಕೂಟರ್ 7 ಇಂಚಿನ TFT ಸ್ಕ್ರೀನ್ ಹೊಂದಿದೆ. ಈ ಸ್ಕೂಟರ್ ಅನೇಕ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ.

Join Nadunudi News WhatsApp Group

Vida V1 Pro
Image Credit: Autox

Join Nadunudi News WhatsApp Group