High Court: ತಂದೆ ತಾಯಿಯನ್ನ ನೋಡಿಕೊಳ್ಳದ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ.
ತಂದೆ ತಾಯಿಯನ್ನು ವೃದಾಪ್ಯದಲ್ಲಿ ನೋಡಿಕೊಳ್ಳದ ಮಕ್ಕಳಿಗೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
High Court: ಇದೀಗ ಕರ್ನಾಟಕ ಹೈಕೋರ್ಟ್ ಹೊಸ ಆದೇಶವನ್ನು ಹೊರಡಿಸಿದೆ. ತಾಯಿಗೆ ಜೀವನಾಂಶವನ್ನು ನೀಡಲು ಸಾಧ್ಯವಿಲ್ಲವೆಂದ ಪುತ್ರರಿಗೆ ಕರ್ನಾಟಕ ಹೈಕೋರ್ಟ್ ತಪರಾಕಿ ನೀಡಿದೆ. ಪ್ರತಿ ತಿಂಗಳು ತಲಾ ಹತ್ತು ಸಾವಿರ ರೂಪಾಯಿ ಪಾವತಿಸುವಂತೆ ನಿರ್ದೇಶನ ನೀಡಿದೆ.
ಹೈಕೋರ್ಟ್ ಹೊಸ ಆದೇಶ
ಮೈಸೂರಿನ ನಿವಾಸಿಯಾದ 84 ವರ್ಷದ ವೆಂಕಟಮ್ಮ ಅವರು ಗಂಡು ಮಕ್ಕಳಿಂದ ದೂರವಾಗಿ ಪುತ್ರಿಯರ ಮನೆ ಸೇರಿದ್ದರು. ಜೀವನ ನಿರ್ವಹಣೆಗೆ ಇಬ್ಬರು ಪುತ್ರರಿಂದ ಜೀವನಾಂಶ ಕೊಡಿಸುವಂತೆ ಮೈಸೂರಿನ ವಿಭಾಗಾಧಿಕಾರಿಗಳನ್ನು ಕೋರಿದ್ದರು.
ಹಿರಿಯ ನಾಗರೀಕ ಜೀವನಾಂಶ ಹಾಗು ಕಲ್ಯಾಣ ಕಾಯ್ದೆಯಡಿ ತಲಾ 5 ಸಾವಿರ ಜೀವನಾಂಶ ಒದಗಿಸುವಂತೆ ವಿಭಾಗಾಧಿಕಾರಿ ನೀಡಿದ್ದ ಆದೇಶ ಮಾರ್ಪಡಿಸಿದ್ದ ಜಿಲ್ಲಾಧಿಕಾರಿಗಳು ತಲಾ 10 ಸಾವಿರ ರೂಪಾಯಿ ಜೀವನಾಂಶ ಒದಗಿಸುವಂತೆ ಪುತ್ರರಿಗೆ ಆದೇಶ ನೀಡಿದ್ದರು.
ಇದನ್ನು ಪ್ರಶ್ನಿಸಿ ಪುತ್ರರಾದ ಗೋಪಾಲ್, ಮಹೇಶ್ ಅವರು ಹೈಕೋರ್ಟ್ ಮಟ್ಟಿಲೇರಿದ್ದರು. ಹೆಣ್ಣುಮಕ್ಕಳ ಚಿತಾವಣೆ ಮೇರೆಗೆ ತಾಯಿ ನಮ್ಮ ಮನೆ ತೊರೆದಿದ್ದಾರೆ. ತಾಯಿಯನ್ನು ನಾವು ನೋಡಿಕೊಳ್ಳುತ್ತೇವೆ, ಜೀವನಾಂಶ ಪಾವತಿಸಲು ಸಾಧ್ಯವಿಲ್ಲವೆಂದು ಕೋರ್ಟ್ ಗೆ ತೆರಳಿದ್ದಾರೆ.
ತಂದೆ ತಾಯಿಯನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತವೇ ಇಲ್ಲ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಾ ಎಸ್. ದೀಕ್ಷಿತ್ ಪುರಾಣ ಉಪನಿಷತ್ ಗಳನ್ನೂ ಉಲ್ಲೇಖಿಸಿ ತಾಯಿಯನ್ನು ಸಲಹುವ ಕರ್ತವ್ಯ ಮಕ್ಕಳದ್ದೆಂದು ತೀರ್ಪು ನೀಡಿದ್ದಾರೆ.
ನಮ್ಮ ದೇಶದ ಕಾನೂನು, ಸಂಸ್ಕೃತಿ, ಧರ್ಮ, ಪರಂಪರೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪುತ್ರರ ಕರ್ತವ್ಯವೆಂದು ಹೇಳಿದೆ. ಇನ್ನು ವೃದ್ದಾಪ್ಯದಲ್ಲಿ ತಂದೆ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವುದು ಮಗನ ಕರ್ತವ್ಯ. ಬೃಹ್ಮಾಂಡ ಪುರಾಣದಲ್ಲಿ ವೃದ್ದಾಪ್ಯದಲ್ಲಿ ತಂದೆ ತಾಯಿಯರನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತವೇ ಇಲ್ಲವೆಂದು ಕೋರ್ಟ್ ನಲ್ಲಿ ಹೇಳಲಾಗಿದೆ.