Senior Citizens Property Rights: ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ ಮತ್ತು ತಾಯಿಯನ್ನೇ ಆರೈಕೆ ಮಾಡದಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹಿರಿಯ ವಯಸ್ಸಿನಲ್ಲಿ ಮಕ್ಕಳಿಗೆ ಆಸ್ತಿ ದಾನ ಮಾಡಿ, ಮಕ್ಕಳು ಆರೈಕೆ ಮಾಡದಿದ್ದರೆ ಸೆಕ್ಷನ್ 23 ರಂತೆ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಬಹುದಾಗಿದೆ. ಅಪ್ಪ ಅಮ್ಮನ ಆಸ್ತಿಗೆ ಸಂಬಂಧಿಸಿದಂತೆ ಈಗ ಹೊಸ ನಿಯಮ ಜಾರಿಗೆ ತರಲಾಗಿದೆ.
ಹೈಕೋರ್ಟ್ ತೀರ್ಪಿನ ಹಿನ್ನೆಲೆ
2015 ರಲ್ಲಿ Daljeet Kaur ಅವರು ಶ್ರೀಮತಿ ವರಿಂದರ್ ಕೌರ್ (ಅಳಿಯ ಮತ್ತು ಮಗಳಿಗೆ) ಅವರಿಗೆ ದೆಹಲಿಯ ಜನಕಪುರಿಯಲ್ಲಿರುವ ಆಸ್ತಿಯನ್ನು ದಾನ ಮಾಡಿದರು. ಪ್ರೀತಿ ಮತ್ತು ಸ್ನೇಹ ಭಾವನೆಯಿಂದ ಗಿಫ್ಟ್ ಡೀಡ್ ಮಾಡಿದರು. ಆದರೆ ದಾನದ ನಂತರ ವರಿಂದರ್ ಅವರು Daljeet Kaur ಅವರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆಹಾರ, ಔಷಧಿ, ಮತ್ತು ಮೂಲಭೂತ ನೆರವು ನೀಡಲಿಲ್ಲ ಮತ್ತು ಬದಲಿಗೆ ಧಮಕಿಗಳು ಮತ್ತು ಕಿರುಕುಳ ನೀಡುತ್ತಾರೆ. ನಂತರ Daljeet ಅವರು ಅವರು 2007 ರ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ 23 ನೇ ವಿಭಾಗದಡಿ Tribunal ಗೆ ಅರ್ಜಿ ಸಲ್ಲಿಸುತ್ತಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಿಂಗಲ್ ಜಡ್ಜ್ ಈ ಆಸ್ತಿ ದಾನಪತ್ರ ರದ್ದುಗೊಳಿಸುವಿಕೆಯನ್ನು ಒಪ್ಪಿಕೊಳ್ಳುತ್ತಾರೆ.
ಯಾವ ಕಾಯ್ದೆ ಅಡಿಯಲ್ಲಿ ರದ್ದು ಮಾಡಲಾಯಿತು..?
2007 ರ Maintenance and Welfare of Parents and Senior Citizens Act, sec 23 (Fraudulent transfer of property) ಅಡಿಯಲ್ಲಿ ದಾನಪತ್ರವನ್ನು ರದ್ದುಗೊಳಿಸಬಹುದಾಗಿದೆ. ಹಿರಿಯ ನಾಗರಿಕರು ಆಸ್ತಿಯನ್ನು ಎಲ್ಲಿ ದಾನ ಅಥವಾ ಮಾರಾಟ ಮಾಡಿದ್ದಾರೋ ಮತ್ತು ಆ ಒಪ್ಪಂದದಲ್ಲಿ (ಲಿಖಿತ ಅಥವಾ ಮೌಖಿಕ) ನಿರ್ವಹಣೆಯ ಭರವಸೆ ಇದ್ದರೆ, ಆದರೆ ಮಗ / ಮಗಳು ಅಥವಾ ಸಂಬಂಧಿ ಆ ಭರವಸೆಯನ್ನು ಉಲ್ಲಂಘಿಸಿದರೆ ಆ ದಾನವನ್ನು ವಂಚನಾತ್ಮಕ (fraudulent) ಎಂದು ಪರಿಗಣಿಸಿ ರದ್ದುಗೊಳಿಸಬಹುದಾಗಿದೆ.
