Hero Xtreme: BMW ರೇಂಜ್ ನಲ್ಲಿ ಎಂಟ್ರಿ ಕೊಟ್ಟ ಹೀರೋ ಬೈಕ್, ಈ ಬೈಕ್ ಕಂಡು ಯುವಕರು ಫುಲ್ ಫಿದಾ.
ಹೀರೊ ಎಕ್ಸ್ ಟ್ರಿಮ್ 200S 4 ವಾಲ್ಟ್ ಬಿಡುಗಡೆ, ಇದರ ವಿಶೇಷತೆ ಏನು.
Hero Xtreme 200S 4V Price: ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಹಾವಳಿ ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಹೀರೊ ಮೋಟೋಕೋರ್ಪ್ ಕಂಪನಿ ಹೆಚ್ಚು ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹೀರೋ ಮೋಟೊಕಾರ್ಪ್ ಭಾರತದಲ್ಲಿ ಎಕ್ಸ್ ಟ್ರಿಮ್ 200S 4 ವಾಲ್ಟ್ ರೂಪಾಂತರವನ್ನು ಬಿಡುಗಡೆ ಮಾಡಿದೆ.
ಹೀರೊ ಎಕ್ಸ್ ಟ್ರಿಮ್ 200S 4 ವಾಲ್ಟ್
ಹೀರೊ ಎಕ್ಸ್ ಟ್ರಿಮ್ 160 R 4V ಯಶಸ್ವಿ ಬಿಡುಗಡೆಯ ನಂತರ ಹೀರೋ ಮೋಟೊಕಾರ್ಪ್ ಭಾರತದಲ್ಲಿ ಎಕ್ಸ್ ಟ್ರಿಮ್ 200S 4 ವಾಲ್ಟ್ ರೂಪಾಂತರವನ್ನು ಬಿಡುಗಡೆ ಮಾಡಿದೆ. ಹೊಸ 4 ವಾಲ್ಟ್ ಆವೃತ್ತಿಯು ಪ್ರಸ್ತುತ ಮಾರಾಟದಲ್ಲಿರುವ Xtreme 200S 2 – ವಾಲ್ಟ್ ಗಿಂದ ಸುಮಾರು 6,000 ರೊಪಾಯಿ ಹೆಚ್ಚು ದುಬಾರಿಯಾಗಿದೆ ಎನ್ನಲಾಗುತ್ತಿದೆ.
ಎಕ್ಸ್ ಟ್ರಿಮ್ 200S 4 ವಾಲ್ಟ್ ನ ಬೆಲೆ
ಎಕ್ಸ್ ಟ್ರಿಮ್ 200S 4 ವಾಲ್ಟ್ ನ ಬೆಲೆ 1.41 ಲಕ್ಷ ರೂಪಾಯಿ ಆಗಿದೆ. ಇದು ಪೂರ್ಣ ಫೆರ್ಡ್ ಮೋಟಾರ್ ಸೈಕಲ್ ನಲ್ಲಿ ಹೆಚ್ಚಿನ ಪವರ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಆದ್ದರಿಂದ ಇದರ ಬೆಲೆ ಹೆಚ್ಚಾಗಿದೆ. ಹೊಸ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಟರ್ನ್- ಬೈ ಟರ್ನ್ ನ್ಯಾವಿಗೇಶನ್, ಬ್ಲೂಟೂಥ್ ಸಂಪರ್ಕ, ಫೋನ್ ಮತ್ತು SMS ಎಚ್ಚರಿಕೆಗಳೊಂದಿಗೆ ಬರುತ್ತದೆ.
ಎಕ್ಸ್ ಟ್ರಿಮ್ 200S 4 ವಾಲ್ಟ್ ನ ವಿಶೇಷತೆ
ಈ ಮೋಟಾರ್ ಸೈಕಲ್ ಸ್ಪೋರ್ಟಿ ರೈಡಿಂಗ್ ಅನುಭವಕ್ಕಾಗಿ ಸೈಕಲ್ ಕ್ಲಿಪ್ ಅನ್ ಹ್ಯಾಂಡಲ್ ಬಾರ್ ಗಳನ್ನೂ ಸಹ ಪಡೆದಿದೆ. ಈ ಹೊಸ Hero Xtreme 200S 4V ಮೂ ಯಲ್ಲೋ ಪ್ಯಾಂಥರ್ ಬ್ಲಾಕ್ ಮೆಟಾಲಿಕ್ ಮತ್ತು ಸ್ಟೆಲ್ತ್ ಎಂಬ ಮೂರೂ ಬಣ್ಣಗಳಲ್ಲಿ ಲಭ್ಯವಿದೆ. ಎಕ್ಸ್ ಟ್ರಿಮ್ 200S 4 ವಾಲ್ಟ್ ಆಯಿಲ್ ಕೋಲ್ಡ್ ಎಂಜಿನ್ ನೊಂದಿಗೆ ಬರುತ್ತದೆ. ಇದು 2 ವಾಲ್ಟ್ ಗಿಂತ ಶೇಕಡಾ 6 ರಷ್ಟು ಹೆಚ್ಚಿನ ಪವರ್ ಮತ್ತು ಶೇಕಡಾ 5 ರಷ್ಟು ಹೆಚ್ಚುವರಿ ಟಾರ್ಕ್ ಅನ್ನು ನೀಡುತ್ತದೆ.
2023 ಹೀರೋ ಎಕ್ಸ್‌ಟ್ರೀಮ್ 200S 4V 199.6cc, 4-ವಾಲ್ವ್, ಆಯಿಲ್ ಕೂಲ್ಡ್ ಮೋಟಾರ್ ಹೀರೋನ XSense ತಂತ್ರಜ್ಞಾನವನ್ನು ಹೊಂದಿದೆ. ಈ ಎಂಜಿನ್ OBD2 ಮತ್ತು E20 ಕಂಪ್ಲೈಂಟ್ ಆಗಿದೆ. 8,000rpm ನಲ್ಲಿ 18.9bhp ಪವರ್ ಮತ್ತು 6500rpm ನಲ್ಲಿ 17.35Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೋಟಾರ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.