UPI ATM: ಇನ್ನುಮುಂದೆ ATM ಪಿನ್ ಮರೆತರೂ ಕೂಡ ಹಣ ತಗೆಯಬಹುದು, ಜಾರಿಗೆ ಬಂದಿದೆ ಹೊಸ ಯೋಜನೆ.

ಇನ್ನುಮುಂದೆ ಏಟಿಎಂ ಪಿನ್ ಬಳಸದೆ ಏಟಿಎಂ ಮೂಲಕ ಹಣ ಪಡೆಯಬಹುದು.

Hitachi Payment Services UPI ATM: ದೇಶದ ವಿವಿಧ Bank ಗಳು ಗ್ರಾಹಕರಿಗೆ ಅನುಕೂಲವಾಗಲಿ ಎಂದು ಸಾಕಷ್ಟು ಸೌಕರ್ಯಗಳನ್ನು ನೀಡುತ್ತದೆ. ದೇಶದ ಜನರು ಬಾಂಕುಗಳು ನೀಡುವ ಸೌಲಭ್ಯದಿಂದ ಹೆಚ್ಚಿನ ಉಪಯೋಗವೂ ಪಡೆಯುತ್ತಿದ್ದಾರೆ.

ಇನ್ನು ಎಲ್ಲ ಬ್ಯಾಂಕುಗಳು ಕೂಡ ತಮ್ಮ ಗ್ರಾಹಕರಿಗೆ Online Banking ವ್ಯವಸ್ಥೆಯನ್ನು ನೀಡುತ್ತದೆ.ಈ Online Banking ವ್ಯವಸ್ಥೆಯಿಂದ ಗ್ರಾಹಕರು ತಮ್ಮ ವಹಿವಾಟನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇನ್ನು ಇತ್ತೀಚಿಗೆ ದೇಶದಲ್ಲಿ UPI ಮೂಲಕ ಪಾವತಿ ಹೆಚ್ಚುತ್ತಿದೆ.

Hitachi payment services upi atm card
Image Credit: Siliconindia

ಇನ್ನುಮುಂದೆ ATM ಪಿನ್ ಮರೆತರೂ ಕೂಡ ಹಣ ತಗೆಯಬಹುದು
ದೇಶದಾದ್ಯಂತ ಜನರು UPI ಪಾವತಿಯನ್ನು ಅನುಸರಿಸುತ್ತಿದ್ದಾರೆ. ದಿನ ಕಳೆಯುತ್ತಿದ್ದಂತೆ UPI ಪಾವತಿ ಹೆಚ್ಚುತ್ತಲೇ ಇದೆ. ಇತ್ತೀಚೆಗಂತೂ UPI ನಲ್ಲಿ ವಿವಿಧ ಸೌಲಭ್ಯವನ್ನು ಪರಿಚಯಿಸುತ್ತಿವೆ. ಇನ್ನು ಬ್ಯಾಂಕುಗಳು ಗ್ರಾಹಕರಿಗೆ ATM Card ಸೌಲಭ್ಯವನ್ನು ನೀಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇದೀಗ ಬ್ಯಾಂಕುಗಳು ATM ವ್ಯವಸ್ಥೆಯಲ್ಲಿ ಇನ್ನಷ್ಟು ಅನುಕೂಲವಾಗಲು ಹೊಸ ಸೇವೆಯನ್ನು ಒದಗಿಸಿದೆ. ಇನ್ನುಮುಂದೆ ATM ಪಿನ್ ಮರೆತರೂ ಕೂಡ ಹಣ ತಗೆಯಬಹುದದಾ ವ್ಯವಸ್ಥೆ ನಿಮಗೆ ಲಭ್ಯವಾಗಲಿದೆ.

Hitachi Payment Services UPI ATM
ಇನ್ನುಮುಂದೆ Google Pay, Paytm, Phone Pe ಮೂಲಕ ನೀವು ATM Card ಇಲ್ಲದೆ ಹಣವನ್ನು ಪಡೆಯಬಹುದು. ಎಟಿಎಂ ನಲ್ಲಿ ಪ್ರದರ್ಶಿಸಲಾದ ಕ್ಯೂ ಆರ್ ಕೋಡ್ ಅನ್ನು ಸ್ಕಾನ್ ಮಾಡುವ ಮೂಲಕ ಗ್ರಾಹಕರು ಡೆಬಿಟಿ ಕಾರ್ಡ್ ಬಳಸದೆಯೇ ಹಣವನ್ನು ಪಡೆಯಬಹುದು. Hitachi Payment Services UPI ATM ಅನ್ನು ಪರಿಚಯಿಸಿದೆ. ಈ ಸಂಸ್ಥೆ NPCI ಸಹಯೋಗದೊಂದಿಗೆ UPI ATM ಕಾರ್ಡ್ ರಹಿತ ನಗದು ಹಿಂಪಡೆಯುವ ಯಂತ್ರವನ್ನು ಮಾಡಿದೆ.

UPI ATM latest update
Image Credit: Psuconnect

ಯುಪಿಐ ಬಳಸಿ 10000 ನಗದು ಪಡೆಯಬಹುದು
National Payments Corporation of India (NPCI) Interoperable Cardless Cash ಹಿಂಪಡೆಯುವಿಕೆಯ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ಸೇವೆಯನ್ನು ಪಡೆಯಲು ATM ಮಷಿನ್ UPI ವಿಥ್ ಡ್ರಾ ಸೇವೆಯ ಆಯ್ಕೆಯನ್ನು ಹೊಂದಿರಬೇಕು.

Join Nadunudi News WhatsApp Group

ಎಟಿಎಂ ಡಿಸ್ ಪ್ಲೇ ಮೇಲಿನ ವಿಥ್ ಡ್ರಾ ಕ್ಯಾಶ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ವಿಥ್ ಡ್ರಾ ಕ್ಯಾಶ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಯುಪಿಐ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ ಎರಡು ವಹಿವಾಟುಗಳನ್ನು ಮಾಡಲು ಮೂಲಕ ATM ಇಲ್ಲದೆ 10,000 ನಗದು ಪಡೆಯಬಹುದು.

Join Nadunudi News WhatsApp Group