ದೆಹಲಿ ಹೈ ಕೋರ್ಟ್ ಪ್ರಕಾರ
* ಭಾರತೀಯ ಸಮಾಜದಲ್ಲಿ, ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವುದು ಎಂದಿಗೂ ಸಂಪೂರ್ಣ ಉಡುಗೊರೆಯಲ್ಲ, ಅದು ಯಾವಾಗಲೂ ಆರೈಕೆ, ಪ್ರೀತಿ ಮತ್ತು ನಿರ್ವಹಣೆಯ ನಿರೀಕ್ಷೆಯಿಂದ ತುಂಬಿರುತ್ತದೆ.
* ಉಡುಗೊರೆ ಪತ್ರವು ಕಾಗದದ ಮೇಲೆ ಷರತ್ತು ಆಗಿದ್ದರೂ ಕೂಡ ಅದನ್ನು ರದ್ದು ಮಾಡಬಹುದು.
* ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ವಿಫಲವಾದರೆ ಕಾನೂನಿನ ಮೇಲಿನ ವಂಚನೆಯಾಗುತ್ತದೆ (Sec 23) ಮತ್ತು ಹಿರಿಯ ನಾಗರಿಕರ ಆಯ್ಕೆಯ ಮೇರೆಗೆ ಉಡುಗೊರೆ ಪತ್ರವು ರದ್ದಾಗುತ್ತದೆ.
* ಅಂತಹ ವರ್ಗಾವಣೆಯನ್ನು ಅನೂರ್ಜಿತವೆಂದು ಘೋಷಿಸುವ ಅಧಿಕಾರ ನ್ಯಾಯಮಂಡಳಿಗೆ ಇದೆ – ಯಾವುದೇ ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಅಗತ್ಯವಿಲ್ಲ.
ದಾನಪತ್ರ ರದ್ದು ಮಾಡಲು ಬೇಕಾಗಿರುವ ದಾಖಲೆ
* ಗಿಫ್ಟ್ ಡೀಡ್ ಅಥವಾ ವಿಲ್ ಪ್ರತಿ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ವಯಸ್ಸಿನ ಪ್ರಮಾಣ ಪತ್ರ
* ಬ್ಯಾಂಕ್ ಸ್ಟೇಟ್ಮೆಂಟ್
* ವೈದ್ಯಕೀಯ ಬಿಲ್
ಎಲ್ಲಿ ದೂರು ಸಲ್ಲಿಸಬೇಕು…?
ನಿಮ್ಮ ಜಿಲ್ಲೆಯ Senior Citizens Tribunal ಗೆ ಭೇಟಿ ಕೊಟ್ಟಿ ದೂರು ಸಲ್ಲಿಸಬಹುದಾಗಿದೆ. ಅಥವಾ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ದೂರು ಕೊಟ್ಟ ನಂತರ ಮುಂದಿನ ಪ್ರಕ್ರಿಯೆ
ಅರ್ಜಿ ಮತ್ತು ದಾಖಲೆಗಳು ಸಲ್ಲಿಕೆ ಮಾಡಿದ 30 ದಿನಗಳಲ್ಲಿ ಎದುರಾಳಿಗೆ ನೋಟೀಸ್ ನೀಡಲಾಗುತ್ತದೆ. ತೀರ್ಪಿನ ಪ್ರಕಾರ ಆಸ್ತಿ ರದ್ದು ಮಾಡಿ ಮಾಸಿಕ ನಿರ್ವಹಣೆಗೆ ಆದೇಶ ಹೊರಡಿಸಲಾಗುತ್ತದೆ.
ಆಸ್ತಿ ದಾನ ಮಾಡುವ ಮುನ್ನ ಸಲಹೆಗಳು
* Registered Maintenance Agreement ಕಡ್ಡಾಯವಾಗಿ ಮಾಡಿ
* ಗಿಫ್ಟ್ ಡೀಡ್ ನಲ್ಲಿ “failure to maintain – automatic revocation” ಷರತ್ತು ಬರೆಸಿ
* ವಕೀಲರ ಮೂಲಕ Irrevocable Power of Attorney ತೆಗೆದುಕೊಳ್ಳಿ
* ಬ್ಯಾಂಕ್ ಖಾತೆಯಲ್ಲಿ Joint Account with Survivor Clause ಇರಿಸಿ
* ಕುಟುಂಬದ ಎಲ್ಲ ಸದಸ್ಯರೊಂದಿಗೆ Family Settlement Agreement ಮಾಡಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

