Sustenance: ಮದುವೆಯಾಗದ ಯುವತಿಯರಿಗೆ ಪೋಷಕರಿಂದ ಜೀವನಾಂಶ ಸಿಗುತ್ತಾ…? ತೀರ್ಪು ನೀಡಿದ ಹೈಕೋರ್ಟ್

ಮದುವೆಯಾಗದ ಮಗಳು ಪೋಷಕರಿಂದ ಜೀವನಾಂಶ ಪಡೆಯಲು ಅರ್ಹಳೆ...? ತೀರ್ಪು ನೀಡಿದ ಹೈಕೋರ್ಟ್

Unmarried Women Sustenance Right: ಭಾರತೀಯ ಕಾನೂನಿನಲ್ಲಿ ಅನೇಕ ತಿದ್ದುಪಡಿಗಳಿವೆ. ಆಸ್ತಿ ಅರ್ಹತೆಯಿಂದ ಹಿಡಿದು ಜೀವನಾಂಶ ತೆಗೆದುಕೊಳ್ಳುವುದರ ಬಗ್ಗೆ ಕೂಡ ಕಾನೂನಿನಲ್ಲಿ ನಿಯಮಗಳಿವೆ. ಸದ್ಯ ಪೋಷಕರು ಮಗಳಿಗೆ ನೀಡಬೇಕಾದ ಜೀವನಾಂಶದ ಬಗ್ಗೆ ಹೈಕೋರ್ಟ್ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮದುವೆಯಾಗದ ಮಗಳು ಪೋಷಕರಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿದ್ದಾಳೆಯೇ..? ಅಥವಾ ಇಲ್ಲವೇ..? ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.

Unmarried Women Sustenance Right
Image Credit: stock

ಮದುವೆಯಾಗದ ಮಗಳು ಪೋಷಕರಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿದ್ದಾಳೆಯೇ..?
ಹೆಣ್ಣು ಮಕ್ಕಳಿಗೆ ಜೀವನಾಂಶವನ್ನು ನೀಡಬೇಕು ಎನ್ನುವ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೋರ್ವರು ಹೈಕೋರ್ಟ್ ನ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿ ಅಲಹಾಬಾದ್ ಹೈಕೋರ್ಟ್ ಹೆಣ್ಣು ಮಕ್ಕಳಿಗೆ ನೀಡುವ ಜೀವನಾಂಶದ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ.

“ಮದುವೆಯಾಗದ ಹೆಣ್ಣುಮಗಳು ಮುಸ್ಲಿಂ ಆಗಿರಲಿ, ಹಿಂದೂ ಆಗಿರಲಿ ಆಕೆಯ ವಯಸ್ಸು ಎಷ್ಟೇ ಆಗಿರಲಿ, ಆಕೆಗೆ ಜೀವನಾಂಶ ಪಡೆಯಲು ಹಕ್ಕು ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೀವನ ನಿರ್ವಹಣೆಯ ಹಕ್ಕಿನ ಪ್ರಶ್ನೆ ಇದ್ದಾಗ ಅನ್ವಯವಾಗುವ ಇತರ ಕಾನೂನುಗಳ ಬಗ್ಗೆಯೂ ಕೋರ್ಟ್ ಗಳು ಗಮನ ಹರಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗುತ್ತದೆ” ಎಂದು ಅಲಹಾಬಾದ್ ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

High Court New Verdict On Sustenance
Image Credit: Familylawyer

ಪ್ರಕರಣದ ಬಗ್ಗೆ ವಿವರ ಇಲ್ಲಿದೆ
ಶೇಕ್ ಅವರ ಮೂವರು ಹೆಣ್ಣುಮಕ್ಕಳು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಅಡಿಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ತಂದೆ ಮತ್ತು ಮಲತಾಯಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಮಧ್ಯಂತರ ಜೀವನಾಂಶವನ್ನು ಮೂವರು ಹೆಣ್ಣುಮಕ್ಕಳಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಶೇಖ್ ಅವರು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೆಣ್ಣು ಮಕ್ಕಳಿಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಅವರು ಹಣಕಾಸಿನ ವಿಚಾರವಾಗಲಿ ಸ್ವತಂತ್ರರಾಗಿದ್ದರೆ ಎಂದು ಹೇಳಿದ್ದರು.

ಆದರೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಜೀವನಾಂಶವನ್ನು ಕೋರಲು ಅರ್ಹರಲ್ಲ ಎನ್ನುವ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಧರ್ಮ ಯಾವುದೇ ಆಗಿರಲಿ, ವಯಸ್ಸು ಎಷ್ಟೇ ಆಗಿದ್ದರು ಮದುವೆ ಆಗದ ಹೆಣ್ಣುಮಗಳು ತನ್ನ ತಂದೆ ತಾಯಿಯಿಂದ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ 2005 ರ ಅಡಿಯಲ್ಲಿ ಜೀವನಾಂಶವನ್ನು ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

Join Nadunudi News WhatsApp Group

Join Nadunudi News WhatsApp Group