AJ And Leela: ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದೊಡ್ಡ ತಿರುವು, ಕಠಿಣ ನಿರ್ಧಾರ ತಗೆದುಕೊಂಡ ಲೀಲಾ.
ಮನೆಗೆ ಬಂದ ದುರ್ಗಾಳಿಗೆ ತಿರುಗೇಟು ಕೊಟ್ಟು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಕೊಟ್ಟ ಲೀಲಾ.
Hitler Kalyana Leela: ಜೀ ಕನ್ನಡ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ. ಮಿಸ್ಟರ್ ಫರ್ಫೆಕ್ಟ್ ಹುಡುಗನಿಗೆ ಎಡವಟ್ಟು ಹುಡುಗಿ ಜೋಡಿಯಾಗಿ ಬಂದು ಪ್ರೀತಿ ಉಂಟಾಗುವ ಈ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಗಳು ಎದುರಾಗುತ್ತಿದೆ. ಇನ್ನು ಹಲವು ದಿನಗಳ ಬಳಿಕ ಎಜೆಗೆ ಲೀಲಾಳ ಮೇಲೆ ಪ್ರೀತಿಯಾಗಿ ಮರು ಮದುವೆಗೆ ಸಜ್ಜಾಗುತ್ತಾರೆ.
ಮರು ಮದುವೆಯ ಸಮಯದಲ್ಲಿ ಎಜೆ ಲೀಲಾ ಬದುಕಿನಲ್ಲಿ ಅಂತರ ಬರುತ್ತಾಳೆ. ಅಂತರ ಎಂಟ್ರಿ ಕೊಟ್ಟ ಮೊದಲು ಎಜೆ ಮನೆಯಲ್ಲಿ ಒಳ್ಳೆಯವಳಾಗಿಯೇ ಇರುತ್ತಾಳೆ. ಸಮಯ ಕಳೆದಂತೆ ಅಂತರ ಲೀಲಾ ಮತ್ತು ಎಜೆಯನ್ನು ಬೇರೆ ಮಾಡಲು ಶುರು ಮಾಡುತ್ತಾಳೆ. ಎಜೆ ಪತ್ನಿ ಅಂತರ ಅಸ್ತಿತ್ವವನ್ನು ಅಡಿಪಾಯ ಮಾಡಿಕೊಂಡು ಅಂತರ ಹೆಸರಿನಲ್ಲಿ ಪ್ರಾರ್ಥನಾ ಮನೆ ಸೇರಿಕೊಂಡಿರುತ್ತಾಳೆ.
ದುರ್ಗಾ ಪ್ಲಾನ್ ಉಲ್ಟಾ ಹೊಡೆದಿದೆ
ಪ್ರಾರ್ಥನಾಳನ್ನೇ ಎಜೆ ಮನೆಯವರು ಅಂತರ ಎಂದು ನಂಬಿರುತ್ತಾರೆ. ಎಜೆ ಕೂಡ ಅಂತರ ಎಂದೇ ಅವಳ ಜೊತೆ ಇರುತ್ತಾರೆ. ಆದರೆ ಎಜೆ ಸೊಸೆಯಾಗಿರುವ ದುರ್ಗಾ ಲೀಲಾಳನ್ನು ಮನೆಯಿಂದ ಹೊರ ಹಾಕಲು ನಕಲಿ ಅಂತರಾಳನ್ನು ಮನೆಗೆ ಸೇರಿಸಿಕೊಂಡಿರುತ್ತಾಳೆ. ದುರ್ಗಾ ಅಂತರಾಳನ್ನು ಮನೆಗೆ ಕರೆದುಕೊಂಡು ಬಂದಿರುವ ವಿಷಯ ಯಾರಿಗೂ ತಿಳಿದುರುವುದಿಲ್ಲ. ಆದರೆ ಇದೀಗ ದುರ್ಗಾ ಪ್ಲ್ಯಾನ್ ಉಲ್ಟಾ ಹೊಡೆಯುತ್ತಿದೆ. ಅಂತರ ದುರ್ಗಾಳಿಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ.
