ಮಾರುಕಟ್ಟೆಗೆ ಬರಲಿದೆ ವಿಶ್ವದ ಅತೀ ಹೆಚ್ಚು ಮೈಲೇಜ್ ಕೊಡುವ ಕಾರ್, 1 ಕೆಜಿ ಇಂಧನದಲ್ಲಿ 260 ಕಿ.ಮೀ ಚಲಿಸಲಿದೆ ಈ ಕಾರ್.

ಕಾರ್ ಅಂದರೆ ಯಾರುತಾನೆ ಇಷ್ಟವಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ತಮಗಿಷ್ಟವಾದ ಕಾರನ್ನ ಖರೀದಿ ಮಾಡಬೇಕು ಅನ್ನುವ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಎಂದು ಹೇಳಬಹುದು. ಪ್ರಸ್ತುತ ದಿನಗಳಲ್ಲಿ ಏರಿಕೆ ಆಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನನೋಡಿ ಕಾರು ಮತ್ತು ಬೈಕ್ ಖರೀದಿ ಮಾಡುವ ಬಯಕೆಯನ್ನ ಜನರು ಮರೆತಿದ್ದಾರೆ ಎಂದು ಹೇಳಬಹುದು. ಇನ್ನು ರಸ್ತೆಯಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಹಾವಳಿ ಜಾಸ್ತಿಯಾಗಿದ್ದು ಜನರು ಹೆಚ್ಚುಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗಿರುವ ಈ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಜಾಸ್ತಿ ಆಗಿದ್ದು ಹಲವು ವಿಶೇಷತೆ ಹೊಂದಿರುವ ವಾಹನಗಳು ಮಾರುಕಟ್ಟೆಗೆ ಬಂದಿದೆ ಎಂದು ಹೇಳಬಹುದು.

ಇನ್ನು ಕಾರುಗಳನ್ನ ಖರೀದಿ ಮಾಡುವವರಿಗೆ ಈಗ ಬಂಪರ್ ಗುಡ್ ನ್ಯೂಸ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಒಂದು ಕೆಜಿ ಇಂಧನದಿಂದ ಬರೋಬ್ಬರಿ 260 ಕಿಲೋಮೀಟರ್ ಚಲಿಸುವ ಕಾರ್ ಮಾರುಕಟ್ಟೆಗೆ ಬಂದಿದ್ದು ಜನರು ಈ ಕಾರಿಗೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಹಾಗಾದರೆ ಈ ಕಾರ್ ಯಾವುದು ಮತ್ತು ಈ ಕಾರಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪರ್ಯಾಯ ಇಂಧನಗಳ ಬಗ್ಗೆ ಯೋಚಿಸುವಂತೆ ವಿಶ್ವವನ್ನು ಒತ್ತಾಯಿಸಿದೆ.

Hidrogen car

ಭಾರತ ಸೇರಿದಂತೆ ಹಲವು ದೇಶಗಳು ವಿದ್ಯುತ್ ವಾಹನಗಳ ಕಡೆಗೆ ವೇಗವಾಗಿ ಬದಲಾಗುತ್ತಿವೆ, ಆದರೆ ಜಪಾನ್‌ನಂತಹ ಕೆಲವು ದೇಶಗಳು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಲು ಆರಂಭಿಸಿವೆ. ಇತ್ತೀಚೆಗೆ ಜಪಾನಿನ ವಾಹನ ತಯಾರಕ ಟೊಯೋಟಾದ ಮಿರಾಯ್ (Toyota Mirai) ಕಾರು ಹೈಡ್ರೋಜನ್ ಇಂಧನದ ಮೇಲೆ ಅತಿಹೆಚ್ಚು ದೂರ ಕ್ರಮಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿದೆ, ನಂತರ ಇದು ಗಿನ್ನೆಸ್ ವಿಶ್ವ ದಾಖಲೆಯಲ್ಲೂ ಸ್ಥಾನ ಪಡೆಯಿತು. ಈ ಕಾರಿನ ಬಹುದೊಡ್ಡ ವೈಶಿಷ್ಟ್ಯವೆಂದರೆ ಒಮ್ಮೆ ಇಂಧನ ತುಂಬಿದ ಬಳಿಕ ಇದರಲ್ಲಿ ಸುಮಾರು 1360 ಕಿ.ಮೀ ಪ್ರಯಾಣವನ್ನು ಪೂರ್ಣಗೊಳಿಸಬಹುದು.

ಈ ಅವಧಿಯಲ್ಲಿ ಒಟ್ಟು 5.65 ಕೆಜಿ ಹೈಡ್ರೋಜನ್ ಬೇಕಾಗುತ್ತದೆ ಮತ್ತು ಇದರ ಪ್ರಕಾರ ಕಾರು ಪ್ರತಿ ಕೆಜಿಗೆ 260 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ವಾಸ್ತವವಾಗಿ ಹೈಡ್ರೋಜನ್ ಉತ್ಪಾದನೆಯು ತುಂಬಾ ದುಬಾರಿಯಾಗಿದೆ. ಈ ಹಣದುಬ್ಬರದ ಕಾರಣ ಇದು ಸರಿಯಾದ ಆಯ್ಕೆಯಾಗಿ ಕಾಣಲಿಲ್ಲ. ಆದರೆ ಹೊಸ ತಂತ್ರಜ್ಞಾನದ ಸಹಾಯದಿಂದ ಹೈಡ್ರೋಜನ್ ಉತ್ಪಾದನೆಯ ವೆಚ್ಚ ನಿರಂತರವಾಗಿ ಕಡಿಮೆಯಾಗುತ್ತಿದೆ. ಭಾರತದ ಅತಿದೊಡ್ಡ ಖಾಸಗಿ ವಲಯದ ಪೆಟ್ರೋಲಿಯಂ ಕಂಪನಿಯಾದ ರಿಲಯನ್ಸ್ ಪೆಟ್ರೋಲಿಯಂ ನ ಮಾಲೀಕ ಮುಖೇಶ್ ಅಂಬಾನಿ ಮುಂದಿನ ದಶಕದೊಳಗೆ ಹೈಡ್ರೋಜನ್ ಉತ್ಪಾದನೆಯ ವೆಚ್ಚ ಪ್ರತಿ ಕೆಜಿಗೆ ಒಂದು ಡಾಲರ್ ಮಟ್ಟಕ್ಕೆ ಬರಬಹುದು ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Join Nadunudi News WhatsApp Group

Hidrogen car

Join Nadunudi News WhatsApp Group