Hitler Kalyana: ಅಂತರ ಹೆಸರಿನಲ್ಲಿ ಎಜೆ ಮನೆಗೆ ಬಂದವಳು ಯಾರು, ಇವಳಿಗೂ ಮತ್ತು ಅಂತರಳಿಗೂ ಏನು ಸಂಬಂಧ, ಬಿಗ್ ಟ್ವಿಸ್ಟ್.
ಹಿಟ್ಲರ್ ಕಲ್ಯಾಣ ಧಾರಾವಾಹಿ ಯಲ್ಲಿ ಬಿಗ್ ಟ್ವಿಸ್ಟ್, ಅಂತರ ಹೆಸರಿನಲ್ಲಿ ಮನೆಗೆ ಬಂದಿದ್ದು ಯಾರು.
Hitler Kalyana Serial Twist: ಜೀ ಕನ್ನಡ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ. ಮಿಸ್ಟರ್ ಫರ್ಫೆಕ್ಟ್ ಹುಡುಗನಿಗೆ ಎಡವಟ್ಟು ಹುಡುಗಿ ಜೋಡಿಯಾಗಿ ಬಂದು ಪ್ರೀತಿ ಉಂಟಾಗುವ ಈ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಗಳು ಎದುರಾಗುತ್ತಿದೆ.
ಧಾರಾವಾಹಿ ಆರಂಭದಲ್ಲಿ ಎಜೆ ತನ್ನ ಮೊದಲ ಹೆಂಡತಿ ಅಂತರಾಳ ನೆನಪಿನಲ್ಲಿಯೇ ಇರುತ್ತಾರೆ. ಅಂತರಾಳ ನೆನಪು ಹೋಗಲಿ ಎಂದು ಎಜೆ ತಾಯಿ ಮದುವೆ ಮಾಡಲು ನಿರ್ಧರಿಸುತ್ತಾರೆ. ನಂತರ ಎಜೆಯ ಮೂರು ಸೊಸೆಯಂದಿರು ತಮ್ಮ ಆಯ್ಕೆಯಲ್ಲಿ ಅತ್ತೆಯನ್ನು ಆರಿಸುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ಎಜೆ ಹಾಗೂ ಲೀಲಾ ಮದುವೆ ಆಗುತ್ತಾರೆ.
ಹಿಟ್ಲರ್ ಕಲ್ಯಾಣ ಧಾರಾವಾಹಿ
ಎಜೆ ಸೊಸೆಯಂದರಿಗೆ ಲೀಲಾ ಇಷ್ಟವಿರುದಿಲ್ಲ. ಲೀಲಾಳನ್ನು ಹೇಗಾದರೂ ಮಾಡಿ ಮನೆಯಿಂದ ಹೊರಹಾಕಬೇಕು ಎಂದು ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನು ಮದುವೆಯ ಸಮಯದಲ್ಲಿ ಎಜೆ ಹಾಗೂ ಲೀಲಾ ಕಚ್ಚಾಡುತ್ತಲೇ ಇರುತ್ತಾರೆ. ಇಬ್ಬರಿಗೂ ಪರಸ್ಪರ ಪ್ರೀತಿ ಹುಟ್ಟಿರುವುದಿಲ್ಲ. ಅಜೆ ಸೊಸೆಯಂದಿರು ಲೀಲಾ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ.
ಇನ್ನು ಕೊನೆಗೆ ಲೀಲಾಳಿಗೆ ಎಜೆ ಮೇಲೆ ಪ್ರೀತಿ ಆದ ಸಮಯದಲ್ಲಿ ಎಜೆಗೆ ಲೀಲಾ ಮೇಲೆ ಕೋಪ ಬಂದು ಅವಳ ತಾಳಿಯನ್ನು ತೆಗೆದು ಹೆಂಡತಿ ಸ್ಥಾನದಿಂದ ದೂರ ಮಾಡುತ್ತಾನೆ. ಇದಾದ ನಂತರ ಕೆಲವು ಕಾರಣದಿಂದ ಎಜೆ ಎರಡನೇ ಸೊಸೆ ಲೀಲಾಳನ್ನು ಇಷ್ಟಪಡುತ್ತಾಳೆ.