ಎಜೆ ಮನೆಯನ್ನು ಬಿಟ್ಟು ಹೋದ ಲೀಲಾ
ಇನ್ನು ದುರ್ಗಾ, ಸರಸ್ವತಿ ಅಂತರ ಲೀಲಾಳನ್ನು ಮನೆಯಿಂದ ಹೊರ ಹಾಕಲು ಉಪಾಯ ಮಾಡಿ ಅದರಲ್ಲಿ ಯಶಸ್ಸು ಸಾದಿಸಿದ್ದಾಳೆ ಎಂದು ಹೇಳಬಹುದು. ಇನ್ನು ಪ್ರಾರ್ಥನಾ ಎಜೆಯ ಅಷ್ಟು ಆಸ್ತಿಯನ್ನು ಹೊಡೆಯುವ ಪ್ಲ್ಯಾನ್ ಮಾಡಿರುವ ಬಗ್ಗೆ ದುರ್ಗಾಳಿಗೆ ತಿಳಿಯುತ್ತದೆ. ದುರ್ಗಾಳಿಗೆ ಈಗ ತನ್ನ ತಪ್ಪಿನ ಅರಿವಾಗುತ್ತಿದೆ. ಆದರೆ ಎಜೆ ಮತ್ತು ಅಂತರ ನಡುವೆ ನಾನು ಬರಬಾರದು ಎಂದು ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ದುರ್ಗಾಳಿಗೆ ಒಪ್ಪಿಸಿ ಮನೆ ಬಿಟ್ಟು ತವರು ಮನೆ ಸೇರಿಕೊಂಡಿದ್ದಾಳೆ. ಇನೊಂದೆಡೆ ಲೀಲಾಳ ಅಮ್ಮನಿಗೆ ಹಣ ಕೊಟ್ಟ ಅಂತರ, ಲೀಲಾಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಂತೆ ಹೇಳುತ್ತಾಳೆ.
ಲೀಲಾಳ ಕಾಲಿಗೆ ಬಿದ್ದ ದುರ್ಗಾ
ಎಜೆ ಮನೆಯನ್ನು ಅಂತರ ಹೆಸರಿನ ಪ್ರಾರ್ಥನಾ ಒಡೆಯುತ್ತಾಳೆ ಎನ್ನುವ ಬಗ್ಗೆ ದುರ್ಗಾ ಭಯಪಡುತ್ತಿರುತ್ತಾಳೆ. ಇತ್ತ ಲೀಲಾ ಕೂಡ ಮನೆಯನ್ನು ತೊರೆದು ಹೋಗಿರುವುದು ಮನೆಯ ಎಲ್ಲರಿಗೂ ಬೇಸರ ಮೂಡಿಸಿದೆ. ಇನ್ನು ಅಂತರಾಳನ್ನು ಮನೆಯಿಂದ ಓಡಿಸಲು ಲೀಲಾಳನ್ನು ಕರೆದುಕೊಂಡು ಬರಬೇಕು ಎಂದು ದುರ್ಗಾ ಲೀಲಾ ಮನೆಗೆ ಹೋಗಿದ್ದಾಳೆ. ಅಲ್ಲಿ ಲೀಲಾ ಅಮ್ಮ ದುರ್ಗಾಳನ್ನು ಮನೆಗೆ ಸೇರಿಸುವುದಿಲ್ಲ.
ಕೊನೆಗೆ ಚಳಿಯಲ್ಲಿ ಹೊರಗೆ ನಿಂತ ದುರ್ಗಾಳನ್ನು ನೋಡಿ ಲೀಲಾ ಮನೆಯ ಒಳಗೆ ಕರೆಯುತ್ತಾಳೆ. ಈ ವೇಳೆ ಲೀಲಾ ಬಳಿ ತಾನು ಮಾಡಿದ ತಪ್ಪಿನ ಬಗ್ಗೆ ದುರ್ಗಾ ಹೇಳಿಕೊಂಡು ಅಳುತ್ತಾಳೆ. ಅಂತರ ಕೈಯಿಂದ ಎಜೆ ಮನೆಯನ್ನು ಉಳಿಸಿಕೊಡು, ನಮ್ಮ ಮನೆಗೆ ಬಾ ಎಂದು ದುರ್ಗಾ ಅಂತರ ಕಾಲಿಗೆ ಬೀಳುತ್ತಾಳೆ. ಇನ್ನು ದುರ್ಗಾ ಮಾತನ್ನು ನಂಬಿ ಲೀಲಾ ಎಜೆ ಮನೆಗೆ ವಾಪಸ್ಸಾಗುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.