Hero Scooter: ಕಾಲೇಜು ಯುವತಿಯರಿಗಾಗಿ ಅಗ್ಗದ ಬೆಲೆ ಸ್ಕೂಟರ್ ಲಾಂಚ್ ಮಾಡಿದ ಹೀರೋ, 45 Km ಮೈಲೇಜ್.
ಅಗ್ಗದ ಬೆಲೆಗೆ ಕಾಲೇಜು ಯುವತಿಯರಿಗಾಗಿ ಹೊಸ ಸ್ಕೂಟರ್ ಲಾಂಚ್ ಮಾಡಿದ ಹೀರೋ.
Hero Xoom Scooter 2023: ಸ್ಕೂಟರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲಾ ಜನರು ಸ್ಕೂಟರ್ ಓಡಿಸಲು ಇಷ್ಟಪಡುತ್ತಾರೆ ಎಂದು ಹೇಳಬಹುದು. ಅದೇ ರೀತಿಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ದೇಶದಲ್ಲಿ ಸಾಕಷ್ಟು ಹೊಸ ಹೊಸ ಮಾದರಿಯ ಸ್ಕೂಟರ್ ಗಳನ್ನ ಜಾರಿಗೆ ತರುವುದರ ಮೂಲಕ ಜನರನ್ನ ತನ್ನ ಸೆಳೆಯುವ ಕೆಲಸವನ್ನ ಮಾಡುತ್ತಿದೆ ಎಂದು ಹೇಳಬಹುದು.
ಸದ್ಯ ದೇಶದಲ್ಲಿ ಸ್ಕೂಟರ್ ಗಳನ್ನ ಹೆಚ್ಚು ಹೆಚ್ಚು ಯುವತಿಯರು ಖರೀದಿ ಮಾಡುತ್ತಿದ್ದಾರೆ ಮತ್ತು ಈ ಕಾರಣಗಳಿಂದ ದೇಶದಲ್ಲಿ ಪ್ರತಿಷ್ಠಿತ ವಾಹನ ತಯಾರಕ ಕಂಪನಿ ಹೀರೋ (Hero) ತನ್ನ ಹೊಸ ಸ್ಕೂಟರ್ ಅನ್ನು ಯುವತಿಯರಿಗಾಗಿ ಬಿಡುಗಡೆ ಮಾಡಿದೆ ಎಂದು ಹೇಳಬಹುದು.
ಆಕರ್ಷಕ ಲುಕ್ ಮತ್ತು ಗರಿಷ್ಟ ವೇಗ
ಹೌದು ಹೀರೋ ತನ್ನ ನೂತನ ಮಾಡೆಲ್ ಆದ Hero Xoom ಅನ್ನು ಮಾರುಕಟ್ಟೆಗೆ ಕಡಿಮೆ ಬೆಲೆಗೆ ಲಾಂಚ್ ಮಾಡಿದ್ದು ಯುವತಿಯರಿಗೆ ಈ ಸ್ಕೂಟರ್ ತುಂಬಾ ಇಷ್ಟವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಸ್ಕೂಟರ್ ನ ಆಕರ್ಷಕ ಲುಕ್ ಮತ್ತು ಕಲರ್ ಯುವತಿಯರಿಗೆ ಮಾತ್ರವಲ್ಲದೆ ಎಲ್ಲಾ ವರ್ಗದ ಜನರಿಗೂ ಇಷ್ಟವಾಗಲಿದೆ ಎಂದು ಹೇಳಬಹುದು. ಈ ಸ್ಕೂಟರ್ ಹೆಚ್ಚು ಮೈಲೇಜ್ ಕೊಡುವ ಕಾರಣ ಯುವಕರು ಹೆಚ್ಚು ಹೆಚ್ಚು ಬುಕ್ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
Hero Xoom ಸ್ಕೂಟರ್ ಬೆಲೆ ಮತ್ತು ಮೈಲೇಜ್
ದೇಶದಲ್ಲಿ ಲಾಂಚ್ ಆಗಿರುವ Hero Xoom ಸ್ಕೂಟರ್ ಕಾಲೇಜು ಯುವತಿಯರ ನೆಚ್ಚಿನ ಸ್ಕೂಟರ್ ಅನ್ನುವ ಸ್ಥಾನವನ್ನ ಪಡೆದುಕೊಂಡಿದೆ. 90 ಕಿಲೋ ಮೀಟರ್ ಗರಿಷ್ಟ ವೇಗವನ್ನ ಹೊಂದಿರುವ ಈ Hero Xoom ಹಲವು ಕಲರ್ ನಲ್ಲಿ ಲಭ್ಯವಿದ್ದು ದಿವಾಳಿಗೆ ಈ ಸ್ಕೂಟರ್ ಬುಕ್ ಮಾಡುವವರಿಗೆ ಕೆಲವು ಆಫರ್ ಗಳು ಕೂಡ ಲಭ್ಯವಿದೆ ಎಂದು ಹೇಳಬಹುದು.
ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, Hero Xoom ಸ್ಕೂಟರ್ ನ ಆರಂಭಿಕ ಬೆಲೆ 75 ಸಾವಿರ ಆಗಿದ್ದು ಹಲವು ಬ್ಯಾಂಕುಗಳು ಈ ಸ್ಕೂಟರ್ ಮೇಲೆ EMI ಆಫರ್ ಕೂಡ ನೀಡುತ್ತಿದೆ ಎಂದು ಹೇಳಬಹುದು. ಅದೇ ರೀತಿಯಲ್ಲಿ ಮೈಲೇಜ್ ವಿಷಯಕ್ಕೆ ಬರುವುದಾದರೆ, ಈ Hero Xoom ಸ್ಕೂಟರ್ ಪ್ರತಿ ಲೀಟರ್ ಗೆ ಸುಮಾರು 45 ಕಿಲೋಮೀಟರು ಮೈಲೇಜ್ ಕೊಡುತ್ತದೆ.
Hero Xoom ಸ್ಕೂಟರ್ ವಿಶೇಷತೆ
Hero Xoom ಸ್ಕೂಟರ್ ಒಂದು ಸ್ಮಾರ್ಟ್ ಸ್ಕೂಟರ್ ಆಗಿದ್ದು ಹಲವು ಸ್ಮಾರ್ಟ್ ವೈಶಿಷ್ಟ್ಯಗಳು ಇದೆ ಎಂದು ಹೇಳಬಹುದು. ಡಿಜಿಟಲ್ ಓಡೋಮೀಟರ್, ಡಿಜಿಟಲ್ ಇನ್ಸ್ಟ್ರುಮೆಂಟ್ಸ್, ಡಿಜಿಟಲ್ ಟ್ರಿಪ್ ಮೀಟರ್, ಅನಲಾಗ್ ಸ್ಪೀಡೋಮೀಟರ್, LED ಹೆಡ್ ಲೈಟ್, ಟರ್ನ್ ಇಂಡಿಕೇಟರ್ ಸೇರಿದಂತೆ ಹಲವು ವಿಶೇಷತೆ ಇರುವುದನ್ನ ನಾವು ಗಮನಿಸಬಹುದು.