ಲೀಲಾ ಹಾಗೂ ಎಜೆಯನ್ನು ಒಂದು ಮಾಡಲು ಎಜೆ ಅಮ್ಮ ಲಕ್ಷ್ಮಿ ಮತ್ತು ವಿಶ್ವರೂಪ ಉಪಾಯ ಮಾಡುತ್ತಾರೆ. ನಂತರ ಎಜೆಗೆ ಲೀಲಾಳ ಮೇಲೆ ಪ್ರೀತಿಯಾಗಿ ಮರು ಮದುವೆಗೆ ಸಜ್ಜಾಗುತ್ತಾರೆ. ಮರು ಮದುವೆಯ ಸಮಯದಲ್ಲಿ ಎಜೆ ಲೀಲಾ ಬದುಕಿನಲ್ಲಿ ಅಂತರ ಬರುತ್ತಾಳೆ.
ಮದುವೆಯ ಸಮಯದಲ್ಲಿ ಅಂತರಾಳನ್ನು ನೋಡಿದ ಎಜೆ ಲೀಲಾಳಿಗೆ ತಾಳಿ ಕಟ್ಟುವುದಿಲ್ಲ. ಅಂತರಾಳನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಅಂತರಾಳನ್ನು ಮನೆಯವರು ಸುಲಭವಾಗಿ ಒಪ್ಪುತ್ತಾರೆ ಹಾಗೂ ಎಜೆ ಅಂತರ ಒಂದಾಗಲು ಲೀಲಾ ತನ್ನ ಪತಿಯನ್ನೇ ತ್ಯಾಗ ಮಾಡಲು ಮುಂದಾಗುತ್ತಾಳೆ.
ಎಜೆ ಲೀಲಾ ಬಾಳಲ್ಲಿ ಅಂತರ ವಿಲನ್
ಅಂತರ ಎಂಟ್ರಿ ಕೊಟ್ಟ ಮೊದಲು ಎಜೆ ಮನೆಯಲ್ಲಿ ಒಳ್ಳೆಯವಳಾಗಿಯೇ ಇರುತ್ತಾಳೆ. ಸಮಯ ಕಳೆದಂತೆ ಅಂತರ ಲೀಲಾ ಮತ್ತು ಎಜೆಯನ್ನು ಬೇರೆ ಮಾಡಲು ಶುರು ಮಾಡುತ್ತಾಳೆ. ಇನ್ನು ಲೀಲಾಳನ್ನು ಲಂಡನ್ ಗೆ ಕಳುಹಿಸುವ ಉಪಾಯವನ್ನು ಮಾಡುತ್ತಾಳೆ. ಆದರೆ ಲೀಲಾ ಲಂಡನ್ ಗೆ ಹೋಗುವುದಿಲ್ಲ. ಈ ಕಾರಣಕ್ಕೆ ಕೋಪಗೊಂಡು ಅಂತರ ಲೀಲಾಳ ಮೇಲೆ ಕಿಡಿಕಾರುತ್ತಾಳೆ. ಆದರೆ ಇದೀಗ ಧಾರಾವಾಹಿಯಲ್ಲಿ ನಂಬಲಾರದ ಟ್ವಿಸ್ಟ್ ಎದುರಾಗಿದೆ.
ಪ್ರಾರ್ಥನಾ ಹೆಸರಿನವಳು ಇದೀಗ ಅಂತರಾಳ ಹೆಸರಿನಲ್ಲಿ ಮನೆಗೆ ಸೇರಿದ್ದಾಳೆ. ಎಜೆ ಪತ್ನಿ ಅಂತರ ಅಸ್ತಿತ್ವವನ್ನು ಅಡಿಪಾಯ ಮಾಡಿಕೊಂಡಿದ್ದಾಳೆ. ಇನ್ನು ಅಂತರ ಏನಾಗಿರಬಹುದು ಎನ್ನುವ ಬಗ್ಗೆ ವೀಕ್ಷಕರು ಕುತೂಹಲರಾಗಿದ್ದಾರೆ. ಎಜೆ ಅಂತರಾಳನ್ನು ದೂರ ಮಾಡಿದ ಪ್ರಾರ್ಥನಾ ಲೀಲಾಳನ್ನು ದೂರ ಮಾಡುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.