Ads By Google

Xtreme 125R: ಕಾಲೇಜು ಯುವಕರಿಗಾಗಿ ಅಗ್ಗದ ಬೆಲೆಗೆ ಸ್ಪೋರ್ಟ್ ಬೈಕ್ ಲಾಂಚ್ ಮಾಡಿದ ಹೀರೋ, 66 Km ಮೈಲೇಜ್

Hero Xtreme 125R Bike Price and mileage

Image Credit: Original Source

Ads By Google

Hero Xtreme 125R Bike Launch In India: ದೇಶಿಯ ಮಾರುಕಟ್ಟೆಯಲ್ಲಿ Hero ಕಂಪನಿಯು ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಹಾಗೂ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸದ ಸಾಕಷ್ಟು ಬೈಕ್ ಗಳನ್ನೂ ಹೀರೋ ಪರಿಚಯಿಸಿದೆ.

ಇದೀಗ ಮಾರುಕಟ್ಟೆಯಲ್ಲಿ ನೂತನವಾಗಿ ಹೊಸ ಬೈಕ್ ಅನ್ನು ಲಾಂಚ್ ಮಾಡಿದೆ. ಇದೀಗ ಹೀರೋ ಹೊಸತಾಗಿ Xtreme 125R ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಮಾದರಿ 1 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಲಾಂಚ್ ಆಗಿರುವುದು ವಿಶೇಷವಾಗಿದೆ.

Image Credit: Timesnownews

ಸ್ಪೋರ್ಟಿ ವಿನ್ಯಾಸದೊಂದಿಗೆ ಭರ್ಜರಿಯಾಗಿ ರೆಡಿಯಾಗಿದೆ Xtreme 125R ಬೈಕ್
ಹೀರೋ ಕಂಪನಿಯು ಇದೀಗ ಹೊಸದಾಗಿ Xtreme 125R ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ಆಯ್ಕೆಯನ್ನು ನೀಡಿದೆ. ನೀವು ಮಾರುಕಟ್ಟೆಯಲ್ಲಿ Xtreme 125R ಬೈಕ್ ನ ಎರಡು ರೂಪಾಂತರಗಳನ್ನು ನೋಡಬಹುದು. ಮಾರುಕಟ್ಟೆಯಲ್ಲಿ Xtreme 125R ಬೈಕ್ ನ Integrated braking system ರೂಪಾಂತರವು ರೂ. 95,000 ಬೆಲೆಯನ್ನು ಹೊಂದಿದ್ದರೆ, Antilock braking system ರೂಪಾಂತರವು 99,500 ರೂ. ಎಕ್ಸ್ ಶೋರೂಮ್ ಬೆಲೆಯಲ್ಲಿ ಪರಿಚಯವಾಗಿದೆ.

ಭರ್ಜರಿ ಮೈಲೇಜ್ ನೀಡಲಿದೆ ಅಗ್ಗದ ಹೀರೋ ಬೈಕ್
ಹೀರೋ ಎಕ್ಸ್‌ ಟ್ರೀಮ್ 125ಆರ್ ಮೋಟಾರ್‌ ಸೈಕಲ್ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ ನಿಂದ ಚಾಲಿತವಾಗಿದ್ದು, ಪ್ರತಿ ಲೀಟರ್ ಗೆ ಬರೋಬ್ಬರಿ 66km ಮೈಲೇಜ್ ನೀಡುವುದರಲ್ಲಿ ಎರಡು ಮಾತಿಲ್ಲ. ಇದು 11.5 ಬಿಹೆಚ್‌ಪಿ ಪೀಕ್ ಪವರ್ ಮತ್ತು 10.5 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಸಹ ಆಯ್ಕೆಯಾಗಿ ಲಭ್ಯವಿದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಹೊಸ ಹೀರೋ ಎಕ್ಸ್‌ ಟ್ರೀಮ್ 125ಆರ್ ಮೋಟಾರ್‌ ಸೈಕಲ್ ಮುಂಭಾಗದ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಒಳಗೊಂಡಿದೆ.

Image Credit: Overdrive

ಬ್ರೇಕಿಂಗ್ ಸಿಸ್ಟಮ್‌ ನಲ್ಲಿ ರೂಪಾಂತರಗಳು ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಅಥವಾ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆಯಬಹುದು. ಜನಪರಿಯ ಬೈಕ್ ತಯಾರಕ ಕಂಪನಿಯಾದ ಹೀರೋ ತನ್ನ Xtreme 125R ಬೈಕ್ ಅನ್ನು ಲಾಂಚ್ ಮಾಡುವ ಮೂಲಕ ಹೊಸ ವಾರ್ಷದ್ಲಲಿ ಹೊಸ ಬೈಕ್ ಖರೀದಿಸುವವರಿಗೆ ಹೊಸ ಆಯ್ಕೆಯನ್ನು ನೀಡಿದೆ. ಸ್ಪೋರ್ಟಿ ಲುಕ್ ಹೊಂದಿರುವ ಈ ಬೈಕ್ ಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ ಎನ್ನಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in