DL Rules: ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದ ಹೈಕೋರ್ಟ್, ಮಹತ್ವದ ತೀರ್ಪು ನೀಡಿದ ಹೈಕೋರ್ಟ್.

ಡ್ರೈವಿಂಗ್ ಲೈಸೆನ್ಸ್ ಕುರಿತಾಗಿ ನ್ಯಾಯಾಲಯ ಇನ್ನೊಂದು ತೀರ್ಪು ನೀಡಿದೆ.

DL Latest Update: ಸದ್ಯ ದೇಶದಲ್ಲಿ ವಾಹನ ಸವಾರರಿಗೆ DL ಮುಖ್ಯ ದಾಖಾಲೆಯಾಗಿದೆ. ರಸ್ತೆಯಲ್ಲಿ ಸಂಚರಿಸುತ್ತಿರುವವರು ಯಾವುದೇ ತಪ್ಪು ಮಾಡಿ ಸಿಕ್ಕಿಹಾಕಿಕೊಂಡರು ಕೂಡ ಮೊದಲು DL ಅನ್ನು ನೀಡಬೇಕಾಗುತ್ತದೆ. ಹೀಗಾಗಿ ವಾಹನ ಸವಾರರಿಗೆ DL ಅಷ್ಟು ಮುಖ್ಯವಾಗಿರುತ್ತದೆ. ಇತ್ತೀಚಿಗೆ Driving Licence ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಈಗಾಗಲೇ ಹೊರಬಿದ್ದಿದೆ.

ಸರ್ಕಾರದ ಹೊಸ ನಿಯಮದ ಅಡಿಯಲ್ಲಿ ಪ್ರತಿಯೊಬ್ಬರೂ DL ಅನ್ನು ಪಡೆದುಕೊಳ್ಳಬೇಕಿದೆ. ಇನ್ನು ಇದೀಗ ಕರ್ನಾಟಕ ಹೈಕೋರ್ಟ್ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದೆ ಎನ್ನಬಹುದು. ನ್ಯಾಯಾಲಯದಲ್ಲಿ DL ಕುರಿತಾಗಿ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.

High Court New Order
Image Credit: Karnatakajudiciary

ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದ ಹೈಕೋರ್ಟ್
ಸದ್ಯ DL ಹೊಂದಿಲ್ಲದೆ ಅಪಘಾತವಾದ ಪ್ರಕರಣವೊಂದು ಹೈಕೋರ್ಟ್ ನ ಮೆಟ್ಟಿಲೇರಿದೆ. ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. DL ಹೊಂದಿರದ ವ್ಯಕ್ತಿ ಅಪಘಾತದಲ್ಲಿ ಮೃತ ಪಟ್ಟರೆ ಆತನ ಅಪಘಾತವನ್ನು ನಿರ್ಲಕ್ಷಿಸಬಾರದು ಎಂದು ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ. ಇದರ ಜೊತೆಗೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡುವ ಅಪಘಾತದ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ.

ಅಪಘಾತದ ಪರಿಹಾರ ಮೊತ್ತವನ್ನು ಹೆಚ್ಚಿಸಿದ ಹೈಕೋರ್ಟ್
2017 ರ ನವೆಂಬರ್ 10 ರಂದು DL ಹೊಂದಿಲ್ಲದ ಬೈಕ್ ಸವಾರನೊಬ್ಬ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದು DL ಹೊಂದಿರದ ಕಾರಣ ಆತನ ಅಪಘಾತವನ್ನು ನಿರ್ಲಕ್ಷ ಮಾಡಲಾಗಿತ್ತು. ಈ ಹಿನ್ನಲೆ ಮೃತ ವ್ಯಕ್ತಿಯ ಕುಟುಂಬ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಪ್ರಕರಣ ತನಿಖೆ ನಡೆಸಿದ ಹೈಕೋರ್ಟ್ ಇದೀಗ ತೀರ್ಪನ್ನು ನೀಡಿದೆ.

DL Latest Update
Image Credit: Gizbot

ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯ ಬಳಿ DL ಇಲ್ಲದ ಮಾತ್ರಕ್ಕೆ ಆತನ ಸಾವನ್ನು ನಿರ್ಲಕ್ಷಿಸಬಾರದು ಹಾಗೆಯೆ ಮೃತ ಪಟ್ಟಿದ್ದ ದ್ವಿಚಕ್ರ ವಾಹನ ಸವಾರನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶಿಸಿದ್ದ ಪರಿಹಾರ ಮೊತ್ತವನ್ನು ಹೆಚ್ಚು ಮಾಡಲು ಘೋಷಿಸಿದೆ. ಮೋಟಾರು ವಾಹನ ಅಪಘಾತದ ಪರಿಹಾರ ಮೊತ್ತವನ್ನು 8.8 ಲಕ್ಷ ರೂ. ನಿಂದ 15.8 ಲಕ್ಷ ರೂ. ಗೆ ಹೆಚ್ಚಳ ಮಾಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group