High Court Order: ಇನ್ನುಮುಂದೆ ಪತ್ನಿಗೆ ತಿಳಿಯದಂತೆ ಗಂಡ ಈ ಕೆಲಸ ಮಾಡುವಂತಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು.

ವಿಚ್ಛೇಧನ ವಿಷಯವಾಗಿ ಇನ್ನೊಂದು ತೀರ್ಪು ನೀಡಿದ ಕೋರ್ಟ್.

High Court Order Latest Update: ಸದ್ಯ ಭಾರತೀಯ ಕಾನೂನಿನಲ್ಲಿ ಅನೇಕ ನಿಯಮಗಳನ್ನು ರೂಪಿಸಲಾಗಿದೆ. ಅದರಲ್ಲೂ ಹೆಚ್ಚಾಗಿ ಕಾನೂನಿನಲ್ಲಿ ಮದುವೆಯ ವಿಚ್ಚೆಧನಕ್ಕೆ ಸಂಬಂಧಿಸಿದಂತೆ ವಿವಿಧ ನಿಯಮವನ್ನು ಅಳವಡಿಸಲಾಗಿದೆ.ಇತ್ತೀಚಿಗೆ ವಿಚ್ಚೆಧನಕ್ಕೆ ಸಂಬಂಧಿದಂತೆ ಅನೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದೆ. ಸದ್ಯ ಇದೀಗ ನ್ಯಾಯಾಲಯದಲ್ಲಿ ವಿಚ್ಚೆಧಾನಕ್ಕೆ ಸಂಬಂಧಿಸಿದಂತೆ ಹೊಸ ತಿದ್ದುಪಡಿಯನ್ನು ಪರಿಚಯಿಸಲಾಗಿದೆ. ಇದೀಗ ಕಾನೂನಿನ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.
High Court Order Latest Update
Image Credit: Livelaw
ಮದುವೆಯ ವಿಚ್ಛೇಧನಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ಆದೇಶ
ಸಾಮಾನ್ಯವಾಗಿ ಮದುವೆಯ ವಿಚ್ಛೇಧನ ಪಡೆಯುವ ಪ್ರತಿಯೊಬ್ಬರೂ ಕೂಡ ಕಾನೂನಿನ ನಿಯಮನುಸಾರ ವಿಚ್ಛೇಧನವನ್ನು ಪಡೆಯಬೇಕಾಗುತ್ತದೆ. ಕಾನೂನಿನ ನಿಯಮವನ್ನು ಮೀರಿ ಯಾರು ಕೂಡ ವಿಚ್ಛೇಧನವನ್ನು ಪಡೆಯುವಂತಿಲ್ಲ.
ಇನ್ನು ದಂಪತಿಗಳಿಗೆ ಕಾನೂನು ಹಲವು ನಿಯಮವನ್ನು ವಿಧಿಸಿರುತ್ತದೆ. ಪತಿ ಪತ್ನಿ ಇಬ್ಬರು ಕೂಡ ವೈಯಕ್ತಿಕ ಸ್ವತಂತ್ರ್ಯವನ್ನು ಹೊಂದಿರುತ್ತಾರೆ. ಪತಿ ಅಥವಾ ಪತ್ನಿಯ ವೈಯಕ್ತಿಕ ಹಕ್ಕುಗಳಿಗೆ ಯಾರು ಧಕ್ಕೆಯನ್ನುಟುಮಾಡಬಾರದು.
ಇನ್ನು ಕಾನೂನಿನಲ್ಲಿ ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿದಂತೆ ಅನೇಕ ನಿಯಮಗಳಿವೆ. ಯಾರೇ ಆಗಲಿ ಖಾಸಗಿತನದ ಹಕ್ಕಿನ ಉಲ್ಲಂಘನೆ ಮಾಡಿದರೆ ಅವರು ಕಾನೂನಿನ ಮೂಲಕ ಹೋರಾಟ ಮಾಡಬಹುದು. ಸದ್ಯ ಇದೆ ಕಾರಣಕ್ಕೆ ಪ್ರಕಾರಣವೊಂದು ಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಈ ಬಗ್ಗೆ ಕೋರ್ಟ್ ಮಹತ್ವದ ಆದೇಶ ಹೋರಡಿಸಿದೆ.
High Court Order for husband and wife
Image Credit: Newsnext
ಪತಿಯು ಪತ್ನಿಯ ಮೊಬೈಲ್ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಕಾನೂನು ಬಾಹಿರ
ಪತ್ನಿಯ ಮೊಬೈಲ್ ಫೋನ್ ಸಂಭಾಷಣೆಯನ್ನು ಆಕೆಯ ಅರಿವಿಲ್ಲದೆ ರೆಕಾರ್ಡ್ ಮಾಡುವುದು ಆರ್ಟಿಕಲ್ 21 ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ. ಪತಿ ತನ್ನ ಹೆಂಡತಿಯ ಫೋನ್ ಸಂಭಾಷಣೆಯನ್ನು ಆಕೆಗೆ ತಿಳಿಯದೆ ರೆಕಾರ್ಡ್ ಮಾಡುವುದು ಅವಳ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಅರ್ಜಿದಾರರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Join Nadunudi News WhatsApp